ಮಡಿಕೇರಿ ಜು.9 NEWS DESK : ದೃಶ್ಯ ಹಾಗೂ ಛಾಯಾ ಚಿತ್ರೀಕರಣದಲ್ಲಿ ಪರಿಣಿತರಾಗಿರುವ ಪಾಲಿಬೆಟ್ಟದ ಆರ್.ಜಾನ್ ಅವರು ಕರ್ನಾಟಕ ಛಾಯಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕರ್ನಾಟಕ ವಿಡಿಯೋ ಮತ್ತು ಫೋಟೋ ಅಸೋಸಿಯೇಷನ್ ಹಾಗೂ ಬೈಸೇಲ್ ಇಂಟ್ರಾಕ್ಷನ್ಸ್ ಪ್ರವೇಟ್ ಲಿಮಿಟೆಡ್ ಸಹಯೋಗದೊಂದಿಗೆ
ಬೆಂಗಳೂರಿನ ಅರಮನೆ ಮೈದಾನದ “ತ್ರಿಪುರ ವಾಸಿನಿ” ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಮಟ್ಟದ ಪೋಟೋ ಟುಡೇ ವಸ್ತು ಪ್ರದರ್ಶನದಲ್ಲಿ ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟದ ಮೈಕಲ್ ಸ್ಟುಡಿಯೋ ಮಾಲೀಕ ಆರ್.ಜಾನ್ ಅವರಿಗೆ ಕರ್ನಾಟಕ ಛಾಯಾ ರತ್ನ ರಾಜ್ಯ ಪ್ರಶಸ್ತಿ ನೀಡಿ ಗಣ್ಯರು ಗೌರವಿಸಿದ್ದಾರೆ.
ದಕ್ಷಿಣ ಕೊಡಗಿನಿಂದ ರಾಜ್ಯ ಮಟ್ಟದ ಛಾಯಾ ರತ್ನ ಪ್ರಶಸ್ತಿ ಗೆ ಭಾಜನರಾದ ಜಾನ್ ಅವರನ್ನ ದಕ್ಷಿಣ ಕೊಡಗು ಫೋಟೋಗ್ರಾಫರ್ ಅಸೋಸಿಯೇಷನ್
ಅಧ್ಯಕ್ಷ ರವೀಂದ್ರ ಅಭಿನಂದಿಸಿದ್ದಾರೆ.
ಸಮಾರಂಭದಲ್ಲಿ ಉಪಾಧ್ಯಕ್ಷ ಶರತ್, ಕಾರ್ಯದರ್ಶಿ ರಾಮದಾಸ್, ಗೌರವ ಅಧ್ಯಕ್ಷ ದಾಡು ಜೋಸೆಫ್, ಮಾಜಿ ಅಧ್ಯಕ್ಷರುಗಳಾದ ಶಿವಕುಮಾರ್, ಪಾಲಿಬೆಟ್ಟ ಮೈಕಲ್ ಸೇರಿದಂತೆ ಮತ್ತಿತರರು ಹಾಜರಿದ್ದರು.










