ಸುಂಟಿಕೊಪ್ಪ ಜು.24 NEWS DESK : ಸೋಮವಾರಪೇಟೆ, ಕುಶಾಲನಗರ ವ್ಯಾಪ್ತಿಯಲ್ಲಿ ಅಧಿಕ ಮಳೆಯ ಕಾರಣದಿಂದ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಬುಧವಾರ ಬೆಳಿಗ್ಗೆ ದಿಢೀರ್ ರಜೆ ಘೋಷಣೆ ಮಾಢಿದರು. ವಿಷಯ ತಿಳಿಯದ ಗ್ರಾಮೀಣ ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿ ಗೊಂದಲಕ್ಕೆ ಒಳಗಾದ ದೃಶ್ಯ ಇಂದು ಕಂಡುಬಂತು. ಮಂಗಳವಾರ ಸಂಜೆಯಿಂದ ಬಿರುಸಿನ ಮಳೆಯಾಗುತ್ತಿದ್ದ ಹಿನ್ನೆಲೆ ಇಂದು ಬೆಳಿಗ್ಗೆ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಆದರೆ ರಜೆಯ ಅರಿವಿಲ್ಲದೆ ಶಾಲೆಗೆ ಬಂದ ವಿದ್ಯಾರ್ಥಿಗಳು ಶಾಲೆಯ ಆವರಣದಲ್ಲೇ ಮಳೆ, ಚಳಿಗೆ ಕಾಲ ಕಳೆಯುವಂತ್ತಾಯಿತು. ಹೆಚ್ಚಿನ ಮಕ್ಕಳು ಬಸ್ ನಿಲ್ಧಾಣದಲ್ಲಿ, ಮೈದಾನದಲ್ಲಿ ಕಾಲ ಕಳೆದರು. ಹನಿ ಮಳೆಯ ನಡುವೆ ಮಕ್ಕಳು ಮೈದಾನದಲ್ಲಿ ಸೈಕಲ್ ಓಡಿಸಿದರು, ಕ್ರಿಕೆಟ್ ಆಟವಾಡಿದರು. ಈ ರೀತಿಯ ರಜೆ ಘೋಷಣೆಯಿಂದ ಮಕ್ಕಳ ಸುರಕ್ಷತೆ ಸಾಧ್ಯವೇ ? ಹವಾಮಾನ ಇಲಾಖೆಯಿಂದ ಜಿಲ್ಲಾಡಳಿತಕ್ಕೆ ಮಳೆಯ ಮುನ್ಸೂಚನೆ ದೊರೆಯುತ್ತಿಲ್ಲವೇ ? ಬೆಳಿಗ್ಗೆ ರಜೆ ಘೋಷಣೆ ಮಾಡಿದರೆ ಮಕ್ಕಳು, ಪೋಷಕರು ಏನು ಮಾಡಬೇಕು ? ಎನ್ನುವುದು ಪೋಷಕರ ಅಸಮಾಧಾನದ ಪ್ರಶ್ನೆಯಾಗಿದೆ.