*NEWS DESK* ಈ ಮಾಸದ ಸಂಕಷ್ಟಹರವು ದಿನಾಂಕ 25.06.2024ನೇ ಮಂಗಳವಾರ ಬರಲಿದೆ. ಮಂಗಳವಾರ ಸಂಕಷ್ಟ ಚತುರ್ಥಿ ಬರುವುದು ಅಪರೂಪವಾಗಿದೆ. ವರ್ಷದಲ್ಲಿ ಒಂದು-ಎರಡು ಅಥವಾ ಮೂರು ಬಾರಿ ಬರುತ್ತದೆ. ಗಣಪತಿಗೆ ಎರಡು ಜನ್ಮ ಅಂದರೆ ಸುಮಂಗಲಿ ಸ್ವರೂಪಿಯಾದ ಗೌರಿಯು ಮಂಗಳವಾರ ಅಂಗಾರಕ ಜೀವವನ್ನು ತುಂಬಿದರೆ ಶಿವನು ಬುಧವಾರ ತನ್ನಿಂದಲೇ ಸಾಯಿಸಲ್ಪಟ್ಟ ಮಗುವಿಗೆ ಆನೆಯ ತಲೆಯನ್ನು ತಂದು ಪುನರ್ಜನ್ಮವನ್ನು ನೀಡಿರುವುದು ಬುಧವಾರವಾಗಿದೆ. ಅದರಿಂದ ಗೌರಿ ಪ್ರಿಯವಾದ ಗಣಪನಿಗೆ ಮಂಗಳವಾರ ಅತೀ ಶ್ರೇಷ್ಠವಾಗಿರುವುದುರಿಂದ ಸಂಕಷ್ಟಹರ ಸ್ವರೂಪಿಯಾದ ಗಣಪನ ವೃತವು ಸಂಕಷ್ಟ ಚುತುರ್ಥಿಯು ಮಂಗಳವಾರ ಬಂದರೆ ಅಂಗಾರಕ ಸಂಕಷ್ಟಹರ ಚತುರ್ಥಿ ಎಂದು ಕರೆಯಲ್ಪಡುತ್ತದೆ.
ಮಂಗಳವಾರ ಬರುವ ಸಂಕಷ್ಟ ಚತುರ್ಥಿ ಶುಭದಿನದಂದು ಶ್ರದ್ಧಾಭಕ್ತಿಯಿಂದ ಆಚರಣೆಯನ್ನು ಯಾರುಮಾಡುತ್ತಾರೋ ಅವರಿಗೆ ಹೆಚ್ಚಿನ ಫಲದಾಯಕನಾಗುತ್ತಾನೆ. ಗಣಪನು ಎಂದು ಶಿವ ಪುರಾಣ ಹೇಳುತ್ತದೆ. ಆದ್ದರಿಂದ ಈ ವರ್ಷದ ನಮ್ಮೆಲ್ಲರ ಆಸೆ, ಆಕಾಂಕ್ಷೆ ಈಡೇರಬೇಕೆಂದರೆ ಕಾರ್ಯ ಸಿದ್ಧಿಯಾಗಬೇಂದರೆ ನಮ್ಮ ಜೀವನದ ಎಲ್ಲಾ ಕೆಲಸವೆಲ್ಲವು ಈ ವರ್ಷ ನಿರ್ವಿಘ್ನವಾಗಿ ಸಾಗಬೇಕೆಂದರೆ ವಿಶೇಷ ಫಲದಾಯನಾದ ಸಂಕಷ್ಟಗಳ ಪರಿಹರಿಸುವ ಮಹಾಗಣಪತಿಯ ವೃತವನ್ನು ಭಕ್ತಿ ಪೂರ್ವಕವಾಗಿ ನಡೆಸಿ ಸಂಪೂರ್ಣ ಫಲವನ್ನು ಪಡೆಯೋಣ.
ಮಂಗಳವಾರ ಬೆಳಗಿನ ಜಾವ ಎದ್ದು, ತಲೆಯಿಂದ ಸ್ನಾನವನ್ನು ಮಾಡಿ, ಗಣೇಶನ ದೇವಾಲಯ ಅಥವಾ ಭಾವಚಿತ್ರ ಅಥವಾ ಬಿಂಬಾ ದರ್ಶನವನ್ನು ಮಾಡಿ ತೀರ್ಥ ಪ್ರಸಾದವನ್ನು ಸ್ವೀಕರಿಸಿ ಅವರವರ ದೈಹಿಕ ಸಾಮಾಥ್ರ್ಯದಂತೆ ಅನ್ನವನ್ನು ಸ್ವೀಕರಿಸಿದೆ ಹಣ್ಣು-ಹಂಪಲು, ಎಳನೀರು, ಗೋದಿ, ರಾಗಿಯಿಂದ ಸಿದ್ದಪಡಿಸಿದ ಆಹಾರ ಪಾದಾರ್ಥಗಳನ್ನು ಸ್ವೀಕರಿಸಿ ತಾಮಸ ಆಹಾರವನ್ನು ಮಾತ್ರ ಸ್ವೀಕರಿಸಿ ಪೂರ್ತಿ ದಿನ ಗಣಪತಿಯ ಔಪಾಸನೆಯಲ್ಲಿ ಪಾಲ್ಗೊಳ್ಳಬೇಕು.
21 ಗರಿಕೆ ಅಥವಾ 21ರ ಮೇಲ್ಪಟ್ಟು ಗರಿಕೆ ಗಣೇಶನಿಗೆ ಪ್ರಿಯವಾದ ನೆಲಗಡಲೆ, ಪಂಚಗಜ್ಜಾಯ, ಎಳ್ಳುಂಡೆ, ಕಡುಬು ಯಾವುದೇ ಖಾದ್ಯಗಳನ್ನು ಸಿದ್ದಪಡಿಸಿ ನೈವೇದ್ಯಕ್ಕೆ ಅರ್ಪಣೆಗಿಟ್ಟು ಪಂಚಾಮೃತ ಅಭಿಷೇಕ ಸಹಸ್ರನಾಮ ಪೂಜೆಗಳನ್ನು ಸಾಯಂಕಾಲ, ಗೋ ಧೂಳಿ ಲಗ್ನದಲ್ಲಿ ಷೋಡ ಶೋಪಚಾರ ಪೂಜೆಯನ್ನು ಸಲ್ಲಿಸಿ, ತೀರ್ಥಪ್ರಸಾದವನ್ನು ಸ್ವೀಕರಿಸಿ, ಚಂದ್ರೋದಯದ ನಂತರ ಚಂದ್ರ ದರ್ಶನವನ್ನು ಮಾಡಿ ಭೋಜನ ಸ್ವೀಕರಿಸಬೇಕು. ಈ ಸಂಕಷ್ಟ ಹರದ ಚಂದ್ರೋದಯ 10.14 ರಾತ್ರಿ.
ಡಾ.ಮಹಾಬಲೇಶ್ವರ ಭಟ್
ದೂ.ಸಂ : 8105634429