ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ಬಿಟಿಸಿಜಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಸಂಘ ಹಾಗೂ ಫ್ರೇಶರ್ಸ್ ಡೇ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಮಾಧ್ಯಮದಲ್ಲಿ ಶಿಕ್ಷಣ ಕೊಡಬೇಕೆಂಬ ಉದ್ದೇಶದಿಂದ ಒಕ್ಕಲಿಗರ ಸಂಘ ಸಂಸ್ಥೆಯನ್ನು ಹುಟ್ಟು ಹಾಕಿದೆ. ಶೇ.99ರಷ್ಟು ಮಂದಿ ಗ್ರಾಮೀಣ ವಿದ್ಯಾರ್ಥಿಗಳು ನಮ್ಮ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸತತ 7ನೇ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ಪಡೆದ ಹೆಗ್ಗಳಿಕೆ ಶಾಲೆಗಿದೆ. ಪ್ರಸಕ್ತ ವರ್ಷ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲೂ ಶೇ.100 ಫಲಿತಾಂಶ ಸಿಕ್ಕಿದೆ. ಹಿಂದಿನ ವರ್ಷದಿಂದ ಕಾಲೇಜಿನಲ್ಲಿ ವಿಜ್ಞಾನ ವಿಭಾಗ ತೆರೆಯಲಾಗಿದೆ ಎಂದು ಹೇಳಿದರು.
ವಿದ್ಯಾರ್ಥಿ ಸಂಘದ ಅಧ್ಯಕ್ಷರುಗಳಾಗಿ ಕೆ.ಎಲ್.ಕೀರ್ತನ್, ಎಚ್.ಆರ್.ಜೀವಿತ, ಉಪಾಧ್ಯಕ್ಷರುಗಳಾಗಿ ಪೂರ್ಣಚಂದ್ರ, ಸ್ನೇಹ, ಕ್ರೀಡಾ ಮಂತ್ರಿಗಳಾಗಿ ಕೃಷಿ, ಅಮೂಲ್ಯ, ಶಿಸ್ತುಪಾಲನ ಮಂತ್ರಿಗಳಾಗಿ ಮಿಥುನ್, ಇಬ್ಬನಿ, ಶಿಕ್ಷಣ ಸಚಿವರುಗಳಾಗಿ ಭಾನುಪ್ರಿಯಾ, ಧ್ರುಥನ್, ಸಾಂಸ್ಕೃತಿಕ ಸಚಿವರುಗಳಾಗಿ ಗೌತಮ್, ರಕ್ಷಿತಾ, ಆರ್ಥಿಕ ಸಚಿವರುಗಳಾಗಿ ಅಭಿನವ್, ನಮನ, ಆರೋಗ್ಯ ಸಚಿವರುಗಳಾಗಿ ಸಂಕೀತ್, ಕೆ.ಎಸ್.ಮೌನೇಶ್ ಅವರುಗಳು ಪ್ರಮಾಣವಚನ ಸ್ವೀಕರಿಸಿದರು. ನಂತರ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಭಾತ್ಮೀದಾರರಾದ ಕೆ.ಎಂ.ಜಗದೀಶ್, ಸಂಘದ ಕಾರ್ಯದರ್ಶಿ ಗಣಪತಿ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಪ್ರಾಂಶುಪಾಲರಾದ ಮಿಲ್‍ಡ್ರೆಡ್ ಗೋನ್ಸಾಲ್ವೆಸ್ ಹಾಗು ಆಡಳಿತ ಮಂಡಳಿ ನಿರ್ದೇಶಕರುಗಳು ಇದ್ದರು.