ಮಡಿಕೇರಿ ಏ.29 NEWS DESK : ಕೊಡಗು ಗೌಡ ಯುವ ವೇದಿಕೆ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಗೌಡ ಪ್ರೀಮಿಯರ್ ಲೀಗ್ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಎಲೈಟ್ ಕ್ರಿಕೆಟ್ ಕ್ಲಬ್ ಸ್ಕ್ವಾಡ್ 2 ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.
ಎಲೈಟ್ ಕ್ರಿಕೆಟ್ ಕ್ಲಬ್ ತಂಡ ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು. ಗೌಡ ಮಹಿಳೆಯರ ಕ್ರಿಕೆಟ್‍ನಲ್ಲಿ ಪ್ಯಾಂಥರ್ಸ್ ಕ್ಲಬ್ ಕೊಡಗು ಮೊದಲ ಸ್ಥಾನ ಪಡೆದರೆ, ಬ್ಲ್ಯಾಕ್ ಪ್ಯಾಂಥರ್ಸ್ ತಂಡ ದ್ವಿತೀಯ ಸ್ಥಾನಗಳಿಸಿತು.
ಪರುಷರ ವಿಭಾಗದ 2ನೇ ಎಲಿಮಿನೇಟರ್ ಪಂದ್ಯದಲ್ಲಿ ಎಲೈಟ್ ಕ್ರೆಕೆಟ್ ಕ್ಲಬ್ ತಂಡ ಕೂರ್ಗ್ ವಾರಿಯರ್ಸ್ ತಂಡದ ವಿರುದ್ಧ 7 ವಿಕೆಟ್‍ಗಳ ಜಯ ಸಾಧಿಸಿ ಫೈನಲ್ ಪ್ರವೇಶಿಸಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ನಿಗದಿತ 10 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 116 ರನ್ ಗಳಿಸಿತು. ತಂಡದ ಅನಿಲ್ ಕುಡೆಕಲ್ 2 ಎಸೆತಗಳಲ್ಲಿ 4 ಬೌಂಡರಿ, 6 ಸಿಕ್ಸರ್ ಒಳಗೊಂಡು 66 ರನ್‍ಗಳಿಸಿದರು.
ಎಲೈಟ್ ಪರವಾಗಿ ಕಾರ್ತಿಕ್, ಶರತ್ ಚೊಕ್ಕಾಡಿ, ದಿನೇಂದ್ರ ಅಣ್ಣಚಿರ, ನಿತಿನ್ ಕುಮಾರ್ ತಲಾ ಒಂದೊಂದು ವಿಕೆಟ್ ಪಡೆದರು. ಗುರಿ ಬೆನ್ನಟ್ಟಿದ ಎಲೈಟ್ ತಂಡ 9 ಓವರ್‍ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ತಂಡದ ಪರ ಲೋಕೇಶ್ 28 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್ ಒಳಗೊಂಡು, ಅಜೇಯ 67 ರನ್ ಬಾರಿಸಿದರು. ಕೂರ್ಗ್ ವಾರಿಯರ್ಸ್ ಪರ ಅನಿಲ್ ಕುಡೆಕಲ್ ಕುಜಲ್ ಕಾರ್ಯಪ್ಪ ತಲಾ ಒಂದೊಂದು ವಿಕೆಟ್ ಪಡೆದರು.
ಪುರುಷರ ಫೈನಲ್ ಪಂದ್ಯ ಎಲೈಟ್ ಕ್ರಿಕೆಟ್ ಕ್ಲಬ್ ಹಾಗೂ ಎಲೈಟ್ ಕ್ರೆಕೆಟ್ ಸ್ಕ್ವಾಡ್ 2 ನಡುವೆ ನಡೆಯಿತು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಎಲೈಟ್ ಸ್ಕ್ವಾಡ್ 2 ನಿಗದಿತ 10 ಓವರ್‍ಗಳಲ್ಲಿ 83 ರನ್‍ಗಳಿಸಿತು. ತಂಡದ ಪರ ಮನ್ವಿತ್ ಕಲ್ಲುಗದ್ದೆ 8 ಎಸೆತಗಳಲ್ಲಿ 19 ರನ್‍ಗಳಿಸಿದರು. ಆಕರ್ಷ್ 18 ರನ್ ಬಾರಿಸಿದರು. ಎಲೈಟ್ ಪರ ಧಿನೇಂದ್ರ ಅಣ್ಣಚಿರ ಮತ್ತು ಕಾರ್ತಿಕ್ ತಲಾ ಎರಡು ವಿಕೆಟ್ ಪಡೆದರು. ಲೋಕೇಶ್, ನಿತಿನ್, ಶರತ್, ಚೊಕ್ಕಾಡಿ ತಲಾ ಒಂದೊಂದು ವಿಕೆಟ್ ಪಡೆದರು. ಗುರಿ ಬೆನ್ನಟ್ಟಿದ ಎಲೈಟ್ 10 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 73 ರನ್‍ಗಳಿಸಿ ಸೋಲನುಭವಿಸಿತು.
ತಂಡದ ಪರ ಹೊಸೂರ್ ಹಿತಕೃತ್ ಅಶೋಕ್ 25 ರನ್ ಬಾರಿಸಿದರು. ಸ್ಕ್ವಾಡ್ 2 ಪರ ಮನ್ವಿತ್ ಕಲ್ಲುಗದ್ದೆ, ನಯನ್ ಚೆರಿಯಮನೆ ತಲಾ 2 ವಿಕೆಟ್, ಎಡಿಕೇರಿ ನೂತರ್ 1 ವಿಕೆಟ್ ಪಡೆದರು.
ಮಹಿಳೆಯರ ಮೊದಲ ಪಂದ್ಯದಲ್ಲಿ ದಿ ಎಲೈಟ್ಸ್ ವಿಮೆನ್ ಬೆಂಗಳೂರು ತಂಡಕ್ಕೆ ಮರಗೋಡು ರಿಕ್ರಿಯೇಷನ್ ಕ್ಲಬ್ ವಿರುದ್ಧ 9 ವಿಕೆಟ್‍ಗಳ ಜಯ ಲಭಿಸಿತು.
ಗೂಡ್ಲೂರು ಕಾವೇರಿ ಟೀಮ್‍ಗೆ ಚೇರಳ ಗೌಡ ಸಮಾಜದ ವಿರುದ್ಧ 8 ವಿಕೆಟ್‍ಗಳ ಗೆಲುವು ಸಿಕ್ಕಿತು. ಬ್ಲಾಸಂಬೆಲ್ಸ್ ತಂಡಕ್ಕೆ ವೈಡ್ಡ್ ಮಾಸ್ಟರ್ಸ್ ವಿರುದ್ಧ 2 ರನ್‍ಗಳ ಗೆಲುವು ಲಭಿಸಿತು. ಬ್ಲ್ಯಾಕ್ ಪ್ಯಾಂಥರ್ಸ್ ತಂಡಕ್ಕೆ ಚೇರಳ ಗೌಡ ಸಮಾಜ ವಿರುದ್ಧ 8 ವಿಕೆಟ್‍ಗಳ ಜಯ ಸಿಕ್ಕಿತು. ಮೊದಲ ಸೆಮಿಫೈನಲ್ಸ್‍ನಲ್ಲಿ ಬ್ಲ್ಯಾಕ್ ಪ್ಯಾಂಥರ್ಸ್ ತಂಡ ದಿ ಎಲೈಟ್ಸ್ ವಿಮೆನ್ ಬೆಂಗಳೂರು ತಂಡದ ವಿರುದ್ಧ 8 ವಿಕೆಟ್‍ಗಳ ಗೆಲುವು ದಾಖಲಿಸಿತು.
ಎರಡನೇ ಸೆಮಿಫೈನಲ್ಸ್‍ನಲ್ಲಿ ಪ್ಯಾಂಥರ್ಸ್ ಕ್ಲಬ್ ತಂಡಕ್ಕೆ ವೈಲ್ಡ್ ಮಾಸ್ಟರ್ಸ್ ಕ್ಲಬ್ ತಂಡಕ್ಕೆ ವೈಲ್ಡ್ ಮಾಸ್ಟರ್ಸ್ ವಿರುದ್ಧ 71 ರನ್‍ಗಳ ಗೆಲುವು ಲಭಿಸಿತು. ತಾನಿಯ ಮಹಿಳಾ ಕ್ರಿಕೆಟ್‍ನ ಮೊದಲ ಅರ್ಧಶತಕ ಬಾರಿಸಿದರು.
ಬ್ಲ್ಯಾಕ್ ಪ್ಯಾಂಥರ್ಸ್ ಹಾಗೂ ಪ್ಯಾಂಥರ್ಸ್ ಕ್ಲಬ್ ನಡುವಿನ ಫೈನಲ್ ಪಂದ್ಯದಲ್ಲಿ ಪ್ಯಾಂಥರ್ಸ್ ಕ್ಲಬ್ ತಂಡಕ್ಕೆ 7 ರನ್‍ಗಳ ಜಯ ಲಭಿಸಿತು. ಈ ಪಂದ್ಯಾಟವನ್ನು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು.
ಪುರುಷರ ಫೈನಲ್ ಪಂದ್ಯಾವಳಿಯ ಉದ್ಘಾಟನೆಯಲ್ಲಿ ಅತಿಥಿಗಳಾಗಿ ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತಿ ಅಕಾಡೆಮಿ ಮಾಜಿ ಅಧ್ಯಕ್ಷ ಕೊಲ್ಯದ ಗಿರೀಶ್, ಜಿಂಜರ್ ಕಿಂಗ್ಸ್ ಮಾಲೀಕರಾದ ರಾಮಣ್ಣ, ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ಅಂಬೆಕಲ್ ನವೀನ್, ಗೌಡ ಯುವ ವೇದಿಕೆ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ನಗರಸಭಾ ಸದಸ್ಯೆ ಶ್ವೇತಾ ಪ್ರಶಾಂತ್, ಮೂಟೇರ ಪುಷ್ಪಾವತಿ, ರೇವತಿ ರಮೇಶ್, ತುಂತಜೆ ಗಣೇಶ್ ಸೇರಿದಂತೆ ಜಿಲ್ಲೆಯ ವಿವಿಧೆಡೆಗಳ ಗೌಡ ಸಮಾಜಗಳ ಅಧ್ಯಕ್ಷರು, ಪದಾಧಿಕಾರಿಗಳು ಮತ್ತಿತರರು ಪಾಲ್ಗೊಂಡಿದ್ದರು.
ವೈಯಕ್ತಿಕ ಬಹುಮಾನ :: ದಿ ಎಲೈಟ್ ಸ್ಕ್ವಾಡ್-2 ತಂಡದ ರಾಹುಲ್ ಅತ್ರಮಜಲು ಸರಣಿ ಪುರುಷೋತ್ತಮ, ಕೂರ್ಗ್ ವಾರಿಯರ್ಸ್‍ನ ಅನಿಲ್ ಕುಡೆಕಲ್ ಬೆಸ್ಟ್ ಬ್ಯಾಟ್ಸ್‍ಮೆನ್, ದಿ ಪ್ಲಾಂಟರ್ಸ್ ಕ್ಲಬ್ ಬಿಳಿಗೇರಿಯ ತುಷಾರ್ ಮೂವನ ಬೆಸ್ಟ್ ಬೌಲರ್, ಜಶ್ವಂತ್ ಬೆಸ್ಟ್ ವಿಕೆಟ್ ಕೀಪರ್, ದಿ ಎಲೈಟ್ ಕ್ರಿಕೆಟ್ ಕ್ಲಬ್‍ನ ಉದಯೋನ್ಮುಖ ಆಟಗಾರ ಎಡಿಕೇರಿ ಗಣಿತ್ ವೈಯಕ್ತಿಕ ಬಹುಮಾನಗಳನ್ನು ಪಡೆದುಕೊಂಡರು.