ಕೂಡಿಗೆ ಜೂ.21 NEWS DESK : ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು (ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ಕೂಡುಮಂಗಳೂರು ಗ್ರಾ.ಪಂ, ಶಾಲೆಯ ರಾಷ್ಟ್ರೀಯ ಸೇವಾ ಯೋಜನೆ ( ಎನ್.ಎಸ್.ಎಸ್.) , ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಶಾಲಾ ಘಟಕ, ಕುಶಾಲನಗರ ಜೆ.ಸಿ.ಐ.ಕಾವೇರಿ ಸಂಸ್ಥೆ, ಅಳಿಲು ಸೇವಾ ಟ್ಟಸ್ಟ್ ನ ವತಿಯಿಂದ ಶಾಲೆಯ ದೈಹಿಕ ಶಿಕ್ಷಣ ವಿಭಾಗ, ರೆಡ್ ರಿಬ್ಬನ್ ಕ್ಲಬ್ ಹಾಗೂ ಸಹಯೋಗದೊಂದಿಗೆ ವಿಶ್ವ ಯೋಗೋತ್ಸವವನ್ನು ಆಚರಿಸಲಾಯಿತು.
ಯೋಗೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ನಿವೃತ್ತ ಉಪನ್ಯಾಸಕ ಎಚ್.ಎಚ್.ಸುಂದರ್, ಯೋಗವು ನಮ್ಮ ದೈಹಿಕ ಹಾಗೂ ಮಾನಸಿಕ ದೃಢತೆಗೆ ಸಹಕಾರಿಯಾಗಿದೆ. ಇಂದಿನ ಜೀವನ ಶೈಲಿಗೆ ಯೋಗವು ತುಂಬಾ ಸಹಕಾರಿಯಾಗಿದೆ ಎಂದರು.
ವಿದ್ಯಾರ್ಥಿಗಳು ಯೋಗವನ್ನು ದಿನನಿತ್ಯದ ಚಟುವಟಿಕೆಯ ಒಂದು ಭಾಗವಾಗಿ ರೂಢಿಸಿಕೊಂಡರೆ ಉತ್ತಮ ಆರೋಗ್ಯ ಕಂಡುಕೊಳ್ಳಲು ಸಾಧ್ಯ ಎಂದರು.
ಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ಯೋಗ ದಿನದ ಮಹತ್ವ ಕುರಿತು ವಿವರಣೆ ನೀಡಿ ನಾವು ಪ್ರತಿನಿತ್ಯ
ಯೋಗಾಭ್ಯಾಸ ಮಾಡಿದರೆ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯಕ್ಕೆ ತುಂಬಾ ಸಹಕಾರಿಯಾಗಿದೆ. ಯೋಗಾ ನಮ್ಮ ಮನಸ್ಸು ಮತ್ತು ದೇಹವನ್ನು ಶುದ್ಧಗೊಳಿಸುತ್ತದೆ ಎಂದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ನಾಗೇಶ್ ಮಾತನಾಡಿ, ಯೋಗವು ನಮ್ಮ ಜೀವನದ ಒಂದು ಭಾಗವಾದರೆ ಎಲ್ಲರೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಜೆಸಿಐ ಕಾವೇರಿ ಸಂಸ್ಥೆಯ ಅಧ್ಯಕ್ಷ ಬಿ.ಜಗದೀಶ್ ಮಾತನಾಡಿ, ನಮ್ಮ ಉತ್ತಮ ಆರೋಗ್ಯ ದಿಸೆಯಲ್ಲಿ ಯೋಗವನ್ನು ನಿರಂತರವಾಗಿ ಅಭ್ಯಾಸ ಮಾಡಬೇಕು ಎಂದರು.
ಸ್ಕೌಟ್ಸ್, ಗೈಡ್ಸ್ ಸಂಸ್ಥೆಯ ಕುಶಾಲನಗರ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಎಂ.ಎಸ್.ಗಣೇಶ್, ನಿರಂತರವಾಗಿ ಯೋಗಾಭ್ಯಾಸ ಮಾಡುವುದರಿಂದ ನಾವು ರೋಗಮುಕ್ತರಾಗಿರಲು ಸಾಧ್ಯ ಎಂದರು.
ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ, ಯೋಗ ತರಬೇತುದಾರರಾದ ಕೆ.ಟಿ.ಸೌಮ್ಯ ಮಕ್ಕಳಿಗೆ ಯೋಗಾಭ್ಯಾಸ ಪ್ರದರ್ಶಿಸಿದರು.
ದೈಹಿಕ ಶಿಕ್ಷಣ ಶಿಕ್ಷಕಿ ಕೆ.ಟಿ.ಸೌಮ್ಯ ಅವರ ಮಾರ್ಗದರ್ಶನದಲ್ಲಿ ಯೋಗ ಪ್ರದರ್ಶಿಸಿದ ವಿದ್ಯಾರ್ಥಿಗಳಾದ ಎಂ.ಕೀರ್ತನಾ, ಸಂಜನಾ ಮತ್ತು ಬಿ.ಪಿ.ಕೀರ್ತನಾ
ವಿವಿಧ ಯೋಗ ಆಸನಗಳು ಮತ್ತು ಭಂಗಿಗಳನ್ನು ಪ್ರಾತ್ಯಕ್ಷಿಕೆ ಮೂಲಕ ಪ್ರದರ್ಶಿಸಿ ಗಮನ ಸೆಳೆದರು.
ಶಾಲೆಯ ಎಲ್ಲಾ ವಿದ್ಯಾರ್ಥಿಗಳು ವಿವಿಧ ಯೋಗಾಸನ ಭಂಗಿಗಳನ್ನು ಪ್ರದರ್ಶಿಸಿದರು.
ಗ್ರಾ.ಪಂ ಪಿ.ಡಿ.ಓ.ಎಂ.ಆರ್.ಸಂತೋಷ್, ಎಸ್.ಡಿ.ಎಂ.ಸಿ. ಸಮಿತಿ ಅಧ್ಯಕ್ಷ ಎ.ಎಂ.ಜವರಯ್ಯ, ಸಮಿತಿ ಸದಸ್ಯ ಕೆ.ಎಸ್.ರಾಜಾಚಾರ್, ಜೆಸಿಐ ಕಾವೇರಿ ಸಂಸ್ಥೆಯ ನಿಕಟ ಪೂರ್ವ ಅಧ್ಯಕ್ಷ ಎಂ.ಜೆ.ರಜನೀಕಾಂತ್, ಪದಾಧಿಕಾರಿ ಸುಮಂತ್, ಅಳಿಲು ಸೇವಾ ಸಂಸ್ಥೆಯ ಅಧ್ಯಕ್ಷ ಕೆ.ಜಿ.ಮನು, ಪದಾಧಿಕಾರಿಗಳಾದ ಎಂ.ಡಿ.ಕೃಷ್ಣಪ್ಪ, ಚಂದ್ರಶೇಖರ್, ಶಿಕ್ಷಕರಾದ ಕೆ.ಗೋಪಾಲಕೃಷ್ಣ, ಎಂ.ಟಿ.ದಯಾನಂದ ಪ್ರಕಾಶ್, ಬಿ.ಎನ್.ಸುಜಾತ, ಬಿ.ಡಿ.ರಮ್ಯ, ಎಸ್.ಎಂ.ಗೀತಾ, ಅನ್ಸಿಲಾ ರೇಖಾ, ಸಿಬ್ಬಂದಿ ಎಂ.ಉಷಾ ಇದ್ದರು. ಶಿಕ್ಷಕರು ಮಕ್ಕಳಿಗೆ ವಿವಿಧ ಯೋಗಗಳ ಭಂಗಿಗಳ ಕುರಿತು ವಿವರಿಸಿದರು.
ಮುಖ್ಯ ಶಿಕ್ಷಕರಿಂದ ಯೋಗ :: ಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್ ಕೂಡ ಮಕ್ಕಳೊಂದಿಗೆ ಯೋಗಾಭ್ಯಾಸದಲ್ಲಿ ತೊಡಗಿಕೊಂಡು ವಿವಿಧ ಯೋಗದ ಭಂಗಿಗಳನ್ನು ಮಾಡುವ ಮೂಲಕ ಮಕ್ಕಳಿಗೆ ಪ್ರೇರಣೆ ನೀಡಿದ್ದು ಗಮನ ಸೆಳೆಯಿತು.