ಮಡಿಕೇರಿ ಮಾ.12 NEWS DESK : ಕೊಡಗು ಜಿಲ್ಲೆಯ ಮೀನುಗಾರಿಕೆ ಇಲಾಖೆ ವತಿಯಿಂದ 2023-24 ನೇ ಸಾಲಿನಿಂದ ಪ್ರಧಾನಮಂತ್ರಿ ಮತ್ಸ್ಯ ಸಂಪದ (ಪಿಎಂಎಂಎಸ್‍ವೈ) ಯೋಜನೆಯಡಿ ಸ್ಥಳೀಯವಾಗಿ ಮೀನು ಸೇವನೆಯನ್ನು ಪ್ರೊತ್ಸಾಹಿಸಲು ಪರಿಸರ ಸ್ನೇಹಿ ಸುಸಜ್ಜಿತ ಕಿಯೋಸ್ಕ್ ಅಳವಡಿಸಲಾದ “ಮತ್ಸ್ಯವಾಹಿನಿ” ಯೋಜನೆಯ ಇ-ತ್ರಿಚಕ್ರ ವಾಹನಗಳಲ್ಲಿ ತಾಜಾ ಮೀನು ಮತ್ತು ಮೀನು ಉತ್ಪನ್ನಗಳ ಮಾರಾಟಕ್ಕಾಗಿ ವಾಹನಗಳನ್ನು ಪರವಾನಗಿ ಆಧಾರದಲ್ಲಿ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಸಾಮಾನ್ಯ ವರ್ಗದ:02, ಪ.ಜಾತಿ/ಪ.ಪಂಗಡ:01 ಮತ್ತು ಮಹಿಳೆ:01 ಮೀನು ಮಾರಾಟಗಾರರು ಅರ್ಜಿ ಸಲ್ಲಿಸಲು ಮಾರ್ಚ್, 25 ಕೊನೆಯ ದಿನವಾಗಿದೆ. ಸಾಮಾನ್ಯ ವರ್ಗದ ಪರವಾನಗಿದಾರರಿಗೆ ಪ್ರಾರಂಭಿಕ ಭದ್ರತಾ ಠೇವಣಿ ರೂ. 1 ಲಕ್ಷ ಮತ್ತು ಪ.ಜಾತಿ/ಪ.ಪಂಗಡ/ಮಹಿಳಾ ಪರವಾನಗಿದಾರರಿಗೆ ಪ್ರಾರಂಭಿಕ ಭದ್ರತಾ ಠೇವಣಿ ರೂ. 50 ಸಾವಿರಗಳನ್ನು ನಿಗಧಿಪಡಿಸಲಾಗಿದೆ ಎಂದು ಮೀನುಗಾರಿಕೆ ಇಲಾಖೆಯ ಪ್ರಕಟಣೆ ತಿಳಿಸಿದೆ.









