ಮಡಿಕೇರಿ ಮೇ 16 NEWS DESK : ಸಿ.ಬಿ.ಎಸ್.ಇ. ಬೋರ್ಡ್ ಇತ್ತೀಚೆಗೆ ಹತ್ತು ಮತ್ತು ಹನ್ನೆರಡನೇ ತರಗತಿಯ ಫಲಿತಾಂಶ ಪ್ರಕಟಿಸಿದೆ. ಆ ನಿಟ್ಟಿನಲ್ಲಿ ಕೊಡಗು ಜಿಲ್ಲೆಯ ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯವು ಅತ್ಯುತ್ತಮ ಫಲಿತಾಂಶ ಗಳಿಸಿದೆ. ಹತ್ತು ಮತ್ತು ಹನ್ನೆರಡನೆಯ ತರಗತಿಗಳಲ್ಲಿ ಶೇ.100 ಮಕ್ಕಳು ಉತ್ತೀರ್ಣರಾಗಿದ್ದಾರೆ.
ಹತ್ತನೆಯ ತರಗತಿಯಲ್ಲಿ ಎ.ಕೀರ್ತನಾ ಶೇ.95 ಮತ್ತು ಎಂ.ಎಂ.ತನುಷಾ ಶೇ.95(ಪ್ರಥಮ), ಎಂ.ಅಮೋಘರಾಜ್ ಶೇ.94.4(ದ್ವಿತೀಯ) ಹಾಗೂ ಎಚ್. ಐಸಿರಿ ಶೇ.93.6 (ತೃತೀಯ) ಸ್ಥಾನ ಪಡೆದಿದ್ದಾರೆ.
ಹನ್ನೆರಡನೇ ತರಗತಿ ವಿಜ್ಞಾನ- ಜಿ.ಎ.ಅಂಕಿತಾ ಶೇ.94.4(ಒರಥಮ), ಸಮನ್ವಿತಾ ಶೇ.92(ದ್ವಿತೀಯ) ಹಾಗೂ ಭೂಮಿ ಮಂಜುನಾಥ ಶೇ.90.4(ತೃತೀಯ) ಸ್ಥಾನ ಪಡೆದಿದ್ದಾರೆ.
ಹನ್ನೆರಡನೇ ತರಗತಿ ವಾಣಿಜ್ಯ ವಿಭಾಗದಲ್ಲಿ ರಚನಾ ಶೇ.92.2(ಪ್ರಥಮ), ಪ್ರಥಮ್ ಹೆಬ್ಬಾರ್ ಶೇ.90.4(ದ್ವಿತೀಯ) ಹಾಗೂ ಕೆ.ಎಸ್.ರೋಹಿತ್ ಶೇ.87.2(ತೃತೀಯ) ಸ್ಥಾನ ಪಡೆದಿದ್ದಾರೆ ಎಂದು ಪ್ರಾಂಶುಪಾಲರಾದ ಒ.ಎಂ.ಪಂಕಜಾಕ್ಷನ್ ಅಭಿನಂದಿಸಿದ್ದಾರೆ.