ಮಡಿಕೇರಿ ಮಾ.2 : ಅಲ್ ಅಮೀನ್ ಕೊಡಗು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಮಾ.3ರಂದು ಸುಂಟಿಕೊಪ್ಪದ ಎಸ್ ಎಸ್ ಇಂಟರ್ ನ್ಯಾಷನಲ್ ಕನ್ವೆನ್ಷನ್ ಹಾಲ್ ನಲ್ಲಿ 10 ಜೋಡಿ ಮುಸ್ಲಿಂ ಬಡ ಕನ್ಯೆಯರ ಸಾಮೂಹಿಕ ವಿವಾಹ ಸಮಾರಂಭ ನಡೆಯಲಿದೆ.
ಸಂಸ್ಥೆಯ ಮಹಾಪೋಷಕ, ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ ಮಾಸ್ಟರ್ ಅವರ ಅಧ್ಯಕ್ಷತೆಯಲ್ಲಿ ಪೂರ್ವಾಹ್ನ 11ಗಂಟೆಗೆ ನಡೆಯಲಿರುವ ಸಮಾರಂಭವನ್ನು ಸೈಯದ್ ಕೆ .ಎಸ್. ಮುಕ್ತಾರ್ ತಂಙಳ್ ಕುಂಬೋಲ್ ಅವರು ಉದ್ಘಾಟಿಸಲಿದ್ದಾರೆ. ಜಿಲ್ಲೆಯ ಉಪ ಖಾಝಿ ಎಂ.ಎಂ. ಅಬ್ದುಲ್ಲ ಫೈಝಿ, ಸುಂಟಿಕೊಪ್ಪದ ಸುನ್ನಿ ಮುಸ್ಲಿಂ ಜಮಾಅತ್ ನ ಮುದರ್ರಿಸ್ ಉಸ್ಮಾನ್ ಫೈಝಿ, ಪೆರುಂಬಾಡಿಯ ಸಂಸುಲ್ ಉಲಮಾ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ಬಶೀರ್ ಹಾಜಿ, ಕುಶಾಲನಗರದ ದಾರುಲ್ ಉಲೂಂ ಮದರಸ ಸಂಸ್ಥೆಯ ಪ್ರಾಂಶುಪಾಲ ತಮ್ಲೀಕ್ ದಾರಿಮಿ, ಸುಂಟಿಕೊಪ್ಪದ ಎಸ್ ಎಸ್ ಹಾಲ್ ಮಾಲೀಕ ಎಂ.ಎಂ.ಸಾಹಿರ್, ಗದ್ದೆ ಹಳ್ಳ ಮಸೀದಿಯ ಧರ್ಮಗುರು ಉಸಾಮಾ ಸಖಾಫಿ, ಕೊಡಗರಹಳ್ಳಿಯ ಬಾಪು ಹಾಜಿ ಮುಂತಾದವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಅಲ್ ಅಮೀನ್ ಸಂಸ್ಥೆಯ ಪ್ರಕಟಣೆ ತಿಳಿಸಿದೆ.









