ಮಡಿಕೇರಿ ಮಾ.11 NEWS DESK : ಮೈಸೂರು- ಬೆಂಗಳೂರು ಎಕ್ಸ್ ಪ್ರೆಸ್ ಹೈವೆಯಲ್ಲಿ 1200 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ಫುಡ್ ಪಾರ್ಕ್, ಸ್ಕೈ ವಾಕ್ ಹಾಗೂ ಮೈಸೂರು – ನಂಜನಗೂಡು ನಡುವಿನ ಹೆದ್ದಾರಿಯ 6 ಪಥ ಮೇಲ್ದರ್ಜೆ ಕಾಮಗಾರಿಗೆ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಅವರು ಶಂಕುಸ್ಥಾಪನೆ ನೆರವೇರಿಸಿ ಮೈಸೂರು- ಹುಣಸೂರು ರಸ್ತೆ, ತಿ. ನರಸೀಪುರ ರಸ್ತೆಯನ್ನು ಉದ್ಘಾಟಿಸಿದರು. ಮೈಸೂರಿನ ‘ರಾಯಲ್ ಇನ್’ ಹೋಟೆಲ್ ಬಳಿ ಕೆಆರ್ ಎಸ್ ರಸ್ತೆ ಮತ್ತು ರಸ್ತೆ ಹಳಿ ದಾಟಲು ಫ್ಲೈ ಓವರ್ ನಿರ್ಮಾಣಕ್ಕೆ LC-5 ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ರೂ 62.30 ಕೋಟಿ ಬಿಡುಗಡೆ. ಮೈಸೂರು ವಿವಿ ಕ್ರಾಫರ್ಡ್ ಬಳಿ ರೈಲ್ವೆ ಅಂಡರ್ ಪಾಸ್ ನಿರ್ಮಾಣಕ್ಕೆ ಐಅ-1 ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ರೂ.45.35 ಕೋಟಿ ಬಿಡುಗಡೆ. ಹುಣಸೂರು ಬೈಪಾಸ್ ಅನ್ನು 4 ಲೇನ್ ಮಾಡಲು ಹಾಗೂ ಲಕ್ಷ್ಮಣತೀರ್ಥ ನದಿಗೆ ಕಟ್ಟಲಾಗಿರುವ ಸೇತುವೆ ಶಿಥಿಲಗೊಂಡಿರುವುದರಿಂದ ಹೊಸ ಸೇತುವೆ ನಿರ್ಮಾಣ ಮಾಡಲು ರೂ 86 ಕೋಟಿ ಬಿಡುಗಡೆಯಾಗಿದೆ ಎಂದು ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಇದೇ ಸಂದರ್ಭ ತಿಳಿಸಿದರು.










