ಮಂಗಳೂರು ಜೂ.19 NEWS DESK : ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯಕ್ಕೆ ವೇಗ ನೀಡಲು ಜೂ.24 ರಿಂದ ಜೂ 30ರ ವರೆಗೆ ಗೋವಾ ಪೋಂಡಾದಲ್ಲಿನ ಶ್ರೀ ರಾಮನಾಥ ದೇವಸ್ಥಾನದಲ್ಲಿ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶಿನವನ್ನು ಹಿಂದೂ ಜನಜಾಗೃತಿ ಸಮಿತಿಯ ಚಂದ್ರ ಮೊಗವೀರ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿವೇಶನದಲ್ಲಿ ಹಿಂದೂ ರಾಷ್ಟ್ರಕ್ಕೆ ಸಂಬಂಧಿತ ವಿವಿಧ ವಿಷಯಗಳ ಬಗ್ಗೆ ವಿಶೇಷ ಗಣ್ಯರ ಸಂವಾದದ ಜೊತೆಗೆ ಹಿಂದೂ ರಾಷ್ಟ್ರದ ಅಡಿಪಾಯಕ್ಕಾಗಿ ಚರ್ಚೆ ನಡೆಯುವುದು ಎಂದರು.
ಈ ಅಧಿವೇಶನಕ್ಕೆ ಅಮೇರಿಕಾ, ಇಂಗ್ಲೆಂಡ್. ದಕ್ಷಿಣ ಆಫ್ರಿಕಾ, ಘಾನಾ, ನೇಪಾಳ ಮತ್ತು ಬಾಂಗ್ಲಾದೇಶದ ಪ್ರತಿನಿಧಿಗಳು ಬರುವರು. ಜೊತೆಗೆ ಭಾರತದ 26 ರಾಜ್ಯಗಳಿಂದ ಸಾವಿರಕ್ಕಿಂತಲೂ ಹೆಚ್ಚಿನ ಸಂಘಟನೆಗಳು 2000 ಕ್ಕಿಂತಲೂ ಹೆಚ್ಚಿನ ಪ್ರತಿನಿಧಿಗಳು, ಇಂದೋರಿನ ಮಹಾಮಂಡಲೇಶ್ವರ ಸ್ವಾಮಿ, ಪ್ರಣವಾನಂದ ಸರಸ್ವತಿ ಮಹಾರಾಜ, ಇಂಟರ್ನ್ಯಾಷನಲ್ ವೇದಾಂತ ಸೊಸೈಟಿಯ ನಿರ್ಗುಣಾನಂದಗಿರಿ ಮಹಾರಾಜ್, ಛತ್ತೀಸ್ಗಡದ ಶ್ರೀ ರಾಮಬಾಲಕದಾಸ ಮಹಾತ್ಯಾಗಿ ಮಹಾರಾಜ, ಛತ್ತಿಸ್ಗಡದ ಶದಾಣಿ ದರ್ಬಾರಿನ ಡಾ.ಯಧಿಷ್ಠಿರಲಾಲ್ ಮಹಾರಾಜ ಸೇರಿದಂತೆ ಸಂತರು, ಶ್ರೀರಾಮ ಜನ್ಮಭೂಮಿ. ಕಾಶಿಯ ಜ್ಞಾನವಾಪಿ ಪ್ರಕರಣದ ನ್ಯಾಯವಾದಿ (ಪೂ.) ಹರಿಶಂಕರ ಜೈನ್, ಶ್ರೀ ವಿಷ್ಣು
ಶಂಕರ ಜೈನ ಸರ್ವೋಚ್ಚ ನ್ಯಾಯಾಲಯದ ವಕೀಲರಾದ ಅಶ್ವಿನಿ ಉಪಾಧ್ಯಾಯ, ಸ್ವಾತಂತ್ರ್ಯವೀರ ಸಾವರ್ಕರ್ ಸ್ಮಾರಕದ ಕಾರ್ಯಾಧ್ಯಕ್ಷ
ಶ್ರೀ ರಣಜಿತ ಸಾವರ್ಕರ, ಭಾಗ್ಯನಗರದ ಶಾಸಕ ಟಿ. ರಾಜಸಿಂಹ, ದೆಹಲಿ ಹಿಂದೂ ಇಕೋ ಸಿಸ್ಟಮ್ನ ಶ್ರೀ. ಕಪಿಲ ಮಿಶ್ರಾ, ಭಾರತದ
ಮಾಜಿ ಮಾಹಿತಿ ಆಯುಕ್ತ ಶ್ರೀ ಉದಯ ಮಾಹೂರಕರ ಇವರ ಜೊತೆಗೆ ಹಿರಿಯ ನ್ಯಾಯವಾದಿಗಳು, ಉದ್ಯಮಿಗಳು, ವಿಚಾರವಂತರು.
ಲೇಖಕರು, ಪತ್ರಕರ್ತರು, ಮಂದಿರ ವಿಶ್ವಸ್ಥರು ಇವರ ಜೊತೆಗೆ ಅನೇಕ ಸಮವಿಚಾರಧಾರೆಯ ಸಾಮಾಜಿಕ, ರಾಷ್ಟ್ರೀಯ ಮತ್ತು ಆಧ್ಯಾತ್ಮಿಕ ಸಂಘಟನೆಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಜನಾರ್ಧನ ಅರ್ಕುಳ, ಹಿಂದೂ ಜನಜಾಗೃತಿ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯಕ ವವಿತ್ಸಾ ಕುಡ್ಡ, ನ್ಯಾಯವಾದಿ ತೀರ್ತೇಶ ಉಪಸ್ಥಿತರಿದ್ದರು.