ಮಡಿಕೇರಿ ಫೆ.22 NEWS DESK : ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ನಲ್ಲಿ ನೋಂದಣಿಯಾಗಿರುವ ಫುಟ್ಬಾಲ್ ಕ್ಲಬ್ ಗಳ ಪದಾಧಿಕಾರಿಗಳ ಸಭೆ ಫೆ.24 ರಂದು ನಡೆಯಲಿದೆ.
ಅಮ್ಮತ್ತಿಯ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಕಚೇರಿಯಲ್ಲಿ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ ಎಂದು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಪಿ.ಎ.ನಾಗೇಶ್ (ಪಂದಿಕಂಡ) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ 2023-24ನೇ ಸಾಲಿನ ಲೀಗ್ ಪಂದ್ಯಾವಳಿಯ ಮಾಹಿತಿ ನೀಡಲು ಎಲ್ಲಾ ಕ್ಲಬ್ ಗಳ ಪದಾಧಿಕಾರಿಗಳ ಸಭೆಯನ್ನು ಕರೆದಿದ್ದು, ಎಲ್ಲಾ ಕ್ಲಬ್ ಗಳಿಂದ ಅಧ್ಯಕ್ಷ ಅಥವಾ ವ್ಯವಸ್ಥಾಪಕರು ಕಡ್ಡಾಯವಾಗಿ ಪಾಲ್ಗೊಳ್ಳಬೇಕೆಂದು ಪಿ.ಎ.ನಾಗೇಶ್ ತಿಳಿಸಿದ್ದಾರೆ.








