ಪೋರಬಂದರ್ ಫೆ.28 NEWS DESK : ಭಾರತೀಯ ನೌಕಾಪಡೆ ಎನ್‌ಸಿಬಿಯೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ದೋಣಿಯಲ್ಲಿ ಸಾಗಾಟವಾಗುತ್ತಿದ್ದ ಸುಮಾರು 3,300 ಕೆ.ಜಿ ಮಾದಕ ವಸ್ತುವನ್ನು ವಶಕ್ಕೆ ಪಡೆದಿದೆ. ಇತ್ತೀಚಿನ ದಿನಗಳಲ್ಲಿ ವಶಪಡಿಸಿಕೊಂಡ ಅತಿ ಹೆಚ್ಚಿನ ಪ್ರಮಾಣದ ಮಾದಕವಸ್ತು ಇದಾಗಿದೆ ಎಂದು ನೌಕಾಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.
ಗುಜರಾತ್ ಕರಾವಳಿಯಲ್ಲಿ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇರಾನ್ ದೋಣಿಯಲ್ಲಿದ್ದ ಐವರು ವಿದೇಶಿಗರನ್ನು ಬಂಧಿಸಲಾಗಿದೆ ಎಂದು ಎನ್‌ಸಿಬಿ ಬುಧವಾರ ತಿಳಿಸಿದೆ.
ನೌಕಾಪಡೆ, ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಜಂಟಿಯಾಗಿ ಇಂಟರ್‌ನ್ಯಾಷನಲ್ ಮ್ಯಾರಿಟೈಮ್ ಬೌಂಡರಿ ಲೈನ್ ಉದ್ದಕ್ಕೂ ಅರಬ್ಬಿ ಸಮುದ್ರದಲ್ಲಿ ಕಾರ್ಯಾಚರಣೆಯನ್ನು ಕೈಗೊಂಡಿವೆ.
ವಶಪಡಿಸಿಕೊAಡ ಮಾದಕವಸ್ತುವಿನಲ್ಲಿ ಚರಸ್, ಮೆಥಾಂಫೆಟಮೈನ್ ಮತ್ತು ಮಾರ್ಫಿನ್ ಇದೆ ಎಂದು ಶಂಕಿಸಲಾಗಿದೆ. ಬಂಧಿತ ಐವರನ್ನು ಇರಾನ್ ಅಥವಾ ಪಾಕಿಸ್ತಾನಿ ಪ್ರಜೆಗಳೆಂದು ಶಂಕಿಸಲಾಗಿದೆ.










