ವಿರಾಜಪೇಟೆ ಜು.2 NEWS DESK : ಮೈಸೂರು ವಿಶ್ವ ವಿದ್ಯಾನಿಲಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಯುನಿಸೆಫ್ ವತಿಯಿಂದ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಆಯೋಜಿಸಲಾಗಿದ್ದ ಬದಲಾವಣೆಗಾಗಿ ಮಾಧ್ಯಮ –ಮಕ್ಕಳ ವಿಷಯಗಳು ಕುರಿತ ಎರಡು ದಿನಗಳ ಕಾಲ ನಡೆದ ಕಾರ್ಯಾಗಾರದಲ್ಲಿ ಕೊಡಗಿನ ವಿರಾಜಪೇಟೆಯ ಪತ್ರಕರ್ತೆ ರಜಿತ ಕಾರ್ಯಪ್ಪ ಭಾಗವಹಿಸಿ ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ.
ಈ ಸಂದರ್ಭ ಕರ್ನಾಟಕ, ತೆಲಂಗಾಣ ಹಾಗೂ ಆಂದ್ರಪ್ರದೇಶದ ಯೂನಿಸೆಫ್ನ ಸಂವಹನ ವಕಾಲತ್ತು ಮತ್ತು ಪಾಲುದಾರಿಕೆ ತಜ್ಞ ಪ್ರೋಸುನ್ ಸೆನ್, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಪ್ರೋ. ಎಂ.ಎಸ್. ಸಪ್ನಾ, ಮಂಜುನಾಥ್ ಸುಬೇದಾರ್, ಡಾ. ಎಂ.ಮಂಜುಳಾ, ಎಂ. ಪುಷ್ಪಲತಾ ಸೇರಿದಂತೆ ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ ಜಿಲ್ಲೆಯ ವಿವಿಧ ಭಾಗಗಳ ಪತ್ರಕರ್ತರು, ಹವ್ಯಾಸಿ ಪತ್ರಕರ್ತರು ಹಾಜರಿದ್ದರು.