ಮಡಿಕೇರಿ ಜು.7 NEWS DESK : ಕೊಡವ ರೈಡರ್ಸ್ ಕ್ಲಬ್ 6ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ 5ನೇ ವರ್ಷದ ವನಮಹೋತ್ಸವವನ್ನು ಹೆಬ್ಬಾಲೆ ದೇವರಪುರ ದೇವರ ಕಾಡುವಿನಲ್ಲಿ ಹಮ್ಮಿಕೊಳ್ಳಲಾಯಿತು. ಹೆಬ್ಬಾಲೆ ದೇವರಪುರ ಶ್ರೀ ಭದ್ರಕಾಳಿ ಹಾಗೂ ಅಯ್ಯಪ್ಪ ದೇವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಇಲ್ಲಿನ ದೇವರಕಾಡುವಿನಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇಲ್ಲಿನ ದೇವಸ್ಥಾನ ಆಡಳಿತ ಮಂಡಳಿ ಸದಸ್ಯರು, ಊರಿನ ತಕ್ಕಮುಖ್ಯಸ್ಥರು ಹಾಗೂ ಗ್ರಾಮಸ್ಥರು ಸೇರಿದಂತೆ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಾವು ಗಿಡಗಳನ್ನು ನೆಡುವುದರ ಮೂಲಕ ಪರಿಸರ ಜ್ಞಾನವನ್ನು ಪಡೆದುಕೊಂಡರು. ತಿತಿಮತಿ ಅರಣ್ಯ ಇಲಾಖೆ ಹಾಗೂ ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದಿಂದ ವಿವಿಧ ಕಾಡು ಜಾತಿಯ ಗಿಡಗಳು ಹಾಗೂ ಹಣ್ಣಿನ ಗಿಡಗಳನ್ನು ತಂದು ನೆಡಲಾಯಿತು. ಸುಮಾರು ಒಂದು ಸಾವಿರಕ್ಕೂ ಅಧಿಕ ಗಿಡಗಳು ಕೆಲವೇ ಗಂಟೆಗಳಲ್ಲಿ ನೆಟ್ಟು ಮುಗಿಸಿದ ವಿಧ್ಯಾರ್ಥಿಗಳು ಇನ್ನು ನೆಡಬೇಕು ಎಂಬ ತವಕದಲ್ಲಿದ್ದದ್ದು ವಿಶೇಷ ಎನ್ನಬಹುದು. ಈ ಬಾರಿ ಜಿಲ್ಲೆ ಮಾತ್ರವಲ್ಲದೆ ಹೊರಜಿಲ್ಲೆಯಿಂದ ಕೂಡ ವಿಧ್ಯಾರ್ಥಿಗಳು ಆಗಮಿಸಿ ವನಮಹೋತ್ಸವದಲ್ಲಿ ಪಾಲ್ಗೊಂಡರು. ಕೊಡವ ರೈಡರ್ಸ್ ಕ್ಲಬ್ ತಂಡದೊಂದಿಗೆ ತಿತಿಮತಿ ಅರಣ್ಯ ಇಲಾಖೆಯ ಸಿಬ್ಬಂದಿಗಳು, ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ವಿದ್ಯಾರ್ಥಿಗಳು, ಜಿಲ್ಲೆಯ ಬಾಂಡಿಂಗ್ ಬ್ಲೂಮ್ ತಂಡದ ಸದಸ್ಯರು, ಯೋಗ ಟ್ರೈಬ್ ಸದಸ್ಯರು, ಗೋಣಿಕೊಪ್ಪ ಕಾವೇರಿ ಕಾಲೇಜಿನ ಪದವಿ ಹಾಗೂ ಪದವಿ ಪೂರ್ವ ವಿಭಾಗದ ವಿದ್ಯಾರ್ಥಿಗಳು ಸೇರಿದಂತೆ ಇಲ್ಲಿನ ಎನ್ಎಸ್ಎಸ್ ಘಟಕದ ವಿದ್ಯಾರ್ಥಿಗಳು, ಗೋಣಿಕೊಪ್ಪಲಿನ ಲಯನ್ಸ್ ವಿದ್ಯಾಸಂಸ್ಥೆ, ಕೂರ್ಗ್ ಪಬ್ಲಿಕ್ ಸ್ಕೂಲ್ (ಕಾಪ್ಸ್), ದೇವರಪುರ ರಾಜೇಶ್ವರಿ ವಿದ್ಯಾಸಂಸ್ಥೆ, ಪೊನ್ನಂಪೇಟೆ ಸಾಯಿ ಶಂಕರ್ ವಿದ್ಯಾಸಂಸ್ಥೆ, ವಿರಾಜಪೇಟೆಯ ತ್ರಿವೇಣಿ ಸ್ಕೂಲ್ ಸೇರಿದಂತೆ ಮೈಸೂರಿನ ಫೋನಿಕ್ಸ್ ಇಂಟರ್ನ್ಯಾಷನಲ್ ಅಕಾಡೆಮಿ ಸ್ಕೂಲ್, ಬೆಂಗಳೂರಿನ ಟ್ರವೆಂಡರ್ ಸಂಸ್ಥೆಯ ಸದಸ್ಯರ ತಂಡ, ಮೈಸೂರಿನ ಎಸ್ ವೈ ಫೊಟೋಗ್ರಾಫಿ ಸದಸ್ಯರ ತಂಡ, ಯೂನಿಬಿಕ್ಸ್ ಸ್ನ್ಯಾಕ್ಸ್ ಸದಸ್ಯರ ತಂಡ ಸೇರಿದಂತೆ ಕೊಡವ ರೈಡರ್ಸ್ ಕ್ಲಬ್ ತಂಡ ಭಾಗವಹಿಸಿದರು. ಇದಕ್ಕೂ ಮೊದಲು ನಡೆದ ವೇದಿಕೆ ಸಮಾರಂಭದಲ್ಲಿ ಇಲ್ಲಿನ ಊರು ತಕ್ಕರಾದ ಸಣ್ಣುವಂಡ ವಸಂತ್ ಕುಶಾಲಪ್ಪ, ರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆಯ ಜಿಲ್ಲಾ ಸಂಘ ಚಾಲಕ್ ಚಕ್ಕೇರ ಮನು, ನಾಗರಹೊಳೆ ಎಸಿಎಫ್ ಕಂಬೇಯಂಡ ಗೋಪಾಲ್, ತಿತಿಮತಿ ಆರ್ ಎಫ್ ಓ ಹೆಚ್ ಎಸ್ ಗಂಗಾಧರ್, ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ಅಸಿಸ್ಟೆಂಟ್ ಪ್ರೊಫೆಸರ್ ಕೋಣೆರೀರ ನಾಣಯ್ಯ, ಸಮಾಜ ಸೇವಕರಾದ ಅಜ್ಜಿಕುಟ್ಟೀರ ಶಾಂತು ಚಿಣ್ಣಪ್ಪ, ಚಕ್ಕೇರ ಬಿಪಿನ್ ಅಚ್ಚಯ್ಯ ಹಾಗೂ ಕೊಡವ ರೈಡರ್ಸ್ ಕ್ಲಬ್ ಅಧ್ಯಕ್ಷ ಅಜ್ಜಿಕುಟ್ಟೀರ ಪ್ರಥ್ವಿ ಸುಬ್ಬಯ್ಯ ಉಪಸ್ಥಿತರಿದ್ದು ಮಾತನಾಡಿದರು. ಕಾರ್ಯಕ್ರಮದ ಮೊದಲಿಗೆ ಅಜ್ಜಮಾಡ ಪ್ರಮೀಳಾ ಕರುಂಬಯ್ಯ ಹಾಗೂ ಚೊಟ್ಟೆಯಂಡಮಾಡ ಸವಿತಾ ಪ್ರಾರ್ಥಿಸಿದರೆ. ಚಮ್ಮಟೀರ ಪ್ರವೀಣ್ ಉತ್ತಪ್ಪ ಸ್ವಾಗತಿಸಿ, ಸಣ್ಣುವಂಡ ದರ್ಶನ್ ಕಾವೇರಪ್ಪ ವಂದಿಸಿ, ಚೆನ್ನಪ್ಪಂಡ ಕಲ್ಪನ ತಿಮ್ಮಯ್ಯ ನಿರೂಪಿಸಿದರು.