ಮಡಿಕೇರಿ ಮಾ.12 NEWS DESK : ಭಾರತೀಯ ಜನತಾ ಪಾರ್ಟಿಯ ಯುವ ಮೋರ್ಚಾದ ಸೋಮವಾರಪೇಟೆ ಮಂಡಲದ ನೂತನ ಪ್ರಧಾನ ಕಾರ್ಯದರ್ಶಿಗಳಾಗಿ ಪದ್ಮನಾಭ ನೆಲ್ಲಿಹುದಿಕೇರಿ ಹಾಗೂ ಪ್ರಸಿದ್ಧ್ ಚಂಗಪ್ಪ ತಾಕೇರಿ ಆಯ್ಕೆಯಾಗಿದ್ದಾರೆ ಎಂದು ಸೋಮವಾರಪೇಟೆ ಯುವ ಮೋರ್ಚಾದ ಅಧ್ಯಕ್ಷ ಮೋಹಿತ್ ತಿಮ್ಮಯ್ಯ ತಿಳಿಸಿದ್ದಾರೆ.
ಪಕ್ಷ ಸಂಘಟನೆಯ ದೃಷ್ಟಿಯಿಂದ ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಮಹೇಶ್ ತಿಮ್ಮಯ್ಯ ಹಾಗೂ ಸೋಮವಾರಪೇಟೆ ಮಂಡಲದ ಅಧ್ಯಕ್ಷ ಗೌತಮ್ ಗೌಡ ಅವರ ಅನುಮೋದನೆ ಮೇರೆಗೆ ಇವರಿಬ್ಬರನ್ನು ಪ್ರಧಾನ ಕಾರ್ಯದರ್ಶಿಗಳನ್ನಾಗಿ ಆಯ್ಕೆ ಮಾಡಿರುವುದಾಗಿ ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.









