ಕುಶಾಲನಗರ ಜೂ.12 NEWS DESK : ಎಸ್.ಕೆ.ಎಸ್.ಎಸ್.ಎಫ್ ಕೊಡಗು ಜಿಲ್ಲಾ ಸಮಿತಿಯ ವತಿಯಿಂದBRUSH UP – 2K24 ಜಿಲ್ಲಾ ಸಮಿತಿ ಹಾಗೂ ಉಪಸಮಿತಿಗಳ ನಾಯಕರಿಗೆ ತರಬೇತಿ ಕಾರ್ಯಕ್ರಮ ನಡೆಯಿತು.
ಕುಶಾಲನಗರದ ಬಿಜಿಟಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಎಸ್.ಕೆ.ಎಸ್.ಎಸ್.ಎಫ್ ರಾಜ್ಯ ಸಮಿತಿ ಉಪಾಧ್ಯಕ್ಷ ತಮ್ಲೀಕ್ ದಾರಿಮಿ ಉದ್ಘಾಟಿಸಿದರು.
ಪ್ರಸ್ತುತ ಸಾಲಿನಲ್ಲಿ ಎಸ್.ಕೆ.ಎಸ್.ಎಸ್.ಎಫ್ ಶಾಖಾ ಸಮಿತಿಯು ರೋಗಿಗಳಿಗೆ ಸಂಗ್ರಹಿಸುವ ಸಹಾಯ ಧನದಲ್ಲಿ ಜಿಲ್ಲೆಯಲ್ಲಿಯೇ ಅತ್ಯಧಿಕ ಮೊತ್ತವನ್ನು ಸಂಗ್ರಹಿಸಿದ ಸಿದ್ದಾಪುರ, ನೆಲ್ಲಿಹುದಿಕೇರಿ ಹಾಗೂ ಕೊಡ್ಲಿಪೇಟೆ ಶಾಖೆಗಳಿಗೆ ಕಾರ್ಯಕ್ರಮದಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಮಾಧ್ಯಮ ವಿಭಾಗದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಉನೈಸ್ ಹುಂಡಿ, ಫರ್ಹಾನ್ ನೆಲ್ಲಿಹುದಿಕೇರಿ ಹಾಗೂ ಸಿದ್ದೀಕ್ ಶನಿವಾರಸಂತೆ ಅವರನ್ನು ಅಭಿನಂದಿಸಲಾಯಿತು.
ಎಸ್.ಕೆ.ಎಸ್.ಎಸ್.ಎಫ್ ಜಿಲ್ಲಾಧ್ಯಕ್ಷ ಶುಹೈಬ್ ಫೈಝಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್.ಕೆ.ಎಸ್.ಎಸ್.ಎಫ್ ರಾಜ್ಯ ಉಪಾಧ್ಯಕ್ಷರಾದ ಇಕ್ಬಾಲ್ ಬಾಳಿಲ, ಪ್ರಮುಖರಾದ ಹಂಸ ಹಾಜಿ, ಅಬ್ದುಲ್ ಮಜೀದ್, ಅಬ್ದುಲ್ಲಾ ಫ್ಲೈ ಕೂರ್ಗ್ ಹಾಗೂ ಜಿಲ್ಲಾ ಸಮಿತಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಉಪಸಮಿತಿಗಳ ನಾಯಕರುಗಳು ಮತ್ತು ಸದಸ್ಯರುಗಳು ಭಾಗವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಫೀಕ್ ಬಾಖವಿ ಸ್ವಾಗತಿಸಿದರು. ಸಿದ್ದೀಕ್ ವಾಫಿ ನಿರೂಪಿಸಿ ವಂದಿಸಿದರು.