ಕುಶಾಲನಗರ ಮಾ.12 NEWS DESK : ಕುಶಾಲನಗರ ವಾಸವಿ ಯುವತಿಯರ ಸಂಘದ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಕುಶಾಲನಗರ ವಾಸವಿ ಮಹಲ್ ಹಿಂಬದಿ ಸಭಾಂಗಣದಲ್ಲಿ ಸಂಘದ ಅಧ್ಯಕ್ಷೆ ಕವಿತಾ ಪ್ರವೀಣ್ ಅಧ್ಯಕ್ಷತೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಜೇಸಿ ಮೈಸೂರು ವಲಯ ಅಧ್ಯಕ್ಷೆ ಆಶಾ ಜೈನ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಹಿಳೆಯರಿಗೆ ಹಿತವಚನ ನುಡಿದರು.
ಇದೇ ಸಂದರ್ಭ ಅಂತರರಾಷ್ಟ್ರೀಯ ಸ್ಕೇಟಿಂಗ್ ಕ್ರೀಡಾಪಟು ಕಲ್ಪನಾ ಕುಟ್ಟಪ್ಪ, ಆಶಾ ಕಾರ್ಯಕರ್ತೆಯರಾದ ರಾಧಾವತಿ, ಮೀನಾಕ್ಷಿ, ರೂಪ, ಸರಸ್ವತಿ ಅವರುಗಳನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಸಂಘದ ಕಾರ್ಯದರ್ಶಿ ಸ್ನೇಹ ನಿತಿನ್, ಮಹಿಳಾ ಮಂಡಳಿ ಅಧ್ಯಕ್ಷೆ ಲಕ್ಷ್ಮಿ ಶ್ರೀನಿವಾಸ್ ,ಆರ್ಯವೈಶ್ಯ ಸಮಾಜದ ಬಿ ಎಲ್ ಸತ್ಯನಾರಾಯಣ, ವಾಸವಿ ಯುವಜನ ಸಂಘದ ಅಧ್ಯಕ್ಷರಾದ ಪ್ರವೀಣ್, ವಾಸವಿ ಬಾಲಕಿಯರ ಸಂಘದ ಅಧ್ಯಕ್ಷ ಸ್ಪೂರ್ತಿ ಮತ್ತಿತರರು ಇದ್ದರು.









