ಗೋಣಿಕೊಪ್ಪಲು ಏ.9 NEWS DESK : ನಿಟ್ಟೂರು ಗ್ರಾ.ಪಂ.ವ್ಯಾಪ್ತಿಯ ತಟ್ಟೆಕೆರೆ ಹಾಡಿಗೆ ಮುಖ್ಯಮಂತ್ರಿಗಳ ಸಲಹೆಗಾರ ಹಾಗೂ ವೀರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರು ಲೋಕಸಭಾ ಅಭ್ಯರ್ಥಿ ಪರ ಮತಯಾಚನೆಗೆ ಆಗಮಿಸಿದ ಸಂದರ್ಭ ಅಲ್ಲಿನ 150 ಕ್ಕೂ ಅಧಿಕ ಆದಿವಾಸಿ ನಿವಾಸಿಗಳು ನಮಗೆ ಕುಡಿಯುವ ನೀರು ಒದಗಿಸಿ ಎಂದು ಅಳಲು ತೋಡಿಕೊಂಡರು. ತಕ್ಷಣ ಸ್ಪಂದಿಸಿದ ಶಾಸಕ ಎ.ಎಸ್.ಪೊನ್ನಣ್ಣ ಅವರು ಗ್ರಾಮೀಣ ನೀರು ಸರಬರಾಜು ಹಾಗೂ ನೈರ್ಮಲ್ಯ ಉಪ ವಿಭಾಗ ಅಧಿಕಾರಿಗಳಿಗೆ ತುರ್ತು ಕರೆ ಮಾಡಿ ತಟ್ಟೆಕೆರೆ ಹಾಡಿಯಲ್ಲಿರುವ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಕುಡಿಯುವ ನೀರು ಒದಗಿಸುವಂತೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ಕುಡಿಯುವ ನೀರು ಅಗತ್ಯ ಇರುವಲ್ಲಿ ತ್ವರಿತ ನೀರು ಸರಬರಾಜು ಮಾಡಲು ಜಿಲ್ಲಾಧಿಕಾರಿ ಆದೇಶವಿದ್ದು, ಅಧಿಕಾರಿಗಳು ತಟ್ಟೆಕೆರೆ ಹಾಡಿಗೆ ಆಗಮಿಸಿ ನೀರು ಸರಬರಾಜಿಗೆ ಕ್ರಮಕೈಗೊಳ್ಳುವಂತೆ ತಿಳಿಸಿದರು. ಕೊಡಗಿನಲ್ಲಿ ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಯೋಜನೆ ವಿಫಲಗೊಂಡಿದೆ ಎಂದು ಆರೋಪಿಸಿದ ಶಾಸಕರು, ಈ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದರು. ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷ ಮೀದೇರಿರ ನವೀನ್ ನೇತೃತ್ವದಲ್ಲಿ ನಿಟ್ಟೂರು ಗ್ರಾ.ಪಂ ವ್ಯಾಪ್ತಿಯ ತಟ್ಟೆಕೆರೆ, ಕುಂಬಾರ ಕಟ್ಟೆ, ಪಾಲದಳ, ಬಾಳೆಲೆ ವ್ಯಾಪ್ತಿಯ ಗಂಧದ ಗುಡಿ ಪೈಸಾರಿ, ಕೊಪ್ಪಲು ಹಾಗೂ ಪೊನ್ನಪ್ಪಸಂತೆ ಗ್ರಾ.ಪಂ ವ್ಯಾಪ್ತಿಯಲ್ಲಿ ಶಾಸಕರು ಹಾಗೂ ಪಕ್ಷದ ಮುಖಂಡರು ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಗೌಡ ಪರ ಮತಯಾಚನೆ ಮಾಡಿದರು. ಮಾಜಿ ಎಂ.ಎಲ್ಸಿ.ಅರುಣ್ ಮಾಚಯ್ಯ, ಮಾಜಿ ಜಿ.ಪಂ.ಸದಸ್ಯ ಬಿ.ಎನ್.ಪ್ರಥ್ಯು, ಕೆ.ಪಿ.ಸಿ.ಸಿ.ಯ ತಾರಾ ಅಯ್ಯಮ್ಮ, ಕೆಪಿಸಿಸಿ ಕಾನೂನು ವಿಭಾಗದ ಪ್ರಧಾನ ಕಾರ್ಯದರ್ಶಿ ಸೋಮಣ್ಣ, ಪ್ರಮುಖರಾದ ವಿನು ಉತ್ತಪ್ಪ, ಪದ್ಮಿನಿ ತಿಮ್ಮಯ್ಯ, ಎಂ.ಸಿ.ದೇವಯ್ಯ, ಮತ್ರಂಡ ಧಿಲ್ಲು, ಅಪ್ಪಣ್ಣ, ಸಿದ್ಧಿಕ್, ಲೋಕೇಶ್