ನಾಪೋಕ್ಲು ಜು.22 NEWS DESK : ಜಿಲ್ಲೆಯಲ್ಲಿ ಮಳೆಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ನದಿ, ತೊರೆ, ಗದ್ದೆ ತೋಟಗಳಲ್ಲಿ ತುಂಬಿಕೊಂಡಿದ್ದ ನೀರು ತಗ್ಗಿದೆ.
ನಾಪೋಕ್ಲು – ಮೂರ್ನಾಡು ಸಂಪರ್ಕ ರಸ್ತೆಯ ಕಳೆದೆರಡು ದಿನಗಳಿಂದ ಕಾವೇರಿ ಪ್ರವಾಹದಿಂದಾಗಿ ಸಂಚಾರ ಸ್ಥಗಿತಗೊಂಡಿದ್ದು ಭಾನುವಾರ ಸಂಚಾರಕ್ಕೆ ಮುಕ್ತವಾಗಿದೆ. ನಾಪೋಕ್ಲು – ಕಲ್ಲುಮೊಟ್ಟೆ ರಸ್ತೆಯ ಚೆರಿಯ ಪರಂಬುವಿನಲ್ಲಿ ಕಾವೇರಿ ಪ್ರವಾಹದ ನೀರು ಹರಿಯುತ್ತಿದ್ದು ಸಂಪರ್ಕ ಸ್ಥಗಿತ ಮುಂದುವರೆದಿದೆ. ಎಮ್ಮೆಮಾಡು , ಕೈಕಾಡು ಸೇರಿದಂತೆ ಕಾವೇರಿ ನದಿ, ತೊರೆ ಪ್ರವಾಹದಿಂದ ಮುಳುಗಿದ್ದು ಬತ್ತ ಗದ್ದೆಗಳು, ಕಾಫಿ ತೋಟಗಳು ಇಳಿಮುಖಗೊಳ್ಳುತ್ತಿದೆ . ಗಾಳಿ-ಮಳೆಯಿಂದಾಗಿ ಹಲವೆಡೆ ಮರಗಳು ಬಿದ್ದು ನಷ್ಟ ಸಂಭವಿಸಿದೆ. ಬೇತು ಗ್ರಾಮದ ಮಕ್ಕಿ ಶಾಸ್ತಾವು ದೇವಾಲಯಕ್ಕೆ ತೆರಳುವ ರಸ್ತೆಯಲ್ಲಿ ಮರವೊಂದು ಮುರಿದುಬಿದ್ದಿದ್ದು ಬಳಿಕ ತೆರವುಗೊಳಿಸಲಾಯಿತು.
ಬಲ್ಲಮಾವಟಿ ಗ್ರಾಮದ ಮಾದಪ್ಪ ಎನ್ ಪಿ ಅವರ ವಾಸದ ಮನೆಯು ಮಳೆ ಗಾಳಿಯಿಂದಾಗಿ ಹಾನಿಗೊಂಡಿದ್ದು ಸ್ನಾನದ ಕೋಣೆಯ ಗೋಡೆಯು ಕುಸಿದಿದೆ.ಹೆಂಚುಗಳು ಹಾನಿಗೊಂಡಿವೆ.ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.
ನೆಲಜಿ, ಬಲ್ಲಮಾವಟ್ಟಿ, ಎಮ್ಮೆಮಾಡು, ಕಕ್ಕಬೆ ಸೇರಿದಂತೆ ಕೆಲವು ಗ್ರಾಮಗಳಲ್ಲಿ ಮಳೆ ಗಾಳಿಯಿಂದಾಗಿ ವಿದ್ಯುತ್ ಸಂಪರ್ಕ ವ್ಯತ್ಯಾಯವಾಗಿ ಚೆಸ್ಕಂ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕಾರ್ಯ ಪ್ರವರ್ತರಾಗಿದ್ದಾರೆ ..
ವರದಿ : ದುಗ್ಗಳ ಸದಾನಂದ.