ಕುಶಾಲನಗರ NEWS DESK ನ.16 : ಕುಶಾಲನಗರದ ಮಹಾ ಗಣಪತಿ ದೇವಾಲಯಕ್ಕೆ ದಾನಿಗಳು ಬೆಳ್ಳಿ ಕವಚ ಮತ್ತು ಪೂಜಾ ಸಾಮಾಗ್ರಿಗಳನ್ನು ನೀಡಿದರು. ಉದ್ಯಮಿ ವೇಣು ಬಿಳಿಮಗ್ಗ ಹಾಗೂ ಕುಟುಂಬದ ಸದಸ್ಯರು ಗಣಪತಿಯ ಬೆಳ್ಳಿಯ ಅವತಾರ, ರಥ ಬೀದಿಯ ಉದ್ಯಮಿ ವಿ.ವಿ.ತಿಲಕ್ ಹಾಗೂ ಕುಟುಂಬ ಸದಸ್ಯರು ನಾಗದೇವರ ಬೆಳ್ಳಿ ಕವಚ ಮತ್ತು ಟಿಬೆಟಿಯನ್ ಮಹಿಳೆ ನಾಮಗೆಲ್ ಹಾಗೂ ಕುಟುಂಬ ಸದಸ್ಯರು ಬೆಳ್ಳಿಯ ಪೂಜಾ ಸಾಮಾಗ್ರಿಗಳನ್ನು ದೇವಸ್ಥಾನದ ಆಡಳಿತ ಆಡಳಿತ ಮಂಡಳಿ ಪ್ರಮುಖರಿಗೆ ಹಸ್ತಾಂತರ ಮಾಡಿದರು. ದೇವಾಲಯದ ಅರ್ಚಕ ರಾಘವೇಂದ್ರ ಭಟ್ ಹಾಗೂ ತಂಡದಿಂದ ವಿಶೇಷ ಪೂಜೆ ಮತ್ತು ಹೋಮ ನಡೆಯಿತು. ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಎಂ.ಕೆ.ದಿನೇಶ್, ಪ್ರಧಾನ ಅರ್ಚಕ ಆರ್.ಕೆ.ನಾಗೇಂದ್ರ ಬಾಬು, ಸಹ ಕಾರ್ಯದರ್ಶಿ ಕೆ.ಎನ್.ದೇವರಾಜ್, ನಿರ್ದೇಶಕ ಚಂದ್ರು, ವ್ಯವಸ್ಥಾಪಕ ಶ್ರೀನಿವಾಸ್ ರಾವ್ ಹಾಗೂ ಕುರುಹಿನ ಶೆಟ್ಟಿ ಸಂಘದ ಪ್ರಮುಖರು, ಕುಟುಂಬ ಸದಸ್ಯರು ಇದ್ದರು.











