ಸುಂಟಿಕೊಪ್ಪ ಜು.2 NEWS DESK : ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ಪಾಲಕ ಸಂತ ಅಂತೋಣಿಯವರ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.
ವಾರ್ಷಿಕೋತ್ಸವದ ಅಂಗವಾಗಿ ಮೂರು ದಿನಗಳ ಕಾಲ ವಿಶೇಷ ಬಲಿಪೂಜೆ, ಆರಾಧನೆ ನಡೆಯಿತು.
ರೇ.ಫಾ. ಸಂಜಯ್ ಕುಮಾರ್ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ವಿಶೇಷ ಪ್ರಭೋದನೆ ಮತ್ತು ಬಲಿಪೂಜೆಯನ್ನು ಸಮರ್ಪಿಸಿದರು. 3 ದಿನಗಳು ವಿವಿಧ ಧರ್ಮಕೇಂದ್ರಗಳ ಧರ್ಮಗುರುಗಳು ಆಗಮಿಸಿ ಬಲಿಪೂಜೆ ಆರಾಧನೆಯನ್ನು ಸಲ್ಲಿಸಿದರು.
ವಾರ್ಷಿಕೋತ್ಸವದ ಅಂಗವಾಗಿ ಮಧ್ಯಾಹ್ನದ ವೇಳೆಯಲ್ಲಿ ಸಂತ ಸಬಾಸ್ಟೀನ್ ಅವರ ಅಂಬು ಕಾಣಿಕೆ ಹರಕೆಯನ್ನು ಭಕ್ತಾಧಿಗಳು ಸಲ್ಲಿಸಿದರು.
ಸಂತ ಅಂತೋಣಿಯವರ ದೇವಾಲಯದಲ್ಲಿ ಹಬ್ಬದ ಅಡಂಬರ ಗಾಯನ ಬಲಿಪೂಜೆ ಮತ್ತು ಪರಮಪ್ರಸಾದ ಆರಾಧನೆಯನ್ನು ಹೆಚ್.ಡಿ.ಕೋಟೆಯ ಸೈಂಟ್ ಮೇರಿಸ್ ಚರ್ಚ್‍ನ ಬರ್ನಾಡ್ ಪ್ರಕಾಶ್ ಬಾರ್ನಿಸ್ ಜಿಲ್ಲೆಯ ವಿವಿಧ ಧರ್ಮಕೇಂದ್ರಗಳ ಧರ್ಮಗುರುಗಳು ಒಗ್ಗೂಡಿ ನೇರವೇರಿಸಿದರು.
ವಾರ್ಷಿಕೋತ್ಸವದ ಅಂಗವಾಗಿ ದೇವಾಲಯವನ್ನು ಒಳಾಂಗಣವನ್ನು ಬಣ್ಣ ಹೂಗಳು, ಬಂಟಿಗ್ಸ್ ಹಾಗೂ ಹೊರಾಂಗಣವನ್ನು ವಿದ್ಯುತ್ ದೀಪಾಗಳಿಂದ ಅಲಂಕಾರಿಸಲಾಗಿತ್ತು.
ವಿರಾಜಪೇಟೆ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ವಂ.ಪಾ.ಮದಲೈಮುತ್ತು, ಅನ್ನಮ್ಮ ದೇವಾಲಯದ ಧರ್ಮಗುರುಗಳಾದ ವಂ.ಪಾ.ಜೇಮ್ಸ್, ಪೊನ್ನಂಪೇಟೆ ಧರ್ಮಕೇಂದ್ರದ ಧರ್ಮಗುರುಗಳಾದ ಡೇವಿಡ್ ಸಗಾಯ್‍ರಾಜ್, ಅಬ್ಬೂರುಕಟ್ಟೆ ದೇವಾಲಯದ ಜಾನ್ ಡಿಕುನ್ನ, ಕೂಡಿಗೆ ಚಾಲ್ಸ್ ನರೋನ, ಚೆಟ್ಟಳ್ಳಿ ಧರ್ಮಕೇಂದ್ರದ ಗುರುಗಳಾದ ವಂ.ಜೆರಾಲ್ಡ್ ಸಿಕ್ವೇರಾ, 7ನೇ ಹೊಸಕೋಟೆ ಸಂತ ಸೆಬಾಸ್ಟಿನ್ ದೇವಾಲಯದ ರೆ.ಫಾ.ಸಬಾಸ್ಟೀನ್‍ಪೂವ್ವಗತ್ತಿಲ್, ಕುಶಾಲನಗರ ಸಂತ ಸೆಬಾಸ್ಟಿನ್ ದೇವಾಲಯದ ಫಾ.ಮಾರ್ಟಿನ್, ಮಡಿಕೇರಿ ಸಂತ ಮೈಕಲರ ದೇವಾಲಯದ ಸಹಾಯಕ ಗುರುಗಳಾದ ಸಂಜಯ್ ಕುಮಾರ್, ಪಿರಿಯಾಪಟ್ಟಣ ಜಾನ್ ಪೌಲ್,ಸೋಮವಾರಪೇಟೆ ಧರ್ಮಕೇಂದ್ರದ ಧರ್ಮಗುರುಗಳಾದ.ಫಾ.ಅವಿನಾಶ್, ಪಾಲಿಬೆಟ್ಟ ಧರ್ಮಕೇಂದ್ರದ ಧರ್ಮಗುರುಗಳಾದ ವಂ.ಫಾ.ಜಾರ್ಜ್, ಮಾದಾಪುರ ಧರ್ಮಕೇಂದ್ರದ ಧರ್ಮಗುರುಗಳಾದ ವಂ.ಫಾ.ಸೂಫಿರಾಜ್ ಹಾಗೂ ಸಂತ ಅಂತೋಣಿ ದೇವಾಲಯದ ಫಾಧರ್ ವಿಜಯಕುಮಾರ್ ಕುಮಾರ್ ಸೇರಿದಂತೆ ಮತ್ತಿತರರು ಇದ್ದರು.
ಜಿಲ್ಲೆಯ ವಿವಿಧೆಡೆಯಿಂದ ಭಕ್ತಾಧಿಗಳು ಆಗಮಿಸಿದ್ದರು.