ನಾಪೋಕ್ಲು ಮಾ.9 NEWS DESK : ಬೊಟ್ಟೊಳ೦ಡ ಕುಟುಂಬಸ್ಥರು ಆಯೋಜಿಸಿರುವ ಕೊಡವ ಕುಟುಂಬಗಳ ನಡುವಿನ ಹಗ್ಗ ಜಗ್ಗಾಟ ಸ್ಪರ್ಧೆಯು ಏ.18 ರಿಂದ 21ರವರೆಗೆ ಜೂನಿಯರ್ ಕಾಲೇಜ್ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಕ್ರೀಡಾ ಸಮಿತಿಯ ಅಧ್ಯಕ್ಷ ಬೊಟ್ಟೋಳಂಡ ಗಣೇಶ್ ಹೇಳಿದರು.
ಶ್ರೀ ಭಗವತಿ ದೇವಾಲಯದ ಸಭಾಂಗಣದಲ್ಲಿ ಆಯೋಜಿಸಿದ ಕ್ರೀಡಾ ಸಮಿತಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಗಣೇಶ್, ಸಾರ್ವಜನಿಕರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕವಾದ ಸ್ಪರ್ಧೆಗಳಿದ್ದು, ಇದೀಗಾಗಲೇ ಹಲವು ಕುಟುಂಬಗಳು ನೊಂದಾವಣಿ ಮಾಡಿಕೊಂಡಿದೆ.
ಬಾಕಿ ಉಳಿದ ಕುಟುಂಬಗಳು ಮಾ.15 ರ ಹೆಸರು ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಿದರು.
ಈ ಸಂದರ್ಭ ಸ್ಪರ್ಧಾ ಕಾರ್ಯಕ್ರಮದ ಬಗ್ಗೆ ಚರ್ಚಿಸಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು. ಸಭೆಯಲ್ಲಿ ಸಂಚಾಲಕ ಮಿಟ್ಟು ಪೂಣಚ್ಚ, ಸದಸ್ಯರಾದ ರವಿ ಕರಂಬಯ್ಯ ,ಮದನ್, ಮೊಣ್ಣಪ್ಪ, ರಂಜಿ, ಆರ್ಯನ್, ಸುಜು ಹಾಗೂ ಕುಟುಂಬಸ್ಥರು ಹಾಜರಿದ್ದರು.
ವರದಿ : ದುಗ್ಗಳ ಸದಾನಂದ.







