ಮಡಿಕೇರಿ ಫೆ. 18 NEWS DESK : ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ನಗರದ ಚೈನ್ ಗೇಟ್ ಬಳಿ ಅಳವಡಿಸಿರುವ ಮಾಹಿತಿ ಫಲಕವನ್ನು ರೋಟರಿ ಜಿಲ್ಲಾ ಗವನ೯ರ್ ಹೆಚ್.ಆರ್.ಕೇಶವ್ ಅನಾವರಣಗೊಳಿಸಿದರು. ಮೊಬೈಲ್ ಗಮನಿಸುತ್ತಾ ಸಂಚರಿಸಬೇಡಿ, ಅಪಾಯಕ್ಕೆ ಆಸ್ಪದ ಮಾಡಬೇಡಿ , ಮಂಜು ಮುಸುಕಿದ ರಸ್ತೆಯಲ್ಲಿ ಸಂಚರಿಸುವಾಗ ಎಚ್ಚರವಿರಲಿ, ಮುಂದಿನ ವಾಹನವನ್ನು ಹಿಂದೆ ಹಾಕುವ ಸಂದಭ೯ ಹುಷಾರಾಗಿರಿ ಎಂಬ ಎಚ್ಚರಿಕೆಯ ಸಂದೇಶವುಳ್ಳ ಫಲಕವು ಉತ್ತಮ ಜಾಗ್ರತಿ ಸಂದೇಶವಾಗಿದೆ ಎಂದು ಕೇಶವ್ ಶ್ಲಾಘಿಸಿದರು. ಈ ಸಂದಭ೯ ನಗರಸಭೆಯ ಅಧ್ಯಕ್ಷೆ ಅನಿತಾ ಪೂವಯ್ಯ, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಕಾಯ೯ದಶಿ೯ ರತ್ನಾಕರ್ ರೈ, ಸಹಾಯಕ ಗವನ೯ರ್ ದೇವಣಿರ ತಿಲಕ್, ವಲಯ ಸೇನಾನಿ ಎಸ್ . ಎಸ್.ಸಂಪತ್ ಕುಮಾರ್ , ಪ್ರಮುಖರಾದ ಬಿ.ಜಿ. ಅನಂತಶಯನ, ಅನಿಲ್ ಎಚ್.ಟಿ. ಬಿ.ಕೆ.ರವೀಂದ್ರರೈ, ಪ್ರಸಾದ್ ಗೌಡ ಸೇರಿದಂತೆ ಮಿಸ್ಟಿ ಹಿಲ್ಸ್ ನಿದೇ೯ಶಕರು ಹಾಜರಿದ್ದರು,










