ಮಡಿಕೇರಿ ನ.16 NEWS DESK : ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಪ್ರಯುಕ್ತ ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ IQAC ಮತ್ತು ಗ್ರಂಥಾಲಯ ವಿಭಾಗದ ವತಿಯಿಂದ “ಡಿಜಿಟಲ್ ಗ್ರಂಥಾಲಯದ ಮೂಲಕ ಜ್ಞಾನದ ಸಶಕ್ತೀಕರಣ” ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಮಂಗಳೂರಿನ ಎಡೈಸ್ ಸಂಸ್ಥೆಯ ವ್ಯವಸ್ಥಾಪಕ ಎಸ್. ದೀರಜ್ ಡಿಜಿಟಲ್ ಗ್ರಂಥಾಲಯಗಳ ಮಹತ್ವವನ್ನು ಪ್ರಸ್ತಾಪಿಸಿ, ಜ್ಞಾನವನ್ನು ಸವಲಾಗಿ ಬಳಕೆ ಮಾಡಲು ಮತ್ತು ಪ್ರಸ್ತುತ ಡಿಜಿಟಲ್ ಕ್ಷೇತ್ರದಲ್ಲಿ ಉಂಟಾಗುತ್ತಿರುವ ಮಹತ್ವದ ಬದಲಾವಣೆಯ ಹಾಗೂ ಬೆಳವಣಿಗೆಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮವನ್ನು ಕಾಲೇಜಿನ ಐ.ಕ್ಯೂ.ಎ.ಸಿ ಸಂಚಾಲಕ ಡಾ. ಕೆ.ಬಸವರಾಜು ಉದ್ಘಾಟಿಸಿದರು. ಅತಿಥಿ ಗ್ರಂಥಪಾಲಕರಾದ ಡಾ. ಇ.ರೂಪ ದಿನದ ಮಹತ್ವದ ಕುರಿತು ಮಾತನಾಡಿದರು. ಗ್ರಂಥಾಲಯ ಮೇಲ್ವಿಚಾರಕರೂ ಹಾಗೂ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಎಂ.ಬಿ. ದಿವ್ಯ ಹಾಜರಿದ್ದರು. ದ್ವಿತೀಯ ಬಿ.ಎ.ವಿದ್ಯಾರ್ಥಿನಿ ಸುಹೈರ ಸ್ವಾಗತಿಸಿದರೆ, ದ್ವಿತೀಯ ಬಿ.ಎ ವಿದ್ಯಾರ್ಥಿನಿ ವಂದನಾರ್ಪಣೆಯನ್ನು ನೆರವೇರಿಸಿದರು. ದ್ವಿತೀಯ ಬಿ.ಎ ವಿದ್ಯಾರ್ಥಿನಿ ಕೀರ್ತನ ನಿರೂಪಿಸಿದರು.