ಬೇಕಾಗುವ ಪದಾರ್ಥಗಳು : ಮಶ್ರೂಮ್ –ಎರಡು ಪ್ಯಾಕೆಟ್, ಬಟಾಣಿ- ಒಂದು ಬಟ್ಟಲು, ಈರುಳ್ಳಿ –2, ಟೊಮೆಟೊ– 4, ದನಿಯಾ ಪುಡಿ– ಎರಡು ಚಮಚ, ಗರಂ ಮಸಾಲ –ಒಂದು ಚಮಚ, ಅರಿಸಿನ ಪುಡಿ– ಒಂದು ಚಮಚ, ಶುಂಠಿ -ಬೆಳ್ಳುಳ್ಳಿ ಪೇಸ್ಟ್- 1 ಚಮಚ, ಕಸ್ತೂರಿ ಮೇಥಿ–ಒಂದು ಚಮಚ, ಸೋಂಪು ಕಾಳು –ಒಂದು ಚಮಚ, ಚಕ್ಕೆ –2, ಲವಂಗ –2, ಸ್ಟಾರ್ ಮಸಾಲ ಹೂ– 2, ಅನಾನಸ್ ಮೊಗ್ಗು-2, ಏಲಕ್ಕಿ –2, ಎಣ್ಣೆ- ನಾಲ್ಕು ಟೇಬಲ್ ಚಮಚ, ಉಪ್ಪು- ರುಚಿಗೆ ತಕ್ಕಷ್ಟು.
ಮಾಡುವ ವಿಧಾನ : ಪಾತ್ರೆಯಲ್ಲಿ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿಕೊಳ್ಳಬೇಕು. ಕಸ್ತೂರಿ ಮೇಥಿ, ಸೋಂಪು, ಚಕ್ಕೆ -ಲವಂಗ, ಸ್ಟಾರ್ ಮಸಾಲ ಹೂ, ಅನಾನಸ್ ಮೊಗ್ಗು, ಏಲಕ್ಕಿ ಸೇರಿಸಿ ಮಿಶ್ರಣ ಮಾಡಬೇಕು. ಬಳಿಕ ಹೆಚ್ಚಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು. ಬಳಿಕ ಟೊಮೆಟೊ, ಶುಂಠಿ -ಬೆಳ್ಳುಳ್ಳಿ ಪೇಸ್ಟ್ ಹಾಗೂ ಸ್ವಲ್ಪ ಉಪ್ಪು ಹಾಕಿಕೊಂಡು ಬೆರೆಸಿಕೊಡಬೇಕು.
ನಂತರ ಮಸಾಲ ಪುಡಿಗಳು ಹಾಗೂ ಬಟಾಣಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ನೀರನ್ನು ಹಾಕಿ 5 ನಿಮಿಷಗಳ ಕಾಲ ಬಟಾಣಿ ಬೇಯಲು ಬಿಡಿ. ಇದೀಗ ಕತ್ತರಿಸಿದ ಮಶ್ರೂಮ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
10 ರಿಂದ 15 ನಿಮಿಷ ಬೇಯಲು ಬಿಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಉದುರಿಸಿ. ಇದೀಗ ರುಚಿಕರವಾದ ಮಶ್ರೂಮ್ ಗ್ರೇವಿ ಸವಿಯಲು ಸಿದ್ಧ.