ಕಾಡಾನೆಗಳಿಂದಾಗಿ ಗ್ರಾಮಸ್ಥರು ಮನೆಯಿಂದ ಹೊರಬರಲು ಜೀವ ಭಯ ಎದುರಾಗಿದೆ. ಕೂಲಿ ಕಾರ್ಮಿಕರು ತೋಟದ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಆತಂಕದಲ್ಲೇ ಶಾಲೆ, ಕಾಲೇಜು ಗೆ ತೆರಳುವಂತಾಗಿದೆ.
ಮದೆನಾಡು ಗ್ರಾಮದ ಸಾಲಾಪು ಸಮೀಪದ ಪಟ್ಟಡ ಕುಟುಂಬಸ್ಥರ ಕಾಫಿ ತೋಟಗಳಿಗೆ ಕಾಡಾನೆಗಳ ಹಿಂಡು ದಾಳಿ ನಡೆಸಿ ವ್ಯಾಪಕ ಹಾನಿ ಉಂಟಾಗಿದೆ. ಬಾಳೆ, ಅಡಿಕೆ, ತೆಂಗು, ಕಾಫಿ ಗಿಡ ಗಳನ್ನು ತುಳಿದು ದ್ವಂಸ ಮಾಡಿ ನಷ್ಟ ಮಾಡಿವೆ.
ಅಲ್ಲದೇ ಪಟ್ಟಡ ಪುರುಷೋತ್ತಮ, ಪಟ್ಟಡ ಲಲಿತ, ಪಟ್ಟಡ ಧನಂಜಯ ಅವರಿಗೆ ಸೇರಿದ ತೋಟಗಳಿಗೆ ನುಗ್ಗಿದ ಕಾಡಾನೆಗಳು ಕಾಫಿ ಬೆಳೆಗೆ ನಷ್ಟವಾಗಿದೆ.
ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭಾನುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಾಡಾನೆ ನಿಯಂತ್ರಣಕ್ಕೆ ಅರಣ್ಯ ಇಲಾಖೆಯವರು ಹಾಗೂ ಸಂಬಂಧ ಪಟ್ಟವರು ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
“ಕಾಡಾನೆ ಧಾಳಿಯಿಂದ ಉತ್ತಮ ಫಸಲುಭರಿತ ಗಿಡಗಳು ನಷ್ಟವಾಗಿವೆ . ಸುಮಾರು ನೂರು ಕಾಫಿ ಗಿಡಗಳು ಧ್ವಂಸವಾಗಿವೆ.ತೋಟದ ಕೃಷಿ ಫಸಲನ್ನು ಸಂಪೂರ್ಣ ನಾಶಪಡಿಸಿವೆ. ಇದರಿಂದಾಗಿ ಗ್ರಾಮದ ನಿವಾಸಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ .ಅರಣ್ಯ ಇಲಾಖೆ ,ಸರಕಾರ ಸೂಕ್ತ ಪರಿಹಾರ ಮತ್ತು ರಕ್ಷಣೆ ನೀಡಬೇಕು. :: ಪಟ್ಟಡ ಧನಂಜಯ. ಮದೆನಾಡು, ಗ್ರಾಮ ಸಾಲಾಪು
ಕಾಡಾನೆಗಳು ಹಲವು ಕಾಫಿ ಗಿಡಗಳನ್ನು ಬಾಳೆ, ಅಡಿಕೆ, ತೆಂಗು ನಾಶಪಡಿಸಿವೆ. ಕಾಡಾನೆಗಳ ಹಿಂಡು ಅಡ್ಡಾಡಿದ್ದು, ಕಷ್ಟಪಟ್ಟು ಬೆಳೆಸಿದ ಕೃಷಿ ನಷ್ಟವಾಗಿದೆ ಸಂಬಂಧಪಟ್ಟವರು ಪರಿಶೀಲಿಸಿ ಸೂಕ್ತ ಪರಿಹಾರ ನೀಡಬೇಕು.” :: ಪಟ್ಟಡ ರತ್ನಾವತಿ, ಮದೆನಾಡು, ಗ್ರಾಮ ಸಾಲಾಪು .
ವರದಿ : ದುಗ್ಗಳ ಸದಾನಂದ.