ನಂತರ ಮಾತನಾಡಿದ ಅವರು ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಈ ಶಾಲೆಯಲ್ಲಿ ಉತ್ತಮ ಶೈಕ್ಷಣಿಕ ಚಟುವಟಿಕೆ ನಡೆಯುತ್ತಿದೆ. ನನ್ನ ಮೂವತ್ತು ವರ್ಷಗಳ ಸೇವೆಯಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದೆ, ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೂ ನಾಯಕನಾಗುವ ಎಲ್ಲಾ ಗುಣಗಳಿವೆ ಎಂದು ನುಡಿದರು.
ಪ್ರಗತಿ ಶಾಲೆಯ ವ್ಯವಸ್ಥಾಪಕರಾದ ಮಾದಂಡ ತಿಮ್ಮಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಶಾಲೆಯಲ್ಲಿ ವಿಧ್ಯಾಭ್ಯಾಸಗಳ ಜೊತೆಯಲ್ಲಿ ವಿವಿಧ ರೀತಿಯ ಚಟುವಟಿಕೆಗಳಿಗೆ ಹೆಚ್ಚಿನ ಪ್ರಮಾಣದ ಒತ್ತು ನೀಡಲಾಗುತ್ತಿದೆ. ಮಕ್ಕಳು ಹಾಗೂ ಪೋಷಕರು ಉತ್ತಮ ರೀತಿಯಲ್ಲಿ ನಮಗೆ ಸಹಕಾರ ನೀಡುತ್ತಾರೆ ಎಂದು ತಿಳಿಸಿದರು.
ವೇದಿಕೆಯಲ್ಲಿ ನೂತನ ಸಾಲಿನ ನಾಯಕರಿಗೆ ಜವಾಬ್ದಾರಿ ನೀಡುವ ಕಾರ್ಯಕ್ರಮ ನಡೆಯಿತು.
ಶಾಲಾ ನಾಯಕನಾಗಿ 9ನೇ ತರಗತಿ ಉಮರ ಸುಲ್ತಾನ್, ಉಪನಾಯಕಿಯಾಗಿ ಕೆ.ಎ.ದಿಯಾ, ಕ್ರೀಡಾ ನಾಯಕನಾಗಿ ಬಿ.ಜಿ.ಶಿಶಿರ ಸುಗಂಧ್, ಉಪ ಕ್ರೀಡಾ ನಾಯಕಿಯಾಗಿ 8ನೇ ತರಗತಿಯ ಬಿ.ಆರ್.ಧನ್ವಿ ಹಾಗೂ ಸಾಂಸ್ಕೃತಿಕ ಮಂತ್ರಿಯಾಗಿ 8ನೇ ತರಗತಿಯ ಫರ್ಜಿನ ರೋಷನ್, ಉಪ ಸಾಂಸ್ಕೃತಿಕ ಮಂತ್ರಿಯಾಗಿ ವಿ.ಎ.ಲಿಖಿತ ಹಾಗು ಶುಚಿತ್ವದ ನಾಯಕನಾಗಿ 9ನೇ ತರಗತಿಯ ಮೊಹಮ್ಮದ್ ರುಮಾನ್, ಉಪಶುಚಿತ್ವದ ಮಂತ್ರಿಯಾಗಿ 8ನೇ ತರಗತಿಯ ಎಂ.ಜೆ.ಆರ್ಯ ಆಯ್ಕೆಯಾಗಿ ಪ್ರತಿಜ್ಞೆ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯರಾದ ವಿಮಲ, ಪ್ರೌಢಶಾಲೆಯ ಮುಖ್ಯೋಪದ್ಯಾಯರಾದ ಪ್ರತೀಮ, ಆಡಳಿತ ಮಂಡಳಿಯ ಮುಖ್ಯಸ್ಥರಾದ ಶುಷ್ಮ ತಿಮ್ಮಯ್ಯ, ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಿದ್ದರು.