ಸೋಮವಾರಪೇಟೆ ಫೆ.22 NEWS DESK : ಸೋಮವಾರಪೇಟೆ ತಾಲ್ಲೂಕಿನ ಯಡವನಾಡು ಗ್ರಾಮದಲ್ಲಿ ಕಾಡಾನೆಗಳು ದಾಳಿ ಮಾಡಿದ್ದು, ಫಸಲು ನಷ್ಟವಾಗಿದೆ. ತೋಟಗಳಿಗೂ ಹಾನಿಯಾಗಿದ್ದು, ಅರಣ್ಯ ಇಲಾಖೆ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕಾಫಿ, ಮೆಣಸು, ಭತ್ತ, ಹಲಸು, ಜೋಳ, ಫಸಲಿಗೆ ಬಂದಿದ್ದ ಗೆಣಸು, ಪಪ್ಪಾಯ, ಬಾಳೆ ಗಿಡಗಳು ಸಂಪೂರ್ಣ ನಾಶವಾಗಿದೆ. ಕಾಡಾನೆ ದಾಳಿ ಕುರಿತು ಹಲವು ವರ್ಷಗಳಿಂದ ಇಲಾಖೆಗೆ ಮನವಿ ನೀಡುತ್ತಾ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕೃಷಿಕರು ಆರೋಪಿಸಿದ್ದಾರೆ. ಆನೆ ಹಾವಳಿ ತಡೆಗೆ ಶಾಶ್ವತ ಪರಿಹಾರ ಸೂಚಿಸಬೇಕೆಂದು ಬೆಳೆ ನಷ್ಟಕ್ಕೊಳಗಾಗಿರುವ ಕೃಷಿಕರಾದ ಯು.ಪಿ.ರಾಜು, ನಂದಕುಮಾರ್, ಜಯಂತ್ ಮತ್ತಿತರರು ಒತ್ತಾಯಿಸಿದ್ದಾರೆ.











