ಮಡಿಕೇರಿ ಮಾ.21 NEWS DESK : ವಾಟ್ಸಪ್ಪ್‍ನಲ್ಲಿ ಬಂದ ಒಂದು ಸಂದೇಶ À vote for BJP & re-elect your old Congress M.L.A. ಈ ಸಂದೇಶವನ್ನು ಓದುವಾಗ ಮತ್ತು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‍ನ 55 ಕಾರ್ಪೋರೇಟರ್ ಗಳು ಬಿಜೆಪಿ ಸೇರ್ಪಡೆ ಕಾಂಗ್ರೆಸ್‍ಗೇ ಬಾರಿ ಮುಖಭಂಗ ಎಂದು ಸುದ್ದಿವಾಹಿನಿಯಲ್ಲಿ ಸುದ್ದಿಯೊಂದು ಪ್ರಸಾರವಾದದ್ದನ್ನು ಕೇಳಿದಾಗ ಮನಸಲ್ಲಿ ಮೂಡುವ ಪ್ರಶ್ನೆ. ನಾವು ಎಂತ ಕಾಲಗಟ್ಟದಲ್ಲಿ ಇದ್ದೇವೆ. ನಮ್ಮ ರಾಜಕೀಯ ಪಕ್ಷಗಳ ಅಧೋಗತಿ ತೋರಿಸುತ್ತದೆ. ಇಲ್ಲಿ ಮೂಡುವ ಪ್ರಶ್ನೆ ಏನೆಂದರೆ ಹಡಗೊಂದು ಮುಳುಗುತ್ತದೆ ಎಂದಾಗ ಎಲ್ಲರೂ ಪ್ರಾಣ ಉಳಿಸಿ ಕೊಳ್ಳುವ ಪ್ರಯತ್ನ ಸರ್ವೇ ಸಾಮಾನ್ಯ. ಇನೊಂದು ಚುನಾವಣೆ ಬಂದಾಗ ಈ ಹಡಗನ್ನು ಬಿಡುವುದಿಲ್ಲ ಎಂಬ ಗ್ಯಾರಂಟಿ ಏನು ಅಂತ ಇಲ್ಲಿ ಚುನಾವಣೆಯ ಸಮಯದಲ್ಲಿ ಪಕ್ಷಗಳು ಸರ್ವೇ ಸಾಧಾರಣವಾಗಿ ಒಂದು ಪಕ್ಷದಲ್ಲಿ ಟಿಕೆಟ್ ಸಿಗದಿದ್ದರೆ ಇನೊಂದು ಪಕ್ಷಕ್ಕೆ ಹಾರುವುದು ಅಥವಾ ಗೆಲ್ಲುವ ಅಭ್ಯರ್ಥಿಗಳನ್ನು ಸೆಳೆಯುವುದು ರಾಜಕೀಯದಲ್ಲಿ ಒಂದು ರೀತಿಯ ಪ್ರಕ್ರಿಯೇ ಇದು ಪ್ರಜಾಪ್ರಭುತ್ವದ ರಾಜಕೀಯದ ಚದುರಂಗದಾಟದಲ್ಲಿ ಎಲ್ಲಾ ಪಕ್ಷಗಳು ನಡೆಸುವ ದೊಂಬರಾಟ.
ಮೇಲಿನ ವಾಕ್ಯವನ್ನು ಚೆನ್ನಾಗಿ ಅರ್ಥ ಮಾಡಿಕೊಂಡರೆ ಇಂದು ರಾಜಕೀಯ ಎತ್ತ ಸಾಗುತ್ತಿದೆ. ಬೇಕಿತ್ತ ಭಾರತಿಯ ಜನತಾ ಪಕ್ಷಕ್ಕೆ ಈ ರೀತಿಯ ರಾಜಕೀಯ, ಒಂದು ಶಿಸ್ತು ಬದ್ದ ಪಕ್ಷವೆಂದು ಹೆಸರು ಮಾಡಿದ ಸಂಘ ಪರಿವಾರ ಹಿಡಿತದಲ್ಲಿ ಇದ್ದರು ಇಂದು ಆ ಪಕ್ಷದ ಅಜೆಂಡಾ ಒಂದೇ ಅಧಿಕಾರಕ್ಕೆ ಬರುವುದು ಅಂದು ಅಟಲ್ ಬಿಹಾರಿ ವಾಜಪೇಯಿ ಅಂತ ನಾಯಕರು ಅಧಿಕಾರಕ್ಕೆ ಭಿಕ್ಷೆ ಬೇಡಲಿಲ್ಲ ಎಂದೂ ಅಧಿಕಾರಕ್ಕಾಗಿ ತನ್ನ ತನವನ್ನು ಬಿಡಲಿಲ್ಲ. ಲೋಕಸಭೆಯಲ್ಲಿ ಬಹುಮತ ಸಾಬೀತು ಪಡಿಸಲು ಬೇಕಾಗಿದ್ದ ಒಂದೇ ಒಂದು ಮತವನ್ನು ಪಡೆಯಲು ಕುದುರೆ ವ್ಯಾಪಾರ ಮಾಡಲಿಲ್ಲ. ಅಂದು ಅವರು ಮನಸು ಮಾಡಿದ್ರೆ ಅಧಿಕಾರ ಉಳಿಸಿಕೊಳ್ಳುವುದು ಕಷ್ಟಕರವಾಗಿರಲಿಲ್ಲ. ಅಂದು ಲೋಕಸಭೆಯಲ್ಲಿ ಮಾಡಿದ ಭಾಷಣಕ್ಕೆ ಇಡಿ ವಿಶ್ವವೇ ತಲೆದೂಗಿದರೆ ಬಹುತೇಕ ಭಾರತಿಯರು ಕಣ್ಣೀರಿಟ್ಟರು. ಅಂದು ಯಾವ ಕಾಂಗ್ರೆಸ್ ಪಕ್ಷ ಅವರನ್ನು ಅವಮಾನ ಮಾಡಿತೋ ಅದೇ ಪಕ್ಷಕ್ಕೆ ಸವಾಲ್ ಹಾಕಿ ನಿಮ್ಮನ್ನು ಸರ್ವನಾಶ ಮಾಡುತೇನೆ ಎಂದು ರಾಜೀನಾಮೆ ನೀಡಿ ಹೊರ ಬಂದು ಪ್ರಜಾಪ್ರಭುತ್ವದ ಗೌರವವನ್ನು ಎತ್ತಿ ಹಿಡಿದರು. ಚುನಾವಣೆ ಮೂಲಕ ಜನತಾ ನ್ಯಾಯಾಲಯದಲ್ಲಿ ನ್ಯಾಯ ಬೇಡಿ ಗೆದ್ದು ಮತೊಮ್ಮೆ ಪ್ರಧಾನಿ ಆದದ್ದು ಇತಿಹಾಸ. ಅವರೆಂದು ಪಕ್ಷವನ್ನು ಅಧಿಕಾರಕ್ಕೆ ತರಲು ವಾಮಾ ಮಾರ್ಗ ಹಿಡಿಯಲಿಲ್ಲ. ತಾವು ನಂಬಿದ ಸಿದ್ದಾಂತವನ್ನು ಬಿಡಲಿಲ್ಲ. ಅದೇ ರೀತಿಯಲ್ಲಿ ಅಡ್ವಾಣಿ ಕೂಡ ಎಂದು ಅಧಿಕಾರಕ್ಕಾಗಿ ತನ್ನ ತನವನ್ನು ಬಿಡಲಿಲ್ಲ.
ಆದರೆ ಇಂದು ಪಕ್ಷವು ನಡೆಯುವ ಹಾದಿ ನೋಡಿದ್ರೆ ಬಹಳ ಬೇಸರವಾಗುತ್ತೆ. ಮೋದಿಯಂತ ನಾಯಕರು ಇದ್ದು ಇಡೀ ದೇಶವೆ ಮೋದಿಮಯವಾದರು ಆ ಪಕ್ಷಕ್ಕೆ ಅಧಿಕಾರ ತಪ್ಪಿ ಹೋಗುತ್ತೆ ಎಂಬ ಭಯ ಬಹುವಾಗಿ ಕಾಡುತಿದೆ ಎಂದು ಅನಿಸುತ್ತಿದೆ. ಅದಕ್ಕಾಗಿ ಆ ಪಕ್ಷ ತನ್ನ ಸಿದ್ದಾಂತವನ್ನು ಗಾಳಿಗೆ ತೂರಿದೆ. ಅನೇಕ ರಾಜ್ಯಗಳಲ್ಲಿ ಹಾಗೂ ಕರ್ನಾಟಕದಲ್ಲಿ ಕೂಡ ಆಪರೇಷನ್ ಕಮಲದಿಂದ ಆರಂಭವಾಯಿತು. ಅಧಿಕಾರಕ್ಕಾಗಿ ಚುನಾಯಿತ ಪ್ರತಿನಿಧಿ ಬೇಟೆ ಅದು ಇನ್ನು ಮುಂದುವರಿದಿದೆ. ಲೋಕಸಭಾ ಚುನಾವಣೆ ವರ್ಷ ಇರುವಾಗಲೇ ಸೀಟ್‍ಗಳ ಲೆಕ್ಕಚಾರ ಆರಂಭವಾಗಿದೆ. ಅದನ್ನು ಪಡೆಯಲು ಎಲ್ಲಾ ತರಹದ ಕಸರತ್ತು ಎಲ್ಲ ಪಕ್ಷಗಳು ನಡೆಸುವುದು ಸರ್ವೇ ಸಾಮಾನ್ಯ. ಆದರೆ ಬಿಜೆಪಿಯಂತ ಒಂದು ರಾಷ್ಟ್ರಿಯ ಪಕ್ಷ ಅದು ಶಿಸ್ತಿಗೆ ಹೆಸರಾದ ಪಕ್ಷ ಅದು ಜನಪ್ರಿಯತೆಯ ಉತ್ತುಂಗದಲ್ಲಿ ಇರುವಾಗ ಮೋದಿಯಂತ ಏಕಾಮೇವ ನಾಯಕರು ಇರುವಾಗ ಕೇವಲ ಚುನಾವಣೆಯಲ್ಲಿ ಅಧಿಕ ಸೀಟ್ ಪಡೆಯಲು ಕೆಲವು ಪಕ್ಷಗಳೊಂದಿಗೆ ಮೈತ್ರಿ ಹಾಗೆ ಪಕ್ಷ ಬಿಟ್ಟವರನ್ನು ಪುನಃ ಓಲೈಸುವುದು ಎಷ್ಟು ಸೂಕ್ತ. ಪಕ್ಷದಲ್ಲಿ ಎಲ್ಲವನ್ನು ಅನುಭವಿಸಿ ಹತ್ತಾರು ವರ್ಷ ಪಕ್ಷದ ಹಾಗೂ ಅಧಿಕಾರದ ಹುದ್ದೆಗಳನ್ನು ಅನುಭವಿಸಿ ಚುನಾವಣೆ ಸಂದರ್ಭದಲ್ಲಿ ತಮಗೆ ಅಥವಾ ತಾವು ಹೇಳಿದವರಿಗೆ ಟಿಕೆಟ್ ಸಿಗಲಿಲ್ಲ ಎಂಬ ಕಾರಣದಿಂದಲೋ ಪಕ್ಷ ಬಿಟ್ಟವರನ್ನು ಪುನಃ ಒಲಿಸುವುದು ಎಷ್ಟು ಸೂಕ್ತ. ಇಲ್ಲಿ ಕೆಲವರಿಗೆ ಅನ್ಯಾಯ, ಅಪಮಾನವಾಗುತ್ತೆ ಒಪ್ಪಿಕೊಳ್ಳುವ. ಅದೇ ಕಾರಣಕ್ಕೆ ಪಕ್ಷ ಬಿಡುವುದು ಎಷ್ಟು ಸೂಕ್ತ ನಾಯಕರೇನೂ ಪಕ್ಷ ಬದಲಿಸಿಕೊಂಡು ಬಿಡುತ್ತಾರೆ. ಅದೇ ಕಾರ್ಯಕರ್ತರ ಮನಸ್ಥಿತಿ ಏನಾಗುತ್ತೆ ಅಂತ ಚಿಂತೆ ನಾಯಕರುಗಳಿಗೆ ಇರವುದಿಲ್ಲ. ಒಂದು ಚುನಾವಣೆಯಲ್ಲಿ ಪಕ್ಷ ಬಿಟ್ಟ ನಾಯಕರಿಗೆ ಧಿಕ್ಕಾರ ಇನೊಂದು ಚುನಾವಣೆಯಲ್ಲಿ ಜಯಕಾರ. ಇಂಥ ಮುಜುಗರ ಪರಿಸ್ಥಿತಿ ಅವನಿಗೆ. ಏಕೆಂದರೆ ಅವನೊಬ್ಬ ನಿಷ್ಠಾವಂತ ಕಾರ್ಯಕರ್ತ. ಅವನು ಬಿಟ್ಟರು ಅಥವಾ ಬಂದರು ಕೇಳುವವರಿಲ್ಲ. ಅವನ ಕೆಲಸ ಕೇವಲ ಜಯಕಾರ ಅಥವಾ ಧಿಕ್ಕಾರ ಹಾಕುವುದು, ಪೋಸ್ಟರ್ ಅಂಟಿಸುವುದು, ಬಾವುಟ ಕಟ್ಟುವುದು ಮಾತ್ರ ಅವನ ಕೆಲಸ.
ಇನ್ನು ಪಕ್ಷಗಳೊಂದಿಗೆ ಹೊಂದಾಣಿಕೆ ಈ ಪಕ್ಷದ ಅಜೆಂಡಾ. ಒಂದು ಇನ್ನೊಂದು ಪಕ್ಷದ ಅಜೆಂಡಾ ಬೇರೆ ಬೇರೆ, ಕೆಲವರವದು ಕೋಮುವಾದಿ ನಿಲುವು. ಇನ್ನು ಕೆಲವರದು ಜಾತ್ಯತಿತ ನಿಲುವು. ಇದು ಕೋಮುವಾದಿ ಎಂಬ ಪಟ್ಟ ಬಿಜೆಪಿಗೆ ಕಟ್ಟಿ ಆಗಿದೆ. ಇನ್ನು ಕಾಂಗ್ರೆಸ್ ಮತ್ತು ಅದರ ಅಂಗ ಪಕ್ಷಗಳು ಜಾತ್ಯಾತೀತ ನಿಲುವು ಅಂಟಿಸಿಕೊಂಡಿದೆ. ಇದು ಯಾರು ಅಂಟಿಸಿದಲ್ಲ. ಅವರವರೇ ಕಾಲಕ್ಕೆ ತಕ್ಕಂತೆ ಅಂಟಿಸಿಕೊಂಡು ಬಿಡುತ್ತಾರೆ. ಇಂದು ಚುನಾವಣೆಗಳು ನಡಯುವುದೇ ಜಾತಿ ಆಧಾರದ ಹಣದ ಅದಾರದ ಮೇಲೆ.
ಸಂದರ್ಭಕ್ಕೆ ತಕ್ಕಂತೆ ತಮ್ಮ ಅಜೆಂಡಾದಲ್ಲಿ ಬದಲಾವಣೆ ಕಂಡುಕೊಳ್ಳುತಾರೆ. ಕರ್ನಾಟಕದಲ್ಲಿ ಅದು ಜಾತ್ಯಾತೀತ ಸಿದ್ಧಾಂತ ಹೊಂದಿರುವ ಜನತಾದಳ ಒಟ್ಟಿಗೆ ಮೈತ್ರಿ ಮಾಡಿಕೊಳ್ಳಲು ವೇದಿಕೆ ಸಜ್ಜಾಗಿದೆ. ಆ ಪಕ್ಷದ ನಾಯಕರು ಬಿಜೆಪಿಯನ್ನು ಟೀಕಿಸಿದಷ್ಟು ಬೇರೆ ಯಾರು ಟೀಕಿಸಲಿಲ್ಲ. ಈಗ ಅವರೊಡನೆ ಮೈತ್ರಿ ಅಧಿಕಾರಕ್ಕಾಗಿ ಎಲ್ಲಾವನ್ನು ಬಿಡುತಾರೆ. ರಾಜಕಾರಣಿಗಳು ಬಿಹಾರದಲ್ಲಿ ನಿತೀಶ ಕುಮಾರ್ ಅವರೊಡನೆ ಮೈತ್ರಿ ಪ್ರಜಾಪ್ರಭುತ್ವದ ದೊಡ್ಡ ದುರಂತ. ಏಕೆಂದರೆ ಅವರು ಮೊದಲು ಬಿಜೆಪಿ ಒಟ್ಟಿಗೆ ಮೈತ್ರಿ ಮಾಡಿಕೊಂಡು ಅಧಿಕಾರ ಅನುಭವಿಸಿ ಸಮಯಕ್ಕೆ ಸಂದರ್ಭಕ್ಕೆ ರಾಜಕೀಯ ಮಾಡುವವರು ಅಂತವರ ಒಟ್ಟಿಗೆ ಪುನಃ ಮೈತ್ರಿ ಮಾಡಿಕೊಂಡರೆ ರಾಜಕೀಯದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ. ಅದೇ ರೀತಿ ಹೀಗೆ ಪಟ್ಟಿ ಮಾಡುತ್ತಾ ಹೋದರೆ ಅದು ಹನುಮಂತನ ಬಾಲದ ಹಾಗೆ ಬೆಳೆಯುತೆ.
ಇಲ್ಲಿ ಮೂಡುವ ಪ್ರಶ್ನೆ ಏನೆಂದರೆ ಬಿಜೆಪಿಯಂತ ಪಕ್ಷ ತಳ ಮಟ್ಟದಿಂದ ಕಾರ್ಯಕರ್ತರು ಕಟ್ಟಿ ಬೆಳೆಸಿದ ಪಕ್ಷ. ವಾಜಪೇಯಿ, ಅಡ್ವಾನಿ ಅಂತ ನಾಯಕರ ಕನಸಿನ ಪಕ್ಷ ನಿರಂತರ ಸೋಲಿನ ನಡುವೆ ಗೆಲುವಿನ ದಡ ಸೇರಿಸಿದ್ದಾರೆ. ಅನೇಕ ರಾಜ್ಯಗಳಲ್ಲಿ ತಳ ಮಟ್ಟದಿಂದ ಬಂದು ಅಧಿಕಾರ ಪಡೆದು ಕೊಂಡಿದೆ. ಬಿಹಾರದಲ್ಲಿ ಶತ್ತ್ರುಗನ್ ಸಿನ್ಸ ಒಬ್ಬರೇ ಬಿಜೆಪಿಗೆ ಆಧಾರವಾಗಿ ನಿಂತದ್ದು. ಕರ್ನಾಟಕದಲ್ಲಿ ಆರಂಭದಲ್ಲಿ ಬಿಜೆಪಿಗೆ ಒಂದು ವೇದಿಕೆ ಕಲ್ಪಿಸಿದ ಎ.ಕೆ. ಸುಬ್ಬಯ್ಯ ಅನಂತರ ಯಡಿಯೂರಪ್ಪ ಇನ್ನು ಅನೇಕ ನಾಯಕರು ಹೀಗೆ ಅನೇಕ ರಾಜ್ಯಗಳಲ್ಲಿ ಅನೇಕ ನಾಯಕರ ಪರಿಶ್ರಮವಿದೆ. ನಿರಂತರ ಹೋರಾಟ ಮಾಡಿ ಪಕ್ಷವನ್ನು ಗೆಲುವಿನ ದಡ ಸೇರಿಸಿದ್ದಾರೆ. ಸೋಲಿನಲ್ಲಿ ಮಾಡದ ಮೈತ್ರಿ ಗೆಲುವಿನ ಸಮೀಪ ಇರುವಾಗ ಬೇಕಿತ್ತಾ ಇಂತಹ ಮೈತ್ರಿ. ಕಾರ್ಯಕರ್ತರಿಗೆ ಕೆಲವು ಕಡೇ ಮುಜುಗರ. ಚುನಾವಣೆ ದೃಷ್ಟಿಯಿಂದ ಕೆಲಸ ಮಾಡಿ ಚುನಾವಣೆಯಲ್ಲಿ ಇನ್ನೊಂದು ಪಕ್ಷಕ್ಕೆ ಕೆಲಸ ಮಾಡುವುದು ಮುಜುಗರ. ಕೆಲವು ಕಡೆ ಹಾಲಿ ಸದಸ್ಯರು ಅವಕಾಶ ಕಳೆದು ಕೊಳ್ಳುತಾರೆ. ಇದು ಎಲ್ಲಾ ಪಕ್ಷಕೂ ಅನ್ವಯವಾಗುತ್ತೆ. ಈಗಾಗಲೇ ಅನೇಕ ಕಾಂಗ್ರೇಸ್ ನಾಯಕರು ಬಿಜೆಪಿ ಬಾಗಿಲು ತಟ್ಟುತಿದ್ದಾರೆ. ಕಾಂಗ್ರೇಸ್‍ನಲ್ಲಿ ಎಲ್ಲಾ ಅಧಿಕಾರ ಅನುಭವಿಸಿ ಅನೇಕ ವರ್ಷಗಳ ಕಾಲ ಒಂದು ಸಿದ್ಧಾಂತ ಅಡಿಯಲ್ಲಿ ಕೆಲಸ ಮಾಡಿದವರು ಚುನಾವಣೆ ಬಂದಾಗ ಇನೊಂದು ಪಕ್ಷಕ್ಕೆ ಸೇರುವುದು ಎಷ್ಟು ಸಮಂಜಸ. ಇಂತಹ ರಾಜಕಾರಣಿಗಳನ್ನು ಪಕ್ಷದ ಮೂಲಕ್ಕೆ ಧಕ್ಕೆ ಉಂಟು ಮಾಡುತ್ತಾರೆ. ಇನ್ನು ಕೆಲವು ಪಕ್ಷಗಳು ಒಂದು ಕಾಲು ಮೈತ್ರಿ ಕೂಟವಾದ ಎನ್‍ಡಿಎ ದಲ್ಲಿ ಮತ್ತೊಂದು ಕಾಲು ಇಂಡಿಯಾ ಮೈತ್ರಿ ಕೂಟದಲ್ಲಿ ಇರಿಸಿದ್ದರು. ಯಾವಾಗ ಶ್ರೀ ರಾಮನ ಪ್ರತಿಷ್ಠಾಪನೆ ಆಯಿತೊ ಅನೇಕರು ಇಂಡಿಯಾ ಮೈತ್ರಿ ಕೂಟ ಸೇರಿದರೆ ಇನ್ನು ಕೆಲವು ನಾಯಕರು ಇಂಡಿಯಾ ಮೈತ್ರಿ ಕೂಟದಿಂದ ಹೊರಗೆ ಬಂದು ಕಾದು ನೋಡುವ ತಂತ್ರ ಅನುಸರಿಸಿದರು. ಈಗ ರಾಜಕಾರಣ ವ್ಯಾಪಾರವಾಗಿ ಬದಲಾವಣೆಯಾಗಿದೆ. ಚುನಾವಣೆ ಬರುವಾಗ ಪಕ್ಷ ಬದಲಾವಣೆ ಮಾಡುವವರು ದೇಶದ ಉದ್ದಾರ ಮಾಡಲು ಅಲ್ಲ ತಮ್ಮ ಉದ್ದಾರಕ್ಕೆ.
ತಮ್ಮ ಬಹು ಕೋಟಿ ವ್ಯವಹಾರದ ರಕ್ಷಣೆಗೆ ಅದರಿಂದ ಪಕ್ಷಕ್ಕೆ ಹಾನಿ ಹೊರತು ಲಾಭವಿಲ್ಲ. 70-80 ದಶಕದಲ್ಲಿ ರಾಷ್ಟ್ರದಲ್ಲಿ ಕಡಿಮೆ ಅಂದರೆ 50ಕ್ಕೂ ಮೇಲೆ ಪ್ರಧಾನಿ ಆಗುವ ಅರ್ಹತೆ ಇರುವ ಅಭ್ಯರ್ಥಿಗಳಿದ್ದರು. ರಾಜ್ಯಗಳಲ್ಲಿ ಅಷ್ಟೇ ಪ್ರಮಾಣದಲ್ಲಿ ಮುಖ್ಯಮಂತ್ರಿ ಆಗುವ ಅಭ್ಯರ್ಥಿಗಳಿದ್ದರು. ಈಗ ಒಬ್ಬನೇ ಒಬ್ಬ ಅಭ್ಯರ್ಥಿ ಕಾಣುವುದಿಲ್ಲ. ಏಕೆಂದರೆ ರಾಜಕೀಯ ಇಂದು ಉದ್ದಿಮೆ ಆಗಿ ಪರಿವರ್ತನೆ ಆಗಿದೆ. ಅದು ಚಳುವಳಿ ಆಗಿ ಉಳಿದಿಲ್ಲ. ದೇಶದಲ್ಲಿ ಇಂದು ಬಿಜೆಪಿ ಒಂದೇ ದೊಡ್ಡ ರಾಷ್ಟ್ರೀಯ ಪಕ್ಷವಾಗಿದೆ. ಕಾಂಗ್ರೆಸ್ ಪ್ರಾದೇಶಿಕ ಪಕ್ಷವಾಗಿ ಪರಿವರ್ತನೆ ಆಗಿದೆ. ಕಮ್ಯುನಿಸ್ಟ್ ಇಂದು ತನ್ನ ನೆಲೆ ಕಳೆದುಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿಯು ಗೆಲುವಿನ ಅಸೆಗೇ ಕಂಡ ಕಂಡವರಿಗೆ ಮಣೆ ಹಾಕಿದರೆ ಮುಂದೆ ಕಾಂಗ್ರೇಸ್ ದಾರಿ ಹಿಡಿಯುವುದರಲಿ ಸಂಶಯವಿಲ್ಲ. ಹಿಂದೆ ಒಂದು ಬಾರಿ ಅಧಿಕಾರಕ್ಕೆ ಬರುವ ಹುಮಸಿನಲಿ ಬಳ್ಳಾರಿಯ ಗಣಿ ದೊರೆಗಳಿಗೆ ಪಕ್ಷದಲ್ಲಿ ಜಾಸ್ತಿ ಸಲುಗೆ ನೀಡಿ ಪಕ್ಷಕ್ಕೆ ಆದ ಮುಖಭಂಗ ಇನೊಮ್ಮೆ ಬಾರದಿರಲಿ. ಬಲವಾದ ರಾಷ್ಟ್ರ ನಿರ್ಮಾಣಕ್ಕೆ ದೇಶಕ್ಕೆ ಗರಿಷಗಠವಾದ ಕನಿಷ್ಠ ಎರಡು ರಾಜಕೀಯ ಪಕ್ಷಗಳ ಅವಶ್ಯಕತೆ ಇದೆ. ಚುನಾಚಣೆ ಸಮಯದಲ್ಲಿ ಎಲ್ಲರೂ ಗೆಲ್ಲುನ ಕುದುರೆಯ ಬಾಲ ಹಿಡಿದರೆ ಪ್ರಬಲ ವಿರೋಧ ಪಕ್ಷ ಇಲ್ಲದಾಗುತ್ತದೆ. ಆಡಳಿತ ಪಕ್ಷ ಎಷ್ಟು ಬಲಿಷ್ಟವಾಗಿರುತ್ತದೋ ಅಷ್ಟೇ ಬಲಿಷ್ಟವಾಗಿ ವಿರೋಧ ಪಕ್ಷದ ಅವಶ್ಯಕತೆ ಇರುತ್ತದೆ. ರಾಜಕಾರಣಿಗಳು ಚುನಾವಣೆ ಗೆಲ್ಲುವುದಕ್ಕಾಗಿ ನಾವು ನಂಬಿದ ಸಿದ್ಧಾಂತವನ್ನು ಬಲಿಕೊಡದಿರಲಿ ಎಂಬುವುದೇ ಈ ಬರವಣಿಗೆಯ ಆಸೆ.
ಲೇಖನ : ಬಾಳೆಯಡ ಕಿಶನ್ ಪೂವಯ್ಯ
ವಕೀಲರು ಮತ್ತು ನೋಟರಿ
ಮಡಿಕೇರಿ
9448899554