ಮಡಿಕೇರಿ ಜೂ.20 NEWS DESK : ಭಾಗಮಂಡಲದ ಕೆವಿಜಿ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಕಲಿತ ಮೆಕ್ಯಾನಿಕ್ ಮೋಟಾರ್ ವೆಹಿಕಲ್ ವೃತ್ತಿ ವಿಭಾಗದ ಹಳೆ ವಿದ್ಯಾರ್ಥಿಗಳು ಸಂಸ್ಥೆಗೆ ಕೊಡುಗೆಯಾಗಿ ನೀಡಿದ ಸ್ಮಾರ್ಟ್ ಕ್ಲಾಸ್ ಅನ್ನು ಉದ್ಘಾಟಿಸಲಾಯಿತು.
ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಸುಳ್ಯ ಕಮಿಟಿ ಬಿ ಯ ಅಧ್ಯಕ್ಷ ಡಾ. ಕೆ.ವಿ.ರೇಣುಕ ಪ್ರಸಾದ್ ಸ್ಮಾರ್ಟ್ ಕ್ಲಾಸಿಗೆ ಚಾಲನೆ ನೀಡಿದರು.
ವಿ.ಟಿ.ಯು. ಬೆಳಗಾಮಿನ ಎಕ್ಸಿಕ್ಯೂಟಿವ್ ಕೌನ್ಸಿಲ್ ಮೆಂಬರ್ ಡಾ. ಯು.ಜೆ.ಉಜ್ವಲ್ ಪ್ರಸ್ತುತ ಸ್ಮಾರ್ಟ್ ಕ್ಲಾಸಿನ ಮಹತ್ವ, ಆಧುನಿಕ ತಂತ್ರಜ್ಞಾನದ ಮೂಲಕ ಶಿಕ್ಷಣ, ಸಂಸ್ಥೆ ಬೆಳವಣಿಗೆಗೆ ಆಡಳಿತ ಮಂಡಳಿಯ ಕೊಡುಗೆ ಮತ್ತು ಸಹಕಾರದ ಬಗ್ಗೆ ಮಾತನಾಡಿದರು. ಕೈಗಾರಿಕೆ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಕೆ.ವಿ.ಶ್ರೀಕಾಂತ್ ಪ್ರಾಸ್ತಾವಿಕ ನುಡಿಗಳನ್ನಡಿದರು.
ಸಿ.ಕೆ.ವಿನೋದ್ ಸ್ವಾಗತಿಸಿದರು, ಕಿರಿಯ ತರಬೇತಿ ಅಧಿಕಾರಿ ಪುನೀತ್ ಕಾರ್ಯಕ್ರಮ ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ಈ ಸಂಸ್ಥೆಯಲ್ಲಿ ಕಲಿತ ಹಳೆ ವಿದ್ಯಾರ್ಥಿ ಲಕ್ಷ್ಮೀಶ ಅವರನ್ನು ಸನ್ಮಾನಿಸಲಾಯಿತು.










