ಮಡಿಕೇರಿ ನ.23 NEWS DESK : ಕೊಡಗು ಗೌಡ ಯುವ ವೇದಿಕೆ ವತಿಯಿಂದ ಗಾಳಿಬೀಡು ಗೌಡ ಜನಾಂಗ ಬಾಂಧವರ ಸಹಯೋಗದಲ್ಲಿ 10 ಕುಟುಂಬ 18 ಗ್ರೋತ್ರದ ಗೌಡ ಜನಾಂಗ ಬಾಂಧವರಿಗೆ ಡಿ.1 ರಂದು ಗಾಳಿಬೀಡು ಬಾಣೆ ಹಬ್ಬ ಏರ್ಪಡಿಸಲಾಗಿದೆ ಎಂದು ವೇದಿಕೆಯ ಕಾರ್ಯದರ್ಶಿ ಪುದಿಯನೆರವನ ರಿಶಿತ್ ಮಾದಯ್ಯ ತಿಳಿಸಿದರು. ನಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 9.30 ಗಂಟೆಗೆ ಗಾಳಿಬೀಡು ಶಾಲಾ ಮೈದಾನದಲ್ಲಿ 8 ಕಿ.ಮೀ ಕ್ರಾಸ್ ಕಂಟ್ರಿ ಪೈಪೋಟಿ ಆರಂಭವಾಗಲಿದೆ. ಗಾಳಿಬೀಡಿನ 8 ಗೌಡ ಮನೆತನದ ಮಾರ್ಗವಾಗಿ ಸಾಗಿ ಹೋಗುವುದು ಕ್ರಾಸ್ ಕಂಟ್ರಿ ವಿಶೇಷತೆಯಾಗಿದೆ. ಕೋಚನ ಮನೆತನದ ಮಾರ್ಗವಾಗಿ ಆರಂಭಗೊಂಡು ಪೂಜಾರಿರ, ಉಡುದೋಳಿ, ಕರಕರನ, ಕೋಳುಮುಡಿಯನ, ಕೊಂಬಾರನ, ಯಾಲದಾಳು, ಅಚ್ಚಪಟ್ಟೀರ ಮನೆತನಗಳ ಮಾರ್ಗವಾಗಿ ಸಾಗಿ ಶಾಲಾ ಮೈದಾನ ತಲುಪಲಿದೆ ಎಂದು ಮಾಹಿತಿ ನೀಡಿದರು. ಬಾಣೆ ಹಬ್ಬದ ಪ್ರಯುಕ್ತ ಬೆಳಿಗ್ಗೆ 10 ಗಂಟೆಗೆ ವಿವಿಧ ವಿಭಾಗದಲ್ಲಿ ಶೂಟಿಂಗ್ ಸ್ಫರ್ಧೆ ಪ್ರಾರಂಭವಾಗಲಿದೆ. ಅಂದು .22 ರೈಫಲ್, 12 ಬೋರ್, ಏರ್ ರೈಫಲ್ ಪೈಪೋಟಿ ನಡೆಯಲಿದೆ. ವಿಜೇತರಿಗೆ ಆಕರ್ಷಕ ನಗದು ಮತ್ತು ಟ್ರೋಫಿ ನೀಡಿ ಗೌರವಿಸಲಾಗುತ್ತದೆ. ಅಲ್ಲದೇ ಇದೇ ಸಂದರ್ಭದಲ್ಲಿ ಗಾಳಿಬೀಡು ಗ್ರಾಮಸ್ಥರಿಗೆ 12 ಬೋರ್ ಶೂಟಿಂಗ್ ಪೈಪೋಟಿ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 9972376151, 9449952008 ಸಂಪರ್ಕಿಸಬಹುದು ಎಂದು ತಿಳಿಸಿದರು. ಗಾಳಿಬೀಡು ಗ್ರಾಮಸ್ಥರು ಮತ್ತು ವೇದಿಕೆಯ ನಿರ್ದೇಶಕ ದೇರಳ ನವೀನ್ ಮಾತನಾಡಿ, ಇದೇ ಮೊದಲ ಬಾರಿಗೆ ವಿನೂತನ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಅಂದಿನ ಕಾರ್ಯಕ್ರಮಕ್ಕೆ ಗ್ರಾಮಸ್ಥರ ಸಹಾರ ಇದ್ದು, ಕೊಡಗು ಜಿಲ್ಲೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗೌಡ ಜನಾಂಗಬಾಂಧವರು ಪಾಲ್ಗೊಳ್ಳಬಹುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಉಪಾಧ್ಯಕ್ಷ ಬಾಳಾಡಿ ಮನೋಜ್, ನಿರ್ದೇಶಕರಾದ ಕೊಂಬಾರನ ರಂಜು, ಗಾಳಿಬೀಡು ಗ್ರಾಮಸ್ಥ ಯಾಲದಾಳು ನಿತೀನ್ ಉಪಸ್ಥಿತರಿದ್ದರು.