ಪುತ್ತೂರು ಜು.15 NEWS DESK : ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ವಿದ್ಯಾರ್ಥಿಗಳು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು ನಡೆಸಿದ 2023-24ನೇ ಶೈಕ್ಷಣಿಕ ಸಾಲಿನ ಅಂತಿಮ ವರ್ಷದ ಇಂಜಿನಿಯರಿಂಗ್ ಪರೀಕ್ಷೆಯಲ್ಲಿ 2 ರ‍್ಯಾಂಕ್ ಗಳನ್ನು ಪಡೆದುಕೊಂಡಿದ್ದಾರೆ.
ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಕೇಶವ ಪ್ರಜ್ವಲ್.ಪಿ 9.38 ಸಿಜಿಪಿಎ ಅಂಕಗಳೊಂದಿಗೆ 3ನೇ ರ‍್ಯಾಂಕ್ ಹಾಗೂ ಕೆ.ಪಲ್ಲವಿ 9.33 ಸಿಜಿಪಿಎ ಅಂಕಗಳೊಂದಿಗೆ 5ನೇ ರ‍್ಯಾಂಕ್ ಗಳಿಸಿಕೊಂಡಿದ್ದಾರೆ. ಸಿವಿಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಪ್ರೊ.ಪ್ರಶಾಂತ್ ಹಾಗೂ ಪ್ರಾಧ್ಯಾಪಕರ ಸಮರ್ಥ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಈ ಸಾಧನೆಯನ್ನು ಮಾಡಿದ್ದಾರೆ.
ಕೇಶವ ಪ್ರಜ್ವಲ್.ಪಿ ಅವರು ಕುಂಬ್ಳೆಯ ಶ್ರೀವಾಣಿ ಹಾಗೂ ಉದಯಶಂಕರ ಭಟ್ ಅವರ ಪುತ್ರ. ಕೆ.ಪಲ್ಲವಿ ಅವರು ಬಂಟ್ವಾಳದ ಅಲ್ಲಿಪಾದೆಯ ಚಂದ್ರಿಕಾ ಹಾಗೂ ಕೆ.ಕಿಶೋರ್ ಕುಮಾರ್ ಅವರ ಪುತ್ರಿ.
ವಿದ್ಯಾರ್ಥಿಗಳ ಈ ಸಾಧನೆಗೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್, ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿಯ ಅಧ್ಯಕ್ಷರು, ಸಂಚಾಲಕರು, ನಿರ್ದೇಶಕರು, ಪ್ರಾಂಶುಪಾಲರು, ವಿಭಾಗ ಮುಖ್ಯಸ್ಥರು, ಉಪನ್ಯಾಸಕರು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿ ಅವರನ್ನು ಅಭಿನಂದಿಸಿದ್ದಾರೆ.