ಸುಂಟಿಕೊಪ್ಪ, ಜೂ.3 NEWS DESK : ಗರಗಂದೂರು ಬಿ ತೋಟದ ಸಮೀಪದ (ಹೊಸತೋಟ) ಬಸ್ ಸ್ಟ್ಯಾಂಡ್ ನಲ್ಲಿ ವ್ಯಕ್ತಿಯೋರ್ವರ ಮೃತ ದೇಹ ಪತ್ತೆಯಾಗಿದೆ. ಸೋಮವಾರ ಸಂಜೆ ಹೊಸತೋಟ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೋರ್ವರ ಮೃತದೇಹ ಪತ್ತೆಯಾಗಿದ್ದು, ಮೃತ ವ್ಯಕ್ತಿ ಮೈಸೂರು ಜಿಲ್ಲೆಯ ಇಲವಾಲ ಸಮೀಪದ ಹೊಸಕೋಟೆ ಚಂದ್ರು (42) ಎಂದು ಗುರುತಿಸಲಾಗಿದೆ. ಊಟದ ಬ್ಯಾಗ್ ಇರಿಸಿಕೊಂಡಿದ್ದ ಚಂದ್ರು, ಬಸ್ ನಿಲ್ದಾಣದಲ್ಲಿ ಕುಳಿತಲ್ಲೇ ಅಸುನಿಗಿದ್ದಾರೆ. ಮೃತ ದೇಹವನ್ನು ಮಡಿಕೇರಿ ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಸುಂಟಿಕೊಪ್ಪ ಪೊಲೀಸ್ ಠಾಣೆಗೆ ಮಾಹಿತಿ ಬಂದಮೇರೆಗೆ ಠಾಣಾಧಿಕಾರಿ ಎಂ.ಸಿ.ಶ್ರೀಧರ್ ಹಾಗೂ ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.









