ನಾಪೋಕ್ಲು ಜು.5 NEWS DESK : ಕೊಡಗು ಸುನ್ನೀ ಜಂಈಯ್ಯತುಲ್ ಮುಹಲ್ಲಿಮೀನ್ ಕೇಂದ್ರ ಸಮಿತಿಯ ವತಿಯಿಂದ ಮನೆ ನಿರ್ಮಾಣಕ್ಕೆ ಎಮ್ಮೆಮಾಡುನಲ್ಲಿ ಶಿಲಾನ್ಯಾಸ ನೆರವೇರಿಸಲಾಯಿತು.
ಸಮಸ್ತ ಶತಮಾನೋತ್ಸವದ ಪ್ರಯುಕ್ತ 100 ಉಸ್ತಾ ದ್ (ಮುಹಲ್ಲಿಂ) ಗಳಿಗೆ ಮನೆ ನಿರ್ಮಾಣ ಮಾಡುವುದಾಗಿ ಘೋಷಿಸಲಾಗಿದ್ದು, ಅದರ ಭಾಗವಾಗಿ ಕೊಡಗು ಜಿಲ್ಲೆಯಲ್ಲಿ ಎರಡು ಫಲಾನುಭವಿಗಳಿದ್ದಾರೆ . ಅದರೊಲೊಬ್ಬರಾದ ಎಮ್ಮೆಮಾಡಿನ ನೌಶಾದ್ ಲತೀಫಿ ರವರ ಮನೆಗೆ ಶಿಲಾನ್ಯಾಸ ಕಾರ್ಯಕ್ರಮವನ್ನು ಕೂರ್ಗ್ ಜಂಈಯ್ಯತುಲ್ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಹು : ಅಶ್ರಫ್ ಅಹ್ಸನಿ ಉಸ್ತಾದರ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭ ಕೊಡಗು ಜಂಈಯ್ಯತುಲ್ ಮುಹಲ್ಲಿಮಿನ್ ಕೋಶಾಧಿಕಾರಿ ಅಬ್ದುಲ್ಲ ಸಖಾಫಿ, ಪರೀಕ್ಷಾ ವಿಭಾಗ ಕಾರ್ಯದರ್ಶಿ ಸಂಶುದ್ದೀನ್ ಅಂಜದಿ ಬಲಮುರಿ, ಜಿಲ್ಲಾ ನೇತಾರರಾದ ನಝೀರ್ ಸಖಾಫಿ ಕುಂಜಿಲ. ಹಂಝ ರಹ್ಮಾನಿ, ಸ್ಥಳೀಯ ಮುದರ್ರಿಸರಾದ ಹಂಝ ಸಖಾಫಿ, ಖತೀಬರಾದ ಮುಹಮ್ಮದ್ ರಾಝಿಖ್ ಫೈಝಿ ಪಟ್ಟಾಂಬಿ ಹಾಗೂ ಸ್ಥಳೀಯ ಮುಸ್ಲಿಂ ಜಮಾಅತ್, ಎಸ್.ವೈ.ಎಸ್.ಎಸ್ ಹಾಗೂ ಎಸ್.ಎಫ್ ಸಂಘ ಕುಟುಂಬದ ನೇತಾರರು ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ.