ಮಡಿಕೇರಿ ನ.18 NEWS DESK : ಕ್ರೀಡೆಯಲ್ಲಿ ತೋರಿಸುವ ಸ್ಫೂರ್ತಿ ಜೀವನದಲ್ಲಿಯೂ ಹಾಸುಹೊಕ್ಕಾಗಬೇಕೆಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಕರೆ ನೀಡಿದ್ದಾರೆ. ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಮಡಿಕೇರಿ ವಕೀಲರ ಸಂಘದ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕರು, ಸಮಾಜಕ್ಕೆ ಒಳಿತುಂಟು ಮಾಡುವ ವಿಚಾರಗಳಿಗೆ ಸಂಬಂಧಿಸಿದಂತೆ ವಕೀಲ ವೃಂದ ಕಾಳಜಿಯುತ ಕತ೯ವ್ಯ ತೋರುವ ಮೂಲಕ ಸಮಾಜಕ್ಕೆ ಮಾಗ೯ದಶ೯ನ ನೀಡುವಂತಾಗಬೇಕೆಂದು ಆಶಿಸಿದರು. ಕ್ರೀಡಾಕೂಟಗಳು ಎಲ್ಲರನ್ನೂ ಒಗ್ಗೂಡಿಸುತ್ತದೆ, ಸ್ಫೂರ್ತಿಯ ಜತೇ ಉತ್ಸಾಹ ಕೂಡ ಎಲ್ಲರಲ್ಲಿಯೂ ಮೂಡುವಂತಾಗುತ್ತದೆ, ಇಂಥ ಕ್ರೀಡಾಕೂಟದ ಮೂಲಕ ವಕೀಲ ವೃಂದ ಒಗ್ಗಟ್ಟು ಪ್ರದಶಿ೯ಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ವಕೀಲರ ಸಂಘದ ಬೇಡಿಕೆಯಾಗಿರುವ ನ್ಯಾಯಾಲಯಕ್ಕೆ ಸೂಕ್ತ ತಡೆಗೋಡೆ ಮತ್ತು ನ್ಯಾಯಾಲಯದ ರಸ್ತೆ ದುರಸ್ಥಿಯನ್ನು ವಿಳಂಭರಹಿತವಾಗಿ ಕೈಗೊಳ್ಳುವುದಾಗಿ ಭರವಸೆ ನೀಡಿದರು. ತನ್ನ ಮಾವ ಹೆಚ್.ಎನ್. ]ನಂಜೇಗೌಡ ಮತ್ತು ತಂದೆ ಎ.ಮಂಜು ಕೂಡ ವಕೀಲರಾಗಿದ್ದದ್ದನ್ನು ಸ್ಮರಿಸಿಕೊಂಡ ಶಾಸಕ ಮಂಥರ್ ಗೌಡ, ವಕೀಲ ವೖತ್ತಿ ಸಮಾಜದಲ್ಲಿ ಇಂದಿಗೂ ಗೌರವವನ್ನು ಉಳಿಸಿಕೊಂಡು ಸಮಾಜದ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದೂ ಶ್ಲಾಘಿಸಿದರು. ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪುಂಡಲಿಕ ಹೊಸಮನಿ ಅವರು ಕ್ರೀಡಾಜ್ಯೋತಿ ಬೆಳಗಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಒಳ್ಳೆಯ ಆರೋಗ್ಯ ಇದ್ದಾಗ ಮಾತ್ರ ಉತ್ತಮ ಮನಸ್ಸು ಕೂಡ ಇರುತ್ತದೆ. ಈ ನಿಟ್ಟಿನಲ್ಲಿ ವಕೀಲರ ಕ್ರೀಡಾಕೂಟ ಉತ್ತಮ ಆರೋಗ್ಯ ಹೊಂದಲು ಸಹಕಾರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು, ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಪ್ರಶಾಂತಿ ಮಾತನಾಡಿ, ವಕೀಲರು ಒಂದು ದಿನ ಎಲ್ಲಾ ಕೆಲಸದ ಒತ್ತಡ ಮರೆತು ಕ್ರೀಡಾಕೂಟದ ಮೂಲಕ ಸಂಭ್ರಮಿಸುವುದು ಉತ್ತಮ ಬೆಳವಣಿಗೆ ಎಂದು ಶ್ಲಾಘಿಸಿದರು. ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಎಂ.ಎ.ನಿರಂಜನ್ ಮಾತನಾಡಿ, ವಕೀಲರಲ್ಲಿನ ಕ್ರೀಡಾ ಪ್ರತಿಭೆಯನ್ನು ಪ್ರೋತ್ಸಾಹಿಸುವುದರ ಜತೆಗೇ ಎಲ್ಲಾ ಕೆಲಸಕಾಯ೯ಗಳ ಜಂಜಾಟ ಮರೆತು ಒಗ್ಗಟ್ಟಾಗಿ ಕ್ರೀಡಾಪಂದ್ಯಾವಳಿಗಳಲ್ಲಿ ಪಾಲ್ಗೊಂಡು ಕೌಟುಂಬಿಕ ಸಾಮರಸ್ಯ ಕಂಡುಕೊಳ್ಳಲು ಇಂಥ ಕ್ರೀಡಾಕೂಟವನ್ನು ವಕೀಲರ ಸಂಘ ಆಯೋಜಿಸುತ್ತಿದೆ ಎಂದು ಹೇಳಿದರು. ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಸವರಾಜ, ವಕೀಲರ ಸಂಘದ ಪ್ರಧಾನ ಕಾಯ೯ದಶಿ೯ ಡಿ.ಎಂ.ಕೇಶವ, ಉಪಾಧ್ಯಕ್ಷ ಎಂ.ಪಿ.ನಾಗರಾಜ್, ಖಜಾಂಜಿ ಜಿ.ಆರ್.ರವಿಶಂಖರ್, ಜಂಟಿ ಕಾಯ೯ದಶಿ೯ ಪವನ್ ಪೆಮ್ಮಯ್ಯ, ಸಕಾ೯ರಿ ಅಭಿಯೋಜಕರಾದ ಶ್ರೀಧರನ್ ನಾಯರ್, ರುದ್ರ ಪ್ರಸನ್ನ, ನ್ಯಾಯಾಲಯ ಸಿಬ್ಬಂದಿ ವಗ೯ದವರು ಪಾಲ್ಗೊಂಡಿದ್ದರು, ವಕೀಲ ಕಪಿಲ್ ಕಾಯ೯ಕ್ರಮ ನಿರೂಪಿಸಿದರು. ವಕೀಲರಿಗಾಗಿ ಕ್ರಿಕೆಟ್ ಹಗ್ಗಜಗ್ಗಾಟ, ಅಥ್ಸೆಟಿಕ್ಸ್ ಸೇರಿದಂತೆ ವಿವಿಧ ಕ್ರೀಡಾ ಸ್ಪದೆ೯ಗಳನ್ನು ಆಯೋಜಿಸಲಾಗಿತ್ತು, ಮಡಿಕೇರಿ ವಕೀಲರ ಸಂಘದ ನೂರಾರು ಸದಸ್ಯರು ದಿನವಿಡೀ ಆಯೋಜಿತ ಕ್ರೀಡಾಕೂಟದಲ್ಲಿ ಸಂಭ್ರಮದಿಂದ ಪಾಲ್ಗೊಂಡು ಗಮನ ಸೆಳೆದರು.