ಮಡಿಕೇರಿ ಜೂ.21 NEWS DESK : ಜಿಲ್ಲೆಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಅಭಿವೃದ್ದಿ ಪಡಿಸಲಾದ ಅಮೃತ್ ಸರೋವರ ಕೆರೆಗಳ ದಡದಲ್ಲಿ ” ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಿ ಯೋಗದ ಮಹತ್ವವನ್ನು ತಿಳಿಸಲಾಯಿತು.
ಜಲಮೂಲಗಳ ಸಂರಕ್ಷಣೆ ಹಾಗೂ ಕೆರೆಗಳನ್ನು ಅಭಿವೃದ್ದಿಪಡಿಸುವ ಮೂಲ ಉದ್ದೇಶದಿಂದ ಆಜಾದಿ- ಕಾ ಅಮೃತ್ ಮಹೋತ್ಸವದ ಅಂಗವಾಗಿ ಅಮೃತ್ ಸರೋವರ ಅಭಿಯಾನದಡಿ ಕೆರೆಗಳನ್ನು ಮನರೇಗಾ ಯೋಜನೆಯಡಿ ಅಭಿವೃದ್ದಿಪಡಿಸಲಾಯಿತು. ಆಯುಕ್ತಾಲಯದ ನಿರ್ದೇಶನದಂತೆ ಈ ಬಾರಿಯ ಅಂತರಾಷ್ಟ್ರೀಯ ಯೋಗ ದಿನವನ್ನು ಕೊಡಗು ಜಿಲ್ಲೆಯ ವಿವಿಧ ಗ್ರಾ.ಪಂ ಗಳಲ್ಲಿ ಅಭಿವೃದ್ಧಿಪಡಿಸಲಾದ ಅಮೃತ್ ಸರೋವರ ಕೆರೆಗಳ ದಡದಲ್ಲಿ ಮನರೇಗಾ ಕೂಲಿ ಕಾರ್ಮಿಕರು, ಶಾಲಾ ಮಕ್ಕಳು, ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಸ್ವ-ಸಹಾಯ ಸಂಘದ ಮಹಿಳೆಯರು ಹಾಗೂ ಸ್ಥಳೀಯ ಜನರ ಒಳಗೊಂಡಂತೆ ವಿವಿಧ ಯೋಗ ಆಸನಗಳನ್ನು ಮಾಡುವ ಮೂಲಕ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.