ಮಡಿಕೇರಿ ಜು.9 NEWS DESK : ಕರ್ನಾಟಕದ ಪ್ರಸಿದ್ಧ ಆಟೋಮೊಬೈಲ್ ಡೀಲರ್ ಗಳಲ್ಲಿ ಒಂದಾಗಿರುವಂತ ಬೆಂಗಳೂರಿನ ಟ್ರೈಡೆಂಟ್ ಟ್ರಕಿಂಗ್( ಭಾರತ್ ಬೆಂಜ್) ವತಿಯಿಂದ ಭಾಗಮಂಡಲದ ಕೆವಿಜಿ ಐಟಿಐನಲ್ಲಿ ಕ್ಯಾಂಪಸ್ ಸಂದರ್ಶನ ನಡೆಯಿತು.
ಕಂಪನಿಯ ಹೆಚ್.ಆರ್. ಕಮಲಾಕರ್ ಕಂಪನಿಯ ಕುರಿತು ಮತ್ತು ಉದ್ಯೋಗಿಗಳಿಗಿರುವ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು. ಭಾರತ್ ಬೆಂಜ್ ಮೈಸೂರು ಶಾಖೆಯ ವರ್ಕ್ಸ್ ಮ್ಯಾನೇಜರ್ ನವನೀತ್ ಮತ್ತು ಅಸಿಸ್ಟೆಂಟ್ ವರ್ಕ್ಸ್ ಮ್ಯಾನೇಜರ್ ಶಿವಕುಮಾರ್ ಉದ್ಯೋಗಿಗಳಿಗೆ ಸಂಸ್ಥೆಯಲ್ಲಿ ಇರುವಂತಹ ಅವಕಾಶಗಳ ಬಗ್ಗೆ ವಿವರಿಸಿದರು.
ಈ ಸಂದರ್ಭಭಾರತ ಬೆಂಜಿನ ಉದ್ಯೋಗಿಗಳಾಗಿರುವ ಸಂಸ್ಥೆಯ ಹಳೆ ವಿದ್ಯಾರ್ಥಿಗಳಾದ ಚಂದ್ರಶೇಖರ್, ಪ್ರಸನ್ನ ಮತ್ತು ಪ್ಲೇಸ್ಮೆಂಟ್ ಆಫೀಸರ್ ಕೆ.ಸಿ. ಉದಯಕುಮಾರ್ ಹಾಜರಿದ್ದರು. ಎಂಎಂವಿ ವೃತ್ತಿ ವಿಭಾಗದ ಕಿರಿಯ ತರಬೇತಿ ಅಧಿಕಾರಿ ಪುನೀತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರು ಅಭಿನಂದಿಸಿದರು.