ವಿರಾಜಪೇಟೆ ಜೂ.21 NEWS DESK : ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಭಟನೆಗಳನ್ನು ಮಾಡುವುದು ಸಂವಿಧಾನ ಬದ್ದವಾದರು. ತೈಲ ಬೆಲೆ ಏರಿಕೆಯನ್ನು ಖಂಡಿಸಿ ಭಾ.ಜ.ಜ. ರಾಷ್ಟ್ರ ನಾಯಕರ ಮತ್ತು ಶಾಸಕರ ಅಣುಕು ಶವ ಯಾತ್ರೆ ನಡೆಸಿ ಪ್ರತಿಕೃತಿ ದಹನ ಮಾಡಿರುವುದು ತನ್ನ ವಿಕೃತಿಯನ್ನು ಮೆರೆದಿರುವುದು ಖಂಡನೀಯ ಎಂದು ಕಾಂಗ್ರೆಸ್ ಪಕ್ಷದ ಪ್ರಮುಖರು ಆರೋಪಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಟ್ಟಡ ರಂಜಿ ಪೂಣಚ್ಚ, ನಗರ ಮತ್ತು ಬ್ಲಾಕ್ ಕಾಂಗ್ರೆಸ್ ವಿರಾಜಪೇಟೆ ಘಟಕದಿಂದ ರಾಷ್ಟ್ರನಾಯಕರು ಸೇರಿದಂತೆ ಶಾಸಕರ ಭಾವಚಿತ್ರವನ್ನಿಟ್ಟು ಅಣುಕು ಶವ ಯಾತ್ರೆ ನಡೆಸಿ ಪ್ರತಿಕೃತಿ ದಹನ ಮಾಡಿರುವುದು ಖಂಡನೀಯ ಎಂದರು.
ಪಕ್ಷಾತೀತವಾಗಿ ಜನಮನ್ನಣೆಯನ್ನು ಗಳಿಸಿರುವ ಕೊಡಗಿನ ಜನಪ್ರಿಯ ಶಾಸಕರು ಮತ್ತು ನೇರ ದಿಟ್ಟ ನುಡಿಯ ಜನಪ್ರತಿನಿಧಿ ಎಂದು ರಾಜ್ಯಮಟ್ಟದ ಮಾಧ್ಯಮಗಳಿಂದ ಪ್ರಶಂಸೆಗೆ ಪಾತ್ರರಾಗಿರುವ ಎ.ಎಸ್.ಪೊನ್ನಣ್ಣ ಅವರ ಭಾವಚಿತ್ರ ಇರಿಸಿ ಮತ್ತು ಕಾಂಗ್ರೆಸ್ ಪಕ್ಷ ರಾಷ್ಟ್ರ ಮಟ್ಟದ ನಾಯಕರ ಅಣುಕು ಶವಯಾತ್ರೆ ನಡೆಸಿ ದಹನ ಮಾಡಿರುವ ಕೌರ್ಯವು ಭಾ.ಜ.ಪ ಪಕ್ಷದ ವಿಕೃತ ಮನಸ್ಸಿನ ಕಾರ್ಯ ಎಂದು ಆರೋಪಿಸಿದರು.
ರಾಷ್ಟೀಕೃತ ಬ್ಯಾಂಕ್ ಗಳನ್ನು ವಿಲೀನಗೋಳಿಸಿ ಇಂದು ದೀವಾಳಿಯತ್ತ ಕೊಂಡ್ಯೋದಾಗ ಭಾ.ಜ.ಪ ಪ್ರತಿಭಟನೆ ನಡೆಸಲಿಲ್ಲಾ, ಗ್ಯಾಸ್ ಬೆಲೆ 1000 ಗಡಿ ದಾಟಿದಾಗ, ದೇಶದ ಸ್ವಾಯಕ್ತ ಸಂಸ್ಥೆಗಳನ್ನು ಖಾಸಗೀಕರಣ ಮಾಡುವ ವೇಳೆಯಲ್ಲಿ ಅಣುಕು ಶವ ಯಾತ್ರೆ ನಡೆಸಲಿಲ್ಲಾ, ಕೆ.ಪಿ.ಎಸ್ಸಿ, ಪಿ.ಎಸ್.ಐ. ಮತ್ತು ನೀಟ್ ಪರೀಕ್ಷೇಗಳಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡಿದಾಗ ರಾಜ್ಯ ನಾಯಕರ ಮತ್ತು ರಾಷ್ಟ್ರ ನಾಯಕರ ಶವಯಾತ್ರೆ ನಡೆಸಲಿಲ್ಲಾ ಎಂದು ಅವರು, ಇತಂಹ ಕೌರ್ಯತೆಯನ್ನು ಮೆರೆದ. ಭಾ.ಜ.ಪ ವು ಇಂದು ಅಭಿವೃದ್ದಿಯನ್ನು ಸಹಿಸದೆ ಇಂತಹಾ ಕಾರ್ಯಕ್ಕೆ ಮುಂದಾಗಿರುವುದು ಶೋಚನೀಯ ಎಂದು ವ್ಯಂಗ್ಯವಾಡಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಅಬ್ದುಲ್ ಸಲಾಂ ಮಾತನಾಡಿ, ಪ್ರತಿಭಟನೆಯ ಹೆಸರಿನಲ್ಲಿ ಶಾಸಕರ ಹೆಸರಿಗೆ ಕಳಂಕ ಬರುವ ರೀತಿಯಲ್ಲಿ ಅಣುಕು ಶವ ಯಾತ್ರೆ ಮಾಡಿರುವುದು ಖಂಡನೀಯ ಎಂದ ಅವರು, ಶಾಸಕರು ಅಜ್ಜಿಕುಟ್ಟೀರ ಸುಬ್ಬಯ್ಯ ಪೊನ್ನಣ್ಣ ಎಂದು ತಿಳಿಯಬೇಕು. ಇವರು ಬೆಂಕಿಯಲ್ಲಿ ಅರಳಿದ ಹೂ ಎಂದು ಬಣ್ಣಿಸಿದರು.
ಜಿಲ್ಲೆಯು ಸೇರಿದಂತೆ ರಾಜ್ಯದಲ್ಲಿ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಜನಮನ್ನಣೆಯನ್ನು ಗಳಿಸಿರುವ ವ್ಯಕ್ತಿ. ಭಾ.ಜ.ಪ ದ ಆಟಗಳು ಇವರ ಮುಂದೇ ಶೂನ್ಯ. ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡಿದಲ್ಲಿ ತಕ್ಕ ಶಾಸ್ತಿಯಗುತ್ತದೆ ಎಂದು ಎಚ್ಚರಿಸಿದರು.
ನಗರ ಕಾಂಗ್ರೆಸ್ ಅಧ್ಯಕ್ಷ ಮಾದಂಡ ತಿಮ್ಮಯ್ಯ ಮಾತನಾಡಿ, ಪ್ರತಿಭಟನೆ ಮಾಡಲು ಎಲ್ಲಾರಿಗೂ ಸಮಾನ ಅವಕಾಶ ಕಲ್ಪಿಸಿದೆ. ಪ್ರತಿಭಟನೆಯ ರೂಪದಲ್ಲಿ ವಿಕೃತಭಾವ ಕಾಣಿಸಬಾರದು, ಒಂದು ವರ್ಷದ ಅವಧಿಯಲ್ಲಿ ಶಾಸಕರು ಹಲವಾರು ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದಾರೆ ಎಂದರು.
ಕಳೆದ 20 ವರ್ಷಗಳಲ್ಲಿ ಕೊಡಗಿನಲ್ಲಿ ಭಾ.ಜ.ಪ ಶಾಸಕರು ಆಳ್ವಿಕೆಯ ವೇಳೆಯಲ್ಲಿ ಪ್ರತಿಭಟನೆಗಳು ನಡೆದಿವೆ. ಆದರೇ ಇಂತಹ ಶವ ಯಾತ್ರೆ ಅಣುಕು ಪ್ರದರ್ಶನ ಮಾಡಲಿಲ್ಲಾ. ಇದು ನೈಜ ರಾಜಕೀಯಕ್ಕೆ ಕಳಂಕ ತರುವಂತೆ. ಪ್ರತಿಕೃತಿ ದಹನ, ಅಣುಕು ಶವ ಯಾತ್ರೆಯ ಘಟನೆಯನ್ನು ನಗರ ಕಾಂಗ್ರೆಸ್ ಘಟವು ಬಲವಾಗಿ ಖಂಡಿಸುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಿರಾಜಪೇಟೆ ಪುರಸಭಾ ಸದಸ್ಯರಾದ ಮೊಹಮ್ಮದ್ ರಾಫಿ, ಹೆಚ್.ಎಸ್ ಮತೀನ್, ಡಿ.ಪಿ.ರಾಜೇಶ್ ಪದ್ಮನಾಭ, ಮನೆಯಪಂಡ ದೇಚಮ್ಮ ಕಾಳಪ್ಪ ಉಪಸ್ಥಿತರಿದ್ದರು.
ವರದಿ : ಕಿಶೋರ್ ಕುಮಾರ್ ಶೆಟ್ಟಿ