ಮಡಿಕೇರಿ ಜು.22 NEWS DESK : ದೇಶದ ಜನತೆಯ ನೆಮ್ಮದಿಯ ಬದುಕಿಗಾಗಿ ರಾಷ್ಟçದ ಗಡಿಗಳನ್ನು ಕಾಯಲು ವಿವಿಧ ಯುದ್ಧಗಳಲ್ಲಿ ಪಾಲ್ಗೊಂಡು ನಿವೃತ್ತರಾದ 20 ‘ಯುದ್ಧ ಕಲಿ’ಗಳನ್ನು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಘಟಕದಿಂದ ಆ.11 ರಂದು ನಡೆಯಲಿರುವ ಮಹಾಸಭೆಯಲ್ಲಿ ಸನ್ಮಾನಿಸಿ ಗೌರವಿಸಲಾಗುತ್ತದೆ ಎಂದು ಸಂಘದ ಅಧ್ಯಕ್ಷ ಕೊಟ್ಟುಕತ್ತೀರ ಪಿ.ಸೋಮಣ್ಣ ಅವರು ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠ್ಠಿಯಲ್ಲಿ ಮಾತನಾಡಿದ ಅವರು, ನಗರದ ಕಾವೇರಿ ಹಾಲ್‌ನಲ್ಲಿ ಆ.11 ರಂದು ಬೆಳಗ್ಗೆ 10.30 ಗಂಟೆಗೆ ಮಹಾಸಭೆಯನ್ನು ಆಯೋಜಿಸಲಾಗಿದೆ. ಸಭೆಗೂ ಮುನ್ನ ಬೆಳಗ್ಗೆ 9.30 ಗಂಟೆಗೆ ಇಲ್ಲಿನ ಜನರಲ್ ಕೆ.ಎಸ್. ತಿಮ್ಮಯ್ಯ ಮ್ಯೂಸಿಯಂನಲ್ಲಿರುವ ಯುದ್ಧ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಲಾಗುವುದು ಎಂದರು.
ಮಹಾಸಭೆಯಲ್ಲಿ 1962ರ ಇಂಡೋ ಚೀನಾ ಯುದ್ಧ, 1965 ರ ಇಂಡೋ ಪಾಕ್ ಯುದ್ಧ ಮತ್ತು 1971 ರ ಬಾಂಗ್ಲಾ ವಿಮೋಚನಾ ಯುದ್ಧಗಳಲ್ಲಿ ಪಾಲ್ಗೊಂಡಿದ್ದ, ಇದೀಗ ನಿವೃತ್ತರಾಗಿರುವ ಇಪ್ಪತ್ತು ಯೋಧರನ್ನು ಗುರುತಿಸಿ ಗೌರವಿಸಲಾಗುತ್ತಿದೆ ಎಂದು ಹೇಳಿದರು.
ಮಾಜಿ ಸೈನಿಕರಿಗೆ ಸನ್ಮಾನ- ಮಕ್ಕಳಿಗೆ ಪುರಸ್ಕಾರ- ಮಹಾಸಭೆಯಲ್ಲಿ 10 ಮಂದಿ ಮಾಜಿ ಸೈಣಿಕರನ್ನು ಸನ್ಮಾನಿಸಲಾಗುತ್ತದೆ ಮತ್ತು ಮಾಜಿ ಸೈನಿಕರ ಕುಟುಂಬದ, ಅಧಿಕ ಅಂಕ ಪಡೆದ 12 ಮಕ್ಕಳನ್ನು ಪುರಸ್ಕರಿಸಿ ಪ್ರೋತ್ಸಾಹಿಸಲಾಗುತ್ತದೆ ಎಂದು ಕೊಟ್ಟುಕತ್ತೀರ ಸೋಮಣ್ಣ ತಿಳಿಸಿದರು. ನೂತನ ಸದಸ್ಯರನ್ನು ಕರೆ ತನ್ನಿ- ಸಂಘದಲ್ಲಿ ಪ್ರಸ್ತುತ 603 ಸದಸ್ಯರುಗಳಿದ್ದಾರೆ. ಮಹಾಸಭೆಗೆ ಇವರು ಆಗಮಿಸುವ ಸಂದರ್ಭ ನೂತನವಾಗಿ ಸದಸ್ಯರಾಗುವವರು ಇದ್ದಲ್ಲಿ ಅವರನ್ನು ಕರೆ ತರುವಂತೆ ಮನವಿ ಮಾಡಿದ ಅವರು, ನೂತನ ಸದಸ್ಯತ್ವಕ್ಕೆ ಅಗತ್ಯವಾದ 1300 ರೂ.ಮತ್ತು 3 ಭಾವಚಿತ್ರ, ಸೈನಿಕ ಕಲ್ಯಾಣ ಇಲಾಖೆಯ ಗುರುತಿನ ಚೀಟಿ ಹಾಗೂ ಆಧಾರ್ ಕಾರ್ಡ್ ಪ್ರತಿಯನ್ನು ತಪ್ಪದೆ ತರಬೇಕು. ಮರಣ ನಿಧಿ ಪಡೆಯಲು ಇಚ್ಛಿಸುವ 60 ವರ್ಷದ ಒಳಗಿನವರು 2 ಸಾವಿರ ರೂ.ಗಳನ್ನು ತರುವುದು ಅಗತ್ಯವೆಂದು ಮಾಹಿತಿ ನೀಡಿದರು.
::: ಸನ್ಮಾನಕ್ಕೆ ಪಾತ್ರರಾಗಲಿರುವ ಯುದ್ಧ ಕಲಿಗಳು :::
ಮಡಿಕೇರಿ: ಕರ್ನಲ್ ಕೆ.ಸಿ ಸುಬ್ಬಯ್ಯ(1971 ಇಂಡೋ-ಪಾಕ್ ಯುದ್ಧ), ಲೆಫ್ಟಿನೆಂಟ್ ಕರ್ನಲ್ ಪಿ.ಸಿ ಕರುಂಬಯ್ಯ(1971 ಇಂಡೋ-ಪಾಕ್ ಯುದ್ಧ), ಪಿ.ಎಂ. ಕುಶಾಲಪ್ಪ (1971 ಇಂಡೋ-ಪಾಕ್ ಯುದ್ಧ), ಡಬ್ಯು.ಪಿ. ಸೋಮಯ್ಯ( 1965 ಇಂಡೋ-ಚೈನಾ ಯುದ್ಧ), ಬಿ.ವೈ.ಉತ್ತಯ್ಯ(1971 ಇಂಡೋ-ಪಾಕ್ ಯುದ್ಧ), ಎ.ಬಿ ಅಪ್ಪಣ್ಣ(1965 ಮತ್ತು 1971ಯುದ್ಧ), ಕೆ.ಎಂ ದೇವಯ್ಯ (1971 ಇಂಡೋ-ಪಾಕ್ ಯುದ್ಧ),ಬಿ.ಎಸ್. ಉತ್ತಪ್ಪ(1971 ಇಂಡೋ-ಪಾಕ್ ಯುದ್ಧ), ಸಿ.ಎಂ. ಕಾರಿಯಪ್ಪ (1971 ಇಂಡೋ-ಪಾಕ್ ಯುದ್ಧ), ಟಿ.ಬಿ ತಿಮ್ಮಯ್ಯ(1971 ಇಂಡೋ-ಪಾಕ್ ಯುದ್ಧ), ಮುಂಡಚಾAಡಿರ ಬೋಪಯ್ಯ(1971 ಇಂಡೋ-ಪಾಕ್ ಯುದ್ಧ), ಎಂ.ಯು. ಕುಶಾಲಪ್ಪ(1971 ಇಂಡೋ-ಪಾಕ್ ಯುದ್ಧ), ರಾಮಯ್ಯ(1971 ಇಂಡೋ-ಪಾಕ್ ಯುದ್ಧ), ಬಿ.ಎ ಬೆಳ್ಳಿಯಪ್ಪ(1971 ಇಂಡೋ-ಪಾಕ್ ಯುದ್ಧ), ಬಿ.ಎಸ್.ಗಣಪತಿ(1962, 1965, 1971 ಯುದ್ಧ), ಮಂದ್ರೀರ ಸಿ.ಕರುಂಬಯ್ಯ(1971 ಇಂಡೋ-ಪಾಕ್ ಯುದ್ಧ), ಕೆ.ಬಿ.ಅಪ್ಪಯ್ಯ(1971 ಇಂಡೋ-ಪಾಕ್ ಯುದ್ಧ), ಬಿ.ಸಿ. ಮುತ್ತಣ್ಣ(1962, 1965, 1971 ಯುದ), ಕೆ.ಪಿ. ಸೋಮಣ್ಣ(1971 ಇಂಡೋ-ಪಾಕ್ ಯುದ್ಧ). ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಸಿ.ಜಿ.ತಿಮ್ಮಯ್ಯ, ಸಂಚಾಲಕ ತಳೂರು ಕಾಳಪ್ಪ, ಮಹಿಳಾ ಘಟಕದ ಅಧ್ಯಕ್ಷರಾದ ಮಾಚಿಮಂಡ ಭವಾನಿ, ಹಾಗೂ ಸಹ ಕಾರ್ಯದರ್ಶಿ ಟಿ.ಬಿ.ಪ್ರಭಾಕರ್ ಉಪಸ್ಥಿತರಿದ್ದರು.