ಸುಂಟಿಕೊಪ್ಪ ಡಿ.22 NEWS DESK : ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಪಲ್ಸ್‍ಪೊಲಿಯೋ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು. ಸುಂಟಿಕೊಪ್ಪದ ಪ್ರಥಮ ಪ್ರಜೆ ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್‍ಕುಮಾರ್ ಅವರು ಗದ್ದೆಹಳ್ಳದ ಅಂಗನವಾಡಿಯಲ್ಲಿ ದಿನದ ಮೊದಲ ಪಲ್ಸ್‍ಪೊಲಿಯೋ ಹನಿಯನ್ನು ನೀಡಿದರು. ನಂತರ ಸುಂಟಿಕೊಪ್ಪ ಬಸ್‍ನಿಲ್ಧಾಣದಲ್ಲಿ ನಡೆದ ಪಲ್ಸ್‍ಪೊಲಿಯೋ ಕಾರ್ಯಕ್ರಮವನ್ನು ಉದ್ಘಾಟಿಸಿ, ಶ್ರೀದೇವಿ ಬಡಾವಣೆ ಮತ್ತು ಸುಂಟಿಕೊಪ್ಪ ಆರೋಗ್ಯ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.











