ಮಡಿಕೇರಿ ಮೇ 9 NEWS DESK : ಕೊಡಗು ಜಿಲ್ಲೆಯಲ್ಲಿ ಈ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದ 5,905 ವಿದ್ಯಾರ್ಥಿಗಳಲ್ಲಿ, 5,393 ವಿದ್ಯಾರ್ಥಿಗಳು ಉತ್ತೀರ್ಣರಾಗಿ, ಶೇ.91.24 ರಷ್ಟು ಫಲಿತಾಂಶ ಬಂದಿದೆ.
ಇವರಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಹಾಜರಾದ 2,859 ಬಾಲಕರಲ್ಲಿ, 2,531 ಬಾಲಕರು ಉತ್ತೀರ್ಣರಾಗಿದ್ದು, ಶೇ.88.53 ರಷ್ಟು ಫಲಿತಾಂಶ ಪಡೆದಿದ್ದಾರೆ. ಹಾಗೆಯೇ ಪರೀಕ್ಷೆಗೆ ಹಾಜರಾದ 3,046 ಬಾಲಕಿಯರಲ್ಲಿ 2,862 ಬಾಲಕಿಯರು ಉತ್ತೀರ್ಣರಾಗಿ ಶೇ.93.96 ರಷ್ಟು ಫಲಿತಾಂಶ ಪಡೆದಿದ್ದಾರೆ.
ಜಿಲ್ಲೆಯ 27 ಪರೀಕ್ಷಾ ಕೇಂದ್ರಗಳಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆದಿದ್ದು, ಈ ಬಾರಿ ವೆಬ್‍ಕಾಸ್ಟಿಂಗ್ ಮೂಲಕ ಪರೀಕ್ಷೆ ನಡೆದಿರುವುದು ವಿಶೇಷವಾಗಿದೆ.
ಶೇ.100 ರಷ್ಟು ಫಲಿತಾಂಶ ಪಡೆದ ಶಾಲೆಗಳ ತಾಲ್ಲೂಕುವಾರು ವಿವರ: ಮಡಿಕೇರಿ ಶೈಕ್ಷಿಣಿಕ ತಾಲ್ಲೂಕಿನಲ್ಲಿ ಶೇ.100 ರಷ್ಟು ಫಲಿತಾಂಶ ಪಡೆದ ಶಾಲೆಗಳ ವಿವರ : ಮಡಿಕೇರಿಯ ಬ್ಲಾಸಂ ಪ್ರೌಢ ಶಾಲೆ, ಚೆಟ್ಟಳ್ಳಿ ಪ್ರೌಢಶಾಲೆ, ನಾಪೋಕ್ಲು ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ, ಗಾಳಿಬೀಡು ಸರ್ಕಾರಿ ಪ್ರೌಢ ಶಾಲೆ, ಕಡಗದಾಳು ಸರ್ಕಾರಿ ಪ್ರೌಢ ಶಾಲೆ, ಮಕ್ಕಂದೂರು ಸರ್ಕಾರಿ ಪ್ರೌಢ ಶಾಲೆ, ಹಾಕತ್ತೂರು ಸರ್ಕಾರಿ ಪ್ರೌಢ ಶಾಲೆ, ಸಿದ್ಧಾಪುರ ಇರಾಕ್ ಪಬ್ಲಿಕ್ ಶಾಲೆ, ಮೂರ್ನಾಡು ಜ್ಞಾನ ಜ್ಯೋತಿ ಪ್ರೌಢ ಶಾಲೆ, ಚೆಯ್ಯಂಡಾಣೆ, ನರಿಯಂದಡ ಕೇಂದ್ರ ಪ್ರೌಢ ಶಾಲೆ, ಪಾರಾಣೆ ಪ್ರೌಢ ಶಾಲೆ, ಸಿದ್ಧಾಪುರದ ಶ್ರೀಕೃಷ್ಣ ವಿದ್ಯಾಮಂದಿರ ಹಿಡನ್ ಗಾರ್ಡನ್ ಶಾಲೆ, ಚೇರಂಬಾಣೆಯ ಶ್ರೀ ರಾಜರಾಜೇಶ್ವರಿ ಇಂಗ್ಲೀಷ್ ಮಾಧ್ಯಮ ಪ್ರೌಢಶಾಲೆ.
ವಿರಾಜಪೇಟೆ ತಾಲ್ಲೂಕಿನಲ್ಲಿ ಶೇ.100 ರಷ್ಟು ಫಲಿತಾಂಶ : ಆರ್ಜಿ ಗ್ರಾಮದ ಅನ್ವರೂಲ್ ಹುಡಾ ಪಬ್ಲಿಕ್ ಶಾಲೆ, ದೇವಣಿಗೇರಿ ಬಿ.ಸಿ. ಪ್ರೌಢ ಶಾಲೆ, ಕೂರ್ಗ್ ವ್ಯಾಲಿ ಶಾಲೆ, ಅಮ್ಮತ್ತಿಯ ಗುಡ್ ಶೆಫರ್ಡ್ ಕಾನ್ವೆಂಟ್ ಶಾಲೆ, ಬಾಳುಗೋಡು ಸರ್ಕಾರಿ ಏಕಲವ್ಯ ಮಾದರಿ ವಸತಿ ಶಾಲೆ, ಹೆಗ್ಗಳ ಸರ್ಕಾರಿ ಸಂಯುಕ್ತ ಪ್ರೌಢಶಾಲೆ, ಬಿಳುಗುಂದ ಸರ್ಕಾರಿ ಪ್ರೌಢಶಾಲೆ, ಮಾಲ್ದಾರೆ ಸರ್ಕಾರಿ ಪ್ರೌಢ ಶಾಲೆ, ವಿರಾಜಪೇಟೆ ಸರ್ಕಾರಿ ಜೂನಿಯರ್ ಕಾಲೇಜು, ಕುಟ್ಟಂದಿಯ ಕೆ.ವಿ. ಪ್ರೌಢ ಶಾಲೆ, ಬಾಳುಗೋಡು ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ತಿತಿಮತಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಅಮ್ಮತ್ತಿ ಕಾರ್ಮಾಡು ನೇತಾಜಿ ಇಂಗ್ಲೀಷ್ ಮಾಧ್ಯಮ ಪ್ರೌಢಶಾಲೆ, ಪೊನ್ನಂಪೇಟೆಯ ಹಳ್ಳಿಗಟ್ಟು ನಿನಾದ ಇಂಗ್ಲೀಷ್ ಮಾಧ್ಯಮ ಪ್ರೌಢ ಶಾಲೆ, ಬಿಟ್ಟಂಗಾಲದ ರೋಟರಿ ಇಂಗ್ಲೀಷ್ ಮಾಧ್ಯಮ ಪ್ರೌಢ ಶಾಲೆ, ಅರುವತ್ತೋಕ್ಲು ಗ್ರಾಮದ ಸರ್ವದೈವತ್ವ ಇಂಗ್ಲೀಷ್ ಮಾಧ್ಯಮ ಶಾಲೆ, ವಿರಾಜಪೇಟೆಯ ಸೆಂಟ್ ಆನ್ಸ್ ಇಂಗ್ಲೀಷ್ ಮಾಧ್ಯಮ ಪ್ರೌಢ ಶಾಲೆ, ಪೊನ್ನಂಪೇಟೆಯ ಸಂತ ಅಂತೋಣಿ ಇಂಗ್ಲೀಷ್ ಮಾಧ್ಯಮ ಪ್ರೌಢ ಶಾಲೆ.
ಸೋಮವಾರಪೇಟೆ ತಾಲ್ಲೂಕಿನಲ್ಲಿ ಶೇ.100 ರಷ್ಟು ಫಲಿತಾಂಶ : ಸೋಮವಾರಪೇಟೆ ತಾಲ್ಲೂಕಿನ ಹುದಿಕೇರಿಯ ಆಂಗ್ಲೋ ವೆರ್ಣಕುಲಾರ್ ಪ್ರೌಢ ಶಾಲೆ, ಗೌಡಳ್ಳಿಯ ಬಿಜಿಎಸ್ ಪಬ್ಲಿಕ್ ಶಾಲೆ, ಚೌಡ್ಲು ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ, ಕಿರಗಂದೂರು ಸರ್ಕಾರಿ ಪ್ರೌಢ ಶಾಲೆ, ನಿಡ್ತ ಗ್ರಾಮದ ಸರ್ಕಾರಿ ಸಂಯುಕ್ತ ಪ್ರೌಢ ಶಾಲೆ, ಕೊಡ್ಲಿಪೇಟೆ ಸಂಯುಕ್ತ ಪ್ರೌಢ ಶಾಲೆ, ಕುಶಾಲನಗರದ ಸರ್ಕಾರಿ ಸಂಯುಕ್ತ ಬಾಲಕಿಯರ ಪ್ರೌಢಶಾಲೆ, ಅಂಕನಹಳ್ಳಿ ಸರ್ಕಾರಿ ಪ್ರೌಢ ಶಾಲೆ, ಗೋಣಿಮರೂರು ಸರ್ಕಾರಿ ಪ್ರೌಢಶಾಲೆ, ಕಾನ್‍ಬೈಲು ಸರ್ಕಾರಿ ಪ್ರೌಢಶಾಲೆ, ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆ, ಸೂರ್ಲಬ್ಬಿ ಸರ್ಕಾರಿ ಪ್ರೌಢಶಾಲೆ, ಸೋಮವಾರಪೇಟೆ ಸರ್ಕಾರಿ ಜೂನಿಯರ್ ಕಾಲೇಜು, ಆಲೂರು ಸಿದ್ದಾಪುರದ ಜಾನಕಿ ಕಾಳಪ್ಪ ಪ್ರೌಢಶಾಲೆ, ಕುಶಾಲನಗರದ ಜ್ಞಾನ ಭಾರತಿ ಇಂಗ್ಲೀಷ್ ಮಾಧ್ಯಮ ಪ್ರೌಢಶಾಲೆ, ಚೌಡ್ಲು ಗ್ರಾಮದ ಜ್ಞಾನ ವಿಕಾಸ ಇಂಗ್ಲೀಷ್ ಮಾಧ್ಯಮ ಪ್ರೌಢಶಾಲೆ, ಗಂಧದ ಕೋಟೆಯ ಕೆಎಂಟಿ ಇಂಗ್ಲೀಷ್ ಮಾಧ್ಯಮ ಶಾಲೆ, ಮಸಗೋಡು ಚೆನ್ನಮ್ಮ ಪ್ರೌಢಶಾಲೆ, ಆಲೂರು ಸಿದ್ದಾಪುರದ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಹಟ್ಟಿ ಹೊಳೆಯ ನಿರ್ಮಲ ವಿದ್ಯಾಭವನ ಇಂಗ್ಲೀಷ್ ಮಾಧ್ಯಮ ಪ್ರೌಢಶಾಲೆ, ಸೋಮವಾರಪೇಟೆಯ ವಿಕ್ಟೋರಿಯ ಪ್ರೌಢಶಾಲೆ, ಸುಂಟಿಕೊಪ್ಪದ ಸಂತ ಮೇರಿ ಇಂಗ್ಲೀಷ್ ಮಾಧ್ಯಮ ಪ್ರೌಢಶಾಲೆ, ಕೊಡಗರಹಳ್ಳಿಯ ಶಾಂತಿನಿಕೇತನ ಪ್ರೌಢಶಾಲೆ, ಶನಿವಾರಸಂತೆ ಶ್ರೀ ವಿಘ್ನೇಶ್ವರ ಬಾಲಕಿಯರ ಪ್ರೌಢಶಾಲೆ, ಶ್ರೀ ವಿಘ್ನೇಶ್ವರ ಗೋಲ್ಡನ್ ಇಂಗ್ಲೀಷ್ ಮಾಧ್ಯಮ ಶಾಲೆ, ಕಿರಿಕೊಡ್ಲಿ ಮಠದ ಶ್ರೀ ಶ್ರೀ ಸದಾಶಿವ ಸ್ವಾಮೀಜಿ ಇಂಗ್ಲೀಷ್ ಮಾಧ್ಯಮ ಪ್ರೌಢಶಾಲೆ, ದೊಡ್ಡಕೊಡ್ಲಿ ಗ್ರಾಮದ ಶ್ರೀ ಶ್ರಿ ಶಿವಕುಮಾರ ಸ್ವಾಮೀಜಿ ಇಂಗ್ಲೀಷ್ ಮಾಧ್ಯಮ ಶಾಲೆ, ಕೊಡ್ಲಿಪೇಟೆಯ ಸೆಂಟ್ ಆನ್ಸ್ ಇಂಗ್ಲೀಷ್ ಮಾಧ್ಯಮ ಪ್ರೌಢಶಾಲೆ, ಬಿದರೂರು ಗ್ರಾಮದ ಸುಪ್ರಜಾ ಗುರುಕುಲ ಇಂಗ್ಲೀಷ್ ಮಾಧ್ಯಮ ಶಾಲೆ, ಗುಡ್ಡೆಹೊಸೂರು ಗ್ರಾಮದ ಉದ್ಘಮ್ ಪ್ರೌಢಶಾಲೆ, ಕೊಡ್ಲೂರು ಗ್ರಾಮದ ಯೂನಿಕ್ ಅಕಾಡೆಮಿ ಪ್ರೌಢಶಾಲೆ, ವಿಶ್ವಮಾನವ ಕುವೆಂಪು ಪ್ರೌಢಶಾಲೆ ಈ ಶಾಲೆಗಳಲ್ಲಿ ಶೇ.100 ರಷ್ಟು ಫಲಿತಾಂಶ ಬಂದಿದೆ. ಈ ಬಾರಿ ವಿಷಯವಾರು ಶಿಕ್ಷಕರಿಗೆ ವಿಶೇಷ ತರಬೇತಿಯನ್ನು ನೀಡಿ ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ನೀಡಲಾಗಿತ್ತು, ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಶಾಲಾ ಹಂತದಲ್ಲಿ ನಡೆಸಲಾಗಿತ್ತು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕರಾದ ಎಂ.ಚಂದ್ರಕಾಂತ್ ಅವರು ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ವಿವರ: ಕುಶಾಲನಗರ ಫಾತಿಮಾ ಕಾನ್ವೆಂಟ್ ಪ್ರೌಢಶಾಲೆಯ ಸಿರಿ ಎಂ. 622(ಪ್ರಥಮ), ಎನ್.ಸಿ.ತೇಜಸ್ವಿನಿ 620(ದ್ವಿತೀಯ), ವಿರಾಜಪೇಟೆ ತಾಲ್ಲೂಕು ಕಳತ್ಮಾಡು ಲಯನ್ಸ್ ಪ್ರೌಢಶಾಲೆಯ ಕೆ.ಡಿ.ದಕ್ಷಿತಾ 619 (ತೃತೀಯ) ಸ್ಥಾನ ಪಡೆದಿದ್ದಾರೆ.
ಸೋಮವಾರಪೇಟೆ ತಾಲ್ಲೂಕು ಶನಿವಾರಸಂತೆ ಸೇಕ್ರೇಡ್ ಹಾರ್ಟ್ ಇಂಗ್ಲೀಷ್ ಮಾಧ್ಯಮ ಪ್ರೌಢ ಶಾಲೆಯ ಜ್ಞಾನೇಶ್ ಕುಮಾರ್ ಬಿ.ಎಸ್ 618, ಕುಶಾಲನಗರ ಫಾತಿಮಾ ಕಾನ್ವೆಂಟ್ ಪ್ರೌಢಶಾಲೆಯ ಸಿಂಧು ಎಂ. 618, ಸೋಮವಾರಪೇಟೆ ತಾಲ್ಲೂಕು ಶನಿವಾರಸಂತೆ ಸೇಕ್ರೇಡ್ ಹಾರ್ಟ್ ಇಂಗ್ಲೀಷ್ ಮಾಧ್ಯಮ ಪ್ರೌಢಶಾಲೆಯ ದೀಕ್ಷಾ ಸಿ.ಎಸ್. 616 ಮತ್ತು ತನಿಷ್ಕ ಎನ್. ಕೂಚಳ್ಳಿ 616, ವಿರಾಜಪೇಟೆ ಸೇಂಟ್ ಆನ್ಸ್ ಪ್ರೌಢಶಾಲೆಯ ಹರಿಕೃಷ್ಣನ್ ಎಂ. 615, ಬಳಗುಂದ ಸಂತ ಜೋಸೆಫರ ಇಂಗ್ಲೀಷ್ ಮಾಧ್ಯಮ ಪ್ರೌಢಶಾಲೆಯ ವರ್ಷಿಣಿ ಎನ್.ಸಿ. 614, ಮಡಿಕೇರಿ ಸಂತ ಜೋಸೆಪರ ಕಾನ್ವೆಂಟ್ ಕಾಂಪೋಸಿಟ್ ಪ್ರೌಢಶಾಲೆಯ ಧೃತಿ ದೇಚಮ್ಮ ಸಿ.ಎಂ., 613 ಹಾಗೂ ಗೋಣಿಕೊಪ್ಪಲು ಕಳತ್ಮಾಡು ಲಯನ್ಸ್ ಪ್ರೌಢ ಶಾಲೆಯ ವರ್ಷ ರಾವ್ ಬಿ.ಎಲ್. 613 ಅಂಕ ಪಡೆದಿದ್ದಾರೆ ಎಂದು ಶಿಕ್ಷಣಾಧಿಕಾರಿ ಹಾಗೂ ಎಸ್‍ಎಸ್‍ಎಲ್‍ಸಿ ಪರೀಕ್ಷಾ ನೋಡಲ್ ಅಧಿಕಾರಿ ಎಂ.ಮಹದೇವ ಸ್ವಾಮಿ ಅವರು ಮಾಹಿತಿ ನೀಡಿದ್ದಾರೆ.