Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಮಡಿಕೇರಿ ಹಿಂದೂ ಮಲಯಾಳಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ*
  • *ಸ್ಕೌಟ್ಸ್ ಮತ್ತು ಗೈಡ್ಸ್ ಚಾರಣಿಗರಿಗೆ ಪ್ರಮಾಣ ಪತ್ರ ವಿತರಣೆ : ಚಾರಣದಿಂದ ಸಾಹಸ ಮನೋಭಾವ ಹಾಗೂ ಆತ್ಮವಿಶ್ವಾಸ ಬೆಳೆಯುತ್ತದೆ : ಈರಮಂಡ ಹರಿಣಿ ವಿಜಯ್ ಅಭಿಮತ*
  • test
  • *‘ವಿಶ್ವ ಶ್ರವಣ ದಿನ’ ಪ್ರಯುಕ್ತ ಬೀದಿ ನಾಟಕದ ಮೂಲಕ ಜಾಗೃತಿ*
  • *ಶ್ರೀ ಯೋಗಿ ನಾರಾಯಣ ಯತೀಂದ್ರರ ಜಯಂತಿ(ಕೈವಾರ ತಾತಯ್ಯ)*
  • *ಸಂಸದರಿಂದ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ ಪುಸ್ತಕ ಬಿಡುಗಡೆ*
  • *ಗ್ಯಾರಂಟಿ ಯೋಜನೆಗಳ ತಾಲ್ಲೂಕು ಸಮಿತಿ ಸಭೆ*
  • *ಪ್ರೌಢಶಾಲಾ ಶಿಕ್ಷಕರಿಗೆ ಗಣತಿ ಕಾರ್ಯದಿಂದ ವಿನಾಯಿತಿ ಕೋರಿ ಕೊಡಗು ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ಕೊಡಗು*
  • *ಸಂಕಷ್ಟದಲ್ಲಿದ್ದ ಕನ್ನಡಿಗರಿಗೆ ಕುಮಾರಸ್ವಾಮಿ-ಸಿದ್ದರಾಮಯ್ಯ ಸಾಥ್: ಮೂರು ದಿನಗಳ ಬಳಿಕ ಬೆಂಗಳೂರಿನಲ್ಲಿ ನೆಮ್ಮದಿಯ ನಿಟ್ಟುಸಿರು ಬಿಟ್ಟ ಪ್ರಯಾಣಿಕರು*
  • *ಹಳೆಯ ಮೀಸಲಾತಿ ನಿಯಮಗಳಂತೆ 56 ಸಾವಿರ ಹುದ್ದೆಗಳ ನೇಮಕಾತಿಗೆ ನಿರ್ಧರಿಸಿರುವುದು ಸ್ವಾಗತಾರ್ಹ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಅಂತರ ಕಾಲೇಜು ಅಥ್ಲೆಟಿಕ್ ಸ್ಪರ್ಧೆ : ದಾಖಲೆ ನಿರ್ಮಿಸಿದ ಪುತ್ತೂರು ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು*
ಇತ್ತೀಚಿನ ಸುದ್ದಿಗಳು ಕರ್ನಾಟಕ

*ಅಂತರ ಕಾಲೇಜು ಅಥ್ಲೆಟಿಕ್ ಸ್ಪರ್ಧೆ : ದಾಖಲೆ ನಿರ್ಮಿಸಿದ ಪುತ್ತೂರು ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು*

ಜುಲೈ 2, 20243 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಪುತ್ತೂರು ಜು.2 NEWS DESK : ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ವಿದ್ಯಾರ್ಥಿಗಳು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ರಾಜ್ಯಮಟ್ಟದ 25ನೇ ಅಂತರ್ಕಾಲೇಜು ಅಥ್ಲೆಟಿಕ್ ಸ್ಪರ್ಧೆಯಲ್ಲಿ ಪುರುಷರ ವಿಭಾಗದ ಚಾಂಪಿಯನ್‍ಶಿಪ್ ಟ್ರೋಫಿ ಹಾಗೂ ಮಹಿಳೆಯರ ವಿಭಾಗದ ಚಾಂಪಿಯನ್‍ಶಿಪ್‍ನಲ್ಲಿ ರನ್ನರ್ ಅಪ್ ಟ್ರೋಫಿಯೊಂದಿಗೆ ಸತತ ಮೂರನೇ ಬಾರಿ ಕೂಟದ ಸಮಗ್ರ ಪ್ರಶಸ್ತಿಯನ್ನು ಪಡೆದು ದಾಖಲೆ ನಿರ್ಮಿಸಿದ್ದಾರೆ.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಮೈಸೂರು ವಿಭಾಗದ ಆಶ್ರಯದಲ್ಲಿ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಾಲ್ಕು ದಿನಗಳ ಕಾಲ ನಡೆದ ಈ ಕ್ರೀಡಾಕೂಟದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಸಂಯೋಜನೆಗೊಳಪಟ್ಟ 200ಕ್ಕೂ ಹೆಚ್ಚು ಎಂಜಿನಿಯರಿಂಗ್ ಕಾಲೇಜುಗಳ ಕ್ರೀಡಾಪಟುಗಳು ಭಾಗವಹಿಸಿದ್ದರು. ಜಿದ್ದಾಜಿದ್ದಿನ ಸ್ಪರ್ಧೆಗಳಲ್ಲಿ ಅತ್ಯುತ್ತಮ ಸಾಧನೆಯನ್ನು ತೋರಿದ ವಿದ್ಯಾರ್ಥಿಗಳು ಇತರ ತಂಡಗಳನ್ನು ಮಣಿಸಿ ಹ್ಯಾಟ್ರಿಕ್ ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ
:: ಫುರುಷರ ವಿಭಾಗದಲ್ಲಿ :: 
ಪ್ರಥಮ ವರ್ಷದ ಡಾಟಾ ಸೈನ್ಸ್ ವಿಭಾಗದ ಭುವನ್ ಕುಮಾರ್ ಲಾಂಗ್‍ಜಂಪ್‍ನಲ್ಲಿ ಚಿನ್ನ ಹಾಗೂ 4×100ಮೀ ರಿಲೇಯಲ್ಲಿ ಬೆಳ್ಳಿ, ಪ್ರಥಮ ವರ್ಷದ ಎಲೆಕ್ಟ್ರಾನಿಕ್ಸ್ ವಿಭಾಗದ ಜೀವನ್ ಡೆಕತ್ಲಾನ್ ಸ್ಪರ್ಧೆಯಲ್ಲಿ ಚಿನ್ನ, ತೃತೀಯ ಎಐಎಂಎಲ್ ವಿಭಾಗದ ಅನ್ವಿತ್.ಬಿ.ಎಂ 20 ಕಿ.ಮೀ ನಡಿಗೆ ಸ್ಪರ್ಧೆಯಲ್ಲಿ ಚಿನ್ನ, ಪ್ರಥಮ ವರ್ಷದ ಎಲೆಕ್ಟ್ರಾನಿಕ್ಸ್ ವಿಭಾಗದ ನಂದೀಶ್.ಬಿ.ಟಿ 4×400ಮೀ ಮಿಕ್ಸೆಡ್ ರಿಲೇಯಲ್ಲಿ ಬೆಳ್ಳಿ ಹಾಗೂ 4×400ಮೀ ರಿಲೇಯಲ್ಲಿ ಬೆಳ್ಳಿ, ದ್ವಿತೀಯ ವರ್ಷದ ಕಂಪ್ಯೂಟರ್ ವಿಭಾಗದ ಕಾರ್ತಿಕ್.ಆರ್ 4×100ಮೀ ರಿಲೇಯಲ್ಲಿ ಬೆಳ್ಳಿ ಹಾಗೂ 110ಮೀ ಹರ್ಡಲ್ಸ್‍ನಲ್ಲಿ ಬೆಳ್ಳಿ, ದ್ವಿತೀಯ ಮೆಕ್ಯಾನಿಕಲ್ ವಿಭಾಗದ ಸಂಭ್ರಮ್ 4×400ಮೀ ಮಿಕ್ಸೆಡ್ ರಿಲೇಯಲ್ಲಿ ಬೆಳ್ಳಿ ಹಾಗೂ 4×400ಮೀ ರಿಲೇಯಲ್ಲಿ ಬೆಳ್ಳಿ, ದ್ವಿತೀಯ ಕಂಪ್ಯೂಟರ್ ವಿಭಾಗದ ವೀಕ್ಷಿತ್ ಗೌಡ.ವಿ.ಪಿ 4×400ಮೀ ರಿಲೇಯಲ್ಲಿ ಬೆಳ್ಳಿ, ತೃತೀಯ ಎಐಎಂಎಲ್ ವಿಭಾಗದ ಮಣಿಸ್ಕಂದ.ಡಿ.ಕೆ 4×400ಮೀ ರಿಲೇಯಲ್ಲಿ ಬೆಳ್ಳಿ, ತೃತೀಯ ಎಐಎಂಎಲ್ ವಿಭಾಗದ ಜಗದೀಶ್.ಕೆ 4×100ಮೀ ರಿಲೇಯಲ್ಲಿ ಬೆಳ್ಳಿ, ದ್ವಿತೀಯ ವರ್ಷದ ಎಂಬಿಎ ವಿಭಾಗದ ವಿಲಾಸ್ ಚೌಟ.ಬಿ ಪೋಲ್‍ವಾಲ್ಟ್‍ನಲ್ಲಿ ಬೆಳ್ಳಿ, ತೃತೀಯ ಕಂಪ್ಯೂಟರ್ ಸೈನ್ಸ್ ವಿಭಾಗದ ಅಭಿನಂದನ್ ಡೆಕತ್ಲಾನ್‍ನಲ್ಲಿ ಬೆಳ್ಳಿ, ದ್ವಿತೀಯ ಮೆಕ್ಯಾನಿಕಲ್ ವಿಭಾಗದ ರಮಿತ್‍ರಾಜ್.ಎನ್.ಎಸ್, 4×100ಮೀ ರಿಲೇಯಲ್ಲಿ ಬೆಳ್ಳಿ, ದ್ವಿತೀಯ ಡಾಟಾ ಸೈನ್ಸ್ ವಿಭಾಗದ ಹರ್ಷಿತ್.ಎಂ.ನಾಯ್ಕ್ ಹ್ಯಾಮರ್ ಥ್ರೋನಲ್ಲಿ ಕಂಚು, ದ್ವಿತೀಯ ಎಲೆಕ್ಟ್ರಾನಿಕ್ಸ್ ವಿಭಾಗದ ಸನ್ಮಿತ್.ಆರ್.ಸಿ 110ಮೀ ಹರ್ಡಲ್ಸ್‍ನಲ್ಲಿ ಕಂಚು ಮತ್ತು ತೃತೀಯ ಮೆಕ್ಯಾನಿಕಲ್ ವಿಭಾಗದ ಅಜಿತ್ ಕುಮಾರ್.ಎಂ 20 ಕಿಮೀ ನಡಿಗೆ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ.

ಮಹಿಳೆಯರ ವಿಭಾಗದಲ್ಲಿ :: 
ಪ್ರಥಮ ವರ್ಷದ ಕಂಪ್ಯೂಟರ್ ಸೈನ್ಸ್ ವಿಭಾಗದ ಅರ್ಪಿತಾ ಬಾಲಚಂದ್ರ ನಾಯ್ಕ್ ಟ್ರಿಪಲ್ ಜಂಪ್‍ನಲ್ಲಿ ಚಿನ್ನ, 400ಮೀ ಹರ್ಡಲ್ಸ್‍ನಲ್ಲಿ ಚಿನ್ನ ಹಾಗೂ 4×400ಮೀ ರಿಲೇಯಲ್ಲಿ ಬೆಳ್ಳಿ, ತೃತೀಯ ಎಲೆಕ್ಟ್ರಾನಿಕ್ಸ್ ವಿಭಾಗದ ವಿದ್ಯಾರ್ಥಿನಿ ವಿದ್ಯಾ ಸಿ ಎಸ್ 20ಕಿಮೀ ನಡಿಗೆಯಲ್ಲಿ ಚಿನ್ನ, 10ಕಿಮೀ ಓಟದಲ್ಲಿ ಮತ್ತು 4×400ಮೀ ರಿಲೇಯಲ್ಲಿ ಬೆಳ್ಳಿ ಹಾಗೂ 21ಕಿಮೀ ಹಾಫ್ ಮ್ಯಾರಥಾನ್‍ನಲ್ಲಿ ಕಂಚಿನ ಪದಕ, ದ್ವಿತೀಯ ಎಂಬಿಎ ವಿಭಾಗದ ಯಶಿತಾ.ಎನ್ ಹೆಪ್ಟತ್ಲಾನ್‍ನಲ್ಲಿ ಚಿನ್ನ, 100 ಮೀ ಹರ್ಡಲ್ಸ್‍ನಲ್ಲಿ ಬೆಳ್ಳಿ, ದ್ವಿತೀಯ ವರ್ಷದ ಕಂಪ್ಯೂಟರ್ ಸೈನ್ಸ್ ವಿಭಾಗದ ಜೀಕ್ಷಿತಾ.ಕೆ 4×400ಮೀ ರಿಲೇಯಲ್ಲಿ ಬೆಳ್ಳಿ, 21ಕಿಮೀ ಹಾಫ್ ಮ್ಯಾರಥಾನ್‍ನಲ್ಲಿ ಬೆಳ್ಳಿ ಮತ್ತು 1500 ಮೀಟರ್ ಓಟದಲ್ಲಿ ಕಂಚಿನ ಪದಕ, ಪ್ರಥಮ ವರ್ಷದ ಎಲೆಕ್ಟ್ರಾನಿಕ್ಸ್ ವಿಭಾಗದ ಪೂಜಾಶ್ರೀ 200ಮೀ ಓಟದಲ್ಲಿ ಬೆಳ್ಳಿ ಹಾಗೂ 4×400ಮೀ ಮಿಕ್ಸೆಡ್ ರಿಲೇಯಲ್ಲಿ ಬೆಳ್ಳಿ, ದ್ವಿತೀಯ ಎಂಬಿಎ ವಿಭಾಗದ ನೀಕ್ಷಿತಾ ಶೆಟ್ಟಿ ಹ್ಯಾಮರ್ ಥ್ರೋನಲ್ಲಿ ಬೆಳ್ಳಿ, ದ್ವಿತೀಯ ಕಂಪ್ಯೂಟರ್ ಸೈನ್ಸ್ ವಿಭಾಗದ ಸಿಂಚನ.ಸಿ.ಎಸ್ ಪೋಲ್‍ವಾಲ್ಟ್‍ನಲ್ಲಿ ಬೆಳ್ಳಿ, ತೃತೀಯ ಕಂಪ್ಯೂಟರ್ ಸೈನ್ಸ್‍ನ ಬಿಂದುಶ್ರೀ.ಎಚ್.ರೈ 4×400ಮೀ ರಿಲೇಯಲ್ಲಿ ಬೆಳ್ಳಿ, ದ್ವಿತೀಯ ಡಾಟಾ ಸೈನ್ಸ್ ವಿಭಾಗದ ಅಶ್ವಿನಿ 4×400ಮೀ ರಿಲೇಯಲ್ಲಿ ಬೆಳ್ಳಿ, ದ್ವಿತೀಯ ಡಾಟಾ ಸೈನ್ಸ್ ವಿಭಾಗದ ಸುಪ್ರೀತಾ ಎನ್,ಎಸ್ 20 ಕಿಮೀ ನಡಿಗೆಯಲ್ಲಿ ಕಂಚು, ತೃತೀಯ ಕಂಪ್ಯೂಟರ್ ಸೈನ್ಸ್ ವಿಭಾಗದ ಶ್ರೇಯಾ.ಎಂ ಪೋಲ್‍ವಾಲ್ಟ್‍ನಲ್ಲಿ ಕಂಚು, ದ್ವಿತೀಯ ಎಐಎಂಎಲ್ ವಿಭಾಗದ ಚೈತನ್ಯ.ಎ.ಎನ್ 100ಮೀ ಹರ್ಡಲ್ಸ್ ಮತ್ತು 400ಮೀ ಹರ್ಡಲ್ಸ್‍ನಲ್ಲಿ ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ.
ಇದಲ್ಲದೆ ಪ್ರಫುಲ್.ಯು.ಎಸ್, ನಮಿತ್.ಜೆ, ಮಂಜುಶ್ರೀ.ಎ, ಪ್ರತೀಕ್ಷಾ.ಆರ್, ದಿಶಾ, ವೈಶಾಲಿ, ವರ್ಷಿತಾ.ಪಿ.ಆಳ್ವ, ಮತ್ತು ಶ್ರಾವ್ಯ.ಎಲ್.ಕೆ ವಿಜೇತ ತಂಡದ ಇತರ ಸದಸ್ಯರಾಗಿ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ.ಬಾಲಚಂದ್ರ ಗೌಡ ಭಾರ್ತಿಕುಮೇರು ಅವರ ಮಾರ್ಗದರ್ಶನದಲ್ಲಿ ಭಾರತೀಯ ಸೇನಾಪಡೆಗಳ ವಿಶ್ರಾಂತ ಅತ್ಲೆಟಿಕ್ ತರಬೇತುದಾರ ರವಿಶಂಕರ್ ಮುಕುಂದ ತರಬೇತಿಯನ್ನು ನೀಡಿದ್ದರು ಎಂದು ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ತಿಳಿಸಿದ್ದಾರೆ.  

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಮಡಿಕೇರಿ ಹಿಂದೂ ಮಲಯಾಳಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ*

ಮಾರ್ಚ್ 4, 2026

*ಸ್ಕೌಟ್ಸ್ ಮತ್ತು ಗೈಡ್ಸ್ ಚಾರಣಿಗರಿಗೆ ಪ್ರಮಾಣ ಪತ್ರ ವಿತರಣೆ : ಚಾರಣದಿಂದ ಸಾಹಸ ಮನೋಭಾವ ಹಾಗೂ ಆತ್ಮವಿಶ್ವಾಸ ಬೆಳೆಯುತ್ತದೆ : ಈರಮಂಡ ಹರಿಣಿ ವಿಜಯ್ ಅಭಿಮತ*

ಮಾರ್ಚ್ 4, 2026

test

ಮಾರ್ಚ್ 4, 2026

*ಸ್ಕೌಟ್ಸ್ ಮತ್ತು ಗೈಡ್ಸ್ ಚಾರಣಿಗರಿಗೆ ಪ್ರಮಾಣ ಪತ್ರ ವಿತರಣೆ : ಚಾರಣದಿಂದ ಸಾಹಸ ಮನೋಭಾವ ಹಾಗೂ ಆತ್ಮವಿಶ್ವಾಸ ಬೆಳೆಯುತ್ತದೆ : ಈರಮಂಡ ಹರಿಣಿ ವಿಜಯ್ ಅಭಿಮತ*

ಮಾರ್ಚ್ 4, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ  NEWS DESK ಮಾ.4 : ಪ್ರಕೃತಿಯ ನಡುವಿನ ಚಾರಣ ವಿದ್ಯಾರ್ಥಿಗಳಲ್ಲಿ ಸಾಹಸ ಮನೋಭಾವ ಮತ್ತು ಆತ್ಮವಿಶ್ವಾಸವನ್ನು ಬೆಳೆಸುತ್ತದೆ ಎಂದು…

test

ಮಾರ್ಚ್ 4, 2026

*‘ವಿಶ್ವ ಶ್ರವಣ ದಿನ’ ಪ್ರಯುಕ್ತ ಬೀದಿ ನಾಟಕದ ಮೂಲಕ ಜಾಗೃತಿ*

ಮಾರ್ಚ್ 3, 2026

*ಶ್ರೀ ಯೋಗಿ ನಾರಾಯಣ ಯತೀಂದ್ರರ ಜಯಂತಿ(ಕೈವಾರ ತಾತಯ್ಯ)*

ಮಾರ್ಚ್ 3, 2026

*ಸಂಸದರಿಂದ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ ಪುಸ್ತಕ ಬಿಡುಗಡೆ*

ಮಾರ್ಚ್ 3, 2026

*ಗ್ಯಾರಂಟಿ ಯೋಜನೆಗಳ ತಾಲ್ಲೂಕು ಸಮಿತಿ ಸಭೆ*

ಮಾರ್ಚ್ 3, 2026

*ಪ್ರೌಢಶಾಲಾ ಶಿಕ್ಷಕರಿಗೆ ಗಣತಿ ಕಾರ್ಯದಿಂದ ವಿನಾಯಿತಿ ಕೋರಿ ಕೊಡಗು ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ಕೊಡಗು*

ಮಾರ್ಚ್ 3, 2026

*ಸಂಕಷ್ಟದಲ್ಲಿದ್ದ ಕನ್ನಡಿಗರಿಗೆ ಕುಮಾರಸ್ವಾಮಿ-ಸಿದ್ದರಾಮಯ್ಯ ಸಾಥ್: ಮೂರು ದಿನಗಳ ಬಳಿಕ ಬೆಂಗಳೂರಿನಲ್ಲಿ ನೆಮ್ಮದಿಯ ನಿಟ್ಟುಸಿರು ಬಿಟ್ಟ ಪ್ರಯಾಣಿಕರು*

ಮಾರ್ಚ್ 3, 2026

*ಹಳೆಯ ಮೀಸಲಾತಿ ನಿಯಮಗಳಂತೆ 56 ಸಾವಿರ ಹುದ್ದೆಗಳ ನೇಮಕಾತಿಗೆ ನಿರ್ಧರಿಸಿರುವುದು ಸ್ವಾಗತಾರ್ಹ*

ಮಾರ್ಚ್ 3, 2026

*ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ ‘Whistle Blower Policy’ ಜಾರಿ – ಭ್ರಷ್ಟಾಚಾರದ ವಿರುದ್ಧ ದೂರು ನೀಡಲು ಮುಕ್ತ ಅವಕಾಶ*

ಮಾರ್ಚ್ 3, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.