
ಸೋಮವಾರಪೇಟೆ ಜು.4 NEWS DESK : ಕೊಡಗು ಜಿಲ್ಲಾ ಮೊಗೇರಾ ಸೇವಾ ಸಮಿತಿ ವತಿಯಿಂದ ಬೇಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಛತಾ ಶ್ರಮದಾನ ನಡೆಯಿತು.
ಸಮಿತಿಯ ಪ್ರಮುಖರು, ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳ ಪೋಷಕರು ಶಾಲೆಯ ಆವರಣದಲ್ಲಿದ್ದ ಗಿಡಗಂಟಿಗಳನ್ನು ಕಡೆದು, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೆಕ್ಕಿ ಸ್ವಚ್ಛಗೊಳಡಿಸಿದರು.
ಈ ಸಂದರ್ಭ ಮೊಗೇರಾ ಸೇವಾ ಸಮಿತಿಯ ಸದಸ್ಯರಾದ ಕಿಟ್ಟು, ರಾಮು, ಸಂಜು, ಐತ್ತಪ್ಪ, ಜಗದೀಶ್, ಸುರೇಶ್ ಇದ್ದರು.









