ಮಡಿಕೇರಿ ಜು.1 NEWS DESK : ಮಾದಕ ವ್ಯಸನಿಗಳಾಗುವುದನ್ನು ತಪ್ಪಿಸುವಲ್ಲಿ ಔಷಧಿ ವ್ಯಾಪಾರಸ್ಥರ ಪಾತ್ರ ಮಹತ್ವದ್ದಾಗಿದೆ, ಮಕ್ಕಳು, ಯುವಪೀಳಿಗೆ ಭಾರತದ ಜನಸಂಖ್ಯೆಯಲ್ಲಿ ಹೆಚ್ಚಾಗಿದ್ದಾರೆ ಎಂಬುದನ್ನು ಪರಿಗಣಿಸಿ ಈ ಸಮುದಾಯವು ಮಾದಕ ವ್ಯಸನಿಗಳಾಗದಂತೆ ತಡೆಗಟ್ಟುವಲ್ಲಿ ವ್ಯಾಪಾರಸ್ಥರು ಜಾಗ್ರತಿ ಮೂಡಿಸಬೇಕೆಂದು ಅಖಿಲ ಭಾರತ ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಗನ್ನಾಥ್ ಎಸ್.ಶಿಂಧೆ ಕರೆ ನೀಡಿದ್ದಾರೆ.
ನಗರದ ಗೌಡ ಸಮಾಜದ ಸಭಾಂಗಣದಲ್ಲಿ ಆಯೋಜಿತ ಕನಾ೯ಟಕ ಔಷಧಿ ವ್ಯಾಪಾರಿಗಳ ಸಂಘದ 66 ನೇ ವಾಷಿ೯ಕ ಮಹಾಸಭೆ ಮತ್ತು ನಿರಂತರ ಕಲಿಕಾ ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ಸಮಾಜ ನಿಮಾ೯ಣದಲ್ಲಿ ಔಷಧಿ ವ್ಯಾಪಾರಸ್ಥರ ಹೊಣೆಗಾರಿಕೆ ಹಿಂದೆಂದಿಗಿಂತಲೂ ಇಂದಿನ ದಿನಗಳಲ್ಲಿ ಹೆಚ್ಚಾಗಿದೆ. ಮಕ್ಕಳು, ಯುವಪೀಳಿಗೆಯಲ್ಲಿ ಮಾದಕ ವ್ಯಸನ ಆತಂಕಕಾರಿ ರೀತಿಯಲ್ಲಿ ಹೆಚ್ಚಾಗುತ್ತಿರುವ ಕಾಲಘಟ್ಟದಲ್ಲಿ ಇಂಥ ಅಂಶಗಳುಳ್ಳ ಔಷಧಿಗಳನ್ನು ಯುವಜನಾಂಗಕ್ಕೆ ನೀಡಬಾರದು. ಮುಖ್ಯವಾಗಿ ಮಕ್ಕಳು ಬೇರೆ ಬೇರೆ ರೀತಿಯಲ್ಲಿ ಮಾದಕ ಚಟವನ್ನು ಹೊಂದುತ್ತಿದ್ದು ಇದಕ್ಕಾಗಿ ಔಷಧಿ ವ್ಯಾಪಾರಿಗಳ ಬಳಿ ಬಂದಾಗ ಅವರನ್ನು ಉತ್ತೇಜಿಸದೇ ದುಷ್ಟಟಗಳಿಂದ ದೂರವಿರುವಂತೆ ತಿಳುವಳಿಕೆ ನೀಡುವ ಕೆಲಸವೂ ಔಷಧಿ ವ್ಯಾಪಾರಿಗಳಿಂದ ಆಗಬೇಕಾಗಿದ ಎಂದು ಕರೆ ನೀಡಿದರು.
ಭಾರತದಾದ್ಯಂತ 50 ಲಕ್ಷ ಔಷಧಿ ವ್ಯಾಪಾರಸ್ಥರಿದ್ದು, ಮುಂದಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಎದುರಾಗುವ ಸವಾಲನ್ನು ಎದುರಿಸಲು ಭಾರತೀಯ ಔಷಧಿ ವ್ಯಾಪಾರಿಗಳು ಸಜ್ಜಾಗುವಂತೆ ಹೇಳಿದ ಶಿಂಧೆ, ಬ್ರಿಟಿಷರು ಕೂಡ ಭಾರತಕ್ಕೆ ವ್ಯಾಪಾರದ ಉದ್ದೇಶದಿಂದಲೇ ಬಂದು ನಂತರ ಇಡೀ ಭಾರತವನ್ನೇ ಅತಿಕ್ರಮಿಸಿದ್ದರು, ಅಂತೆಯೇ ಜಿ.20, ಗ್ಯಾಟ್ ಒಪ್ಪಂದದ ಅವಕಾಶ ಬಳಸಿಕೊಂಡು ಮುಂದಿನ ದಿನಗಳಲ್ಲಿ 187 ದೇಶಗಳಿಗೆ ಸೇರಿದ ಅಂತರರಾಷ್ಟ್ರೀಯ ಔಷಧಿ ಉದ್ಯಮಿಗಳು ಭಾರತದಲ್ಲಿ ನೆಲೆಯೂರಲು ಮುಂದಾಗುತ್ತಾರೆ, ಇಂಥ ಸಂದಭ೯ ಭಾರತೀಯತೆ, ಭಾರತದ ಸಂಸ್ಕೃತಿಯ ಸಂರಕ್ಷಣೆ ನಿಟ್ಟಿನಲ್ಲಿ ಭಾರತೀಯ ಔಷಧಿ ವ್ಯಾಪಾರಿಗಳ ಮಹತ್ವವನ್ನು ಸಮಾಜಕ್ಕೆ ತಿಳಿಸುವುದರೊಂದಿಗೆ, ಸಮಾಜದ ಹಿತಕಾಯಲೂ ಔಷಧಿ ವ್ಯಾಪಾರಿಗಳು ಬದ್ದರಾಗಿರಬೇಕೆಂದೂ ಜಗನ್ನಾಥ್ ಶಿಂಧೆ ಸಲಹೆ ನೀಡಿದರು.
ತಾಂತ್ರಿಕವಾಗಿಯೂ ಭಾರತ ಈಗ ನಾಗಲೋಟದಲ್ಲಿದೆ, ಔಷಧೀಯ ಕ್ಷೇತ್ರ ಕೂಡ ಭವಿಷ್ಯದಲ್ಲಿ ನವತಾಂತ್ರೀಕತೆಯ ಸಹಾಯದಿಂದ ಹೊಸ ಆವಿಷ್ಕಾರಗಳಿಗೆ ಒಳಪಟ್ಟಾಗ ಸಮಾಜದ ಸವ೯ ಜನತೆಗೂ ಆರೋಗ್ಯ ಸಂರಕ್ಷಣೆಯ ನಿಟ್ಟಿನಲ್ಲಿ ಪ್ರಯೋಜನವಾಗುತ್ತದೆ ಎಂದು ಶಿಂಧೆ ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಔಷಧಿ ವ್ಯಾಪಾರಿಗಳ ಸಂಘದ ಪ್ರಧಾನ ಕಾಯ೯ದಶಿ೯ ರಾಜೀವ್ ಸಿಂಘಾಲ್ ಮಾತನಾಡಿ, ಕೋವಿಡ್ ಲಾಕ್ ಡೌನ್ ಸಂದಭ೯ ದೇಶವ್ಯಾಪಿ ಔಷಧಿ ವ್ಯಾಪಾರಿಗಳು ನೀಡಿದ ಸೇವೆಯನ್ನು ಸಮಾಜದ ಜನತೆ ಸದಾ ಸ್ಮರಿಸಿಕೊಳ್ಳಬೇಕು, ದೇಶದ ಗ್ರಾಮ ಗ್ರಾಮಗಳಲ್ಲಿಯೂ ಜನರ ಆರೋಗ್ಯ ಹಿತರಕ್ಷಣೆ ಉದ್ದೇಶದಿಂದ ಔಷಧಿ ವ್ಯಾಪಾರಿಗಳು ಸಮಯದ ಪರಿವೇ ಇಲ್ಲದೇ ಕಾಯ೯ನಿವ೯ಹಿಸುತ್ತಿದ್ದಾರೆ. ಯಾವುದೇ ರೀತಿಯಲ್ಲಿಯೂ ಔಷಧಿ ವ್ಯಾಪಾರಿಗಳಿಗೆ ಜಾಗತಿಕ ಮಟ್ಟದಲ್ಲಿ ಸ್ಪಧೆ೯ ಎದುರಾದರೂ ಜನರು ಭಾರತೀಯ ಮೂಲದ ಔಷಧಿ ವ್ಯಾಪಾರಿಗಳಿಗೆ ಬೆಂಬಲವಾಗಿ ನಿಲ್ಲಬೇಕೆಂದು ಮನವಿ ಮಾಡಿದರು.
ಕನಾ೯ಟಕ ಔಷಧ ನಿಯಂತ್ರಣಾಧಿಕಾರಿ ಬಿ.ಟಿ.ಖಾನಾಪುರೆ ಮಾತನಾಡಿ, ಸದ್ಯದಲ್ಲಿಯೇ ಔಷಧೀಯ ಕಾಯಿದೆಗಳಿಗೆ ಕೆಲವು ಮಾಪಾ೯ಡು ಬರಲಿದೆ. ಈ ನಿಟ್ಟಿನಲ್ಲಿ ಸಕಾ೯ರದ ಮಟ್ಟದಲ್ಲಿ ಗಂಭೀರ ಚಚೆ೯ ನಡೆದಿದೆ ಎಂದರಲ್ಲದೇ ಔಷಧಿ ಅಂಗಡಿಗಳಲ್ಲಿ ಸಿಸಿ ಕ್ಯಾಮರಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಸೂಚಿಸಿದರು.
ರಾಜ್ಯ ಔಷಧಿ ಉಪ ನಿಯಂತ್ರಣಾಧಿಕಾರಿ ಕೆಂಪಯ್ಯ ಸುರೇಶ್ ಮಾತನಾಡಿ, ಜೀವರಕ್ಷಕವಾದ ಕೆಲವೊಂದು ಔಷಧಿಗಳಿಗೆ ರಿಯಾಯಿತಿ ನೀಡುವ ಫಲಕಗಳ ಪ್ರಚಾರ ಸರಿಯಲ್ಲ, ರಿಯಾಯಿತಿ ಫಲಕ ಅಳವಡಿಕೆಯೂ ಯಾವುದೇ ಔಷಧಿ ಅಂಗಡಿಗಳಲ್ಲಿಯೂ ಸಲ್ಲದು ಎಂದರಲ್ಲದೇ ಮಕ್ಕಳು, ಯುವಪೀಳಿಗೆ ಮಾದಕ ದ್ರವ್ಯಗಳಿಗಾಗಿ ಬೇರೆ ಬೇರೆ ರೀತಿಯಲ್ಲಿ ಔಷಧಿ ವ್ಯಾಪಾರಿಗಳನ್ನು ಸಂಪಕಿ೯ಸುತ್ತಿರುವ ಪ್ರಕರಣ ಹೆಚ್ಚಾಗುತ್ತಲೇ ಇದೆ. ಈ ನಿಟ್ಟಿನಲ್ಲಿ ವ್ಯಾಪಾರಿಗಳು ಎಚ್ಚರಿಕೆ ವಹಿಸಿ ಸಮಾಜದ ಹಿತಚಿಂತನೆಗೇ ಆದ್ಯತೆ ನೀಡುವಂತೆ ಕೋರಿದರು.
ಕನಾ೯ಟಕ ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಆರ್.ರಘುನಾಥ ರೆಡ್ಡಿ ಮಾತನಾಡಿ, ಕನಾ೯ಟದಲ್ಲಿ ಔಷಧಿ ವ್ಯಾಪಾರಿಗಳಿಗೆ ಯಾವುದೇ ಸಮಸ್ಯೆ ಎದುರಾಗದಂತೆ ಸಂಘವು ಎಲ್ಲಾ ರೀತಿಯ ಸಹಕಾರ ನೀಡುತ್ತಿದೆ, ಹೊಸ ನೀತಿ ನಿಯಮಗಳ ಬಗ್ಗೆ ತಿಳುವಳಿಕೆ ನೀಡುತ್ತಿದೆ. ನಿರಂತರ ಕಲಿಕಾ ಕಾಯ೯ಕ್ರಮವನ್ನು ಔಷಧಿ ವ್ಯಾಪಾರಿಗಳ ಸಂಘ ಮತ್ತಷ್ಟು ಪರಿಣಾಮಕಾರಿಯಾಗಿ ರಾಜ್ಯದಲ್ಲಿ ಅನುಷ್ಠಾನಗೊಳಿಸಲಿದೆ ಎಂದರು.
ಭಾರತೀಯ ಔಷಧಿ ವ್ಯಾಪಾರಸ್ಥರ ಸಂಘದ ಸಂಘಟನಾ ಕಾಯ೯ದಶಿ೯, ಕನಾ೯ಟಕ ಔಷಧಿ ವ್ಯಾಪಾರಸ್ಥರ ಸಂಘದ ಗೌರವ ಕಾಯ೯ದಶಿ೯ ಮತ್ತು ಕೊಡಗು ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಅಂಬೆಕಲ್ ಜೀವನ್ ಕುಶಾಲಪ್ಪ ಮಾತನಾಡಿ, ಮಡಿಕೇರಿಯಲ್ಲಿ ಎರಡನೇ ಬಾರಿಗೆ ರಾಜ್ಯ ಸಂಘದ ಮಹಾಸಭೆ ಆಯೋಜಿಸಿರುವುದು ಹೆಮ್ಮೆ ತಂದಿದೆ, ಕೆಲವು ವಷ೯ಗಳಿಗೆ ಹೋಲಿಸಿದರೆ ರಾಜ್ಯದ ಔಷಧಿ ವ್ಯಾಪಾರಿಗಳು ಒಗ್ಗಟ್ಟಾಗಿದ್ದಾರೆ, ಎಲ್ಲರೂ ಸಮಾಜದ ಅಭ್ಯುದಯದ ನಿಟ್ಟಿನಲ್ಲಿ ಉದ್ಯಮ ಕೇಂದ್ರೀಕರಿಸುವಂತೆ ಮನವಿ ಮಾಡಿದರು.
ವೇದಿಕೆಯಲ್ಲಿ ಸಂಘಟನೆಯ ಪ್ರಮುಖರಾದ ಎ.ಎನ್.ಮೋಹನ್, ಅರುಣ್, ಬಿ.ಉಮೇಶ್, ಬಿ.ಕೆ.ಪ್ರಸನ್ನ ಕುಮಾರ್, ಶಿವರಾಜ್ ಪಾಟೀಲ್, ಸತ್ಯನಾರಾಯಣ್ ಕಲ್ಗಾರ್, ವಿ.ಎಸ್.ಬುರ್ಲಿ ಉಪಸ್ಥಿತರಿದ್ದರು. ಕೊಡಗು ಔಷಧಿ ವ್ಯಾಪಾರಸ್ಥರ ಸಂಘದ ಪ್ರಮುಖರಾದ ಕೆ.ವಸಂತ್ ಕುಮಾರ್, ಎ.ಕೆ.ವಿನೋದ್, ಪ್ರಸಾದ್ ಗೌಡ, ಕಿರಣ್ ಕುಂದರ್, ತಿಲಕ್ ಚಂದ್ರಶೇಖರ್, ವಿವೇಕ್, ಧನಂಜಯ ಶಾಸ್ತ್ರೀ, ಶ್ರೀನಿವಾಸ್, ಪ್ರಕಾಶ್, ಮವಿ೯ನ್ ಫನಾ೯ಂಡೀಸ್ ಕಾಯ೯ಕ್ರಮ ನಿವ೯ಹಿಸಿದರು. ಚಂದ್ರಶೇಖರ್ ನಿರೂಪಿಸಿ, ಉನ್ನತಿ ಸುರೇಶ್ ಪ್ರಾಥಿ೯ಸಿದರು. ರಾಜ್ಯದ 32 ಜಿಲ್ಲೆಗಳಿಂದ 620 ಪ್ರತಿನಿಧಿಗಳು ಎರಡು ದಿನಗಳು ನಡೆದ ವಾಷಿ೯ಕ ಮಹಾಸಭೆಯಲ್ಲಿ ಪಾಲ್ಗೊಂಡಿದ್ದರು.