ವಿರಾಜಪೇಟೆ ಜು.25 NEWS DESK : ಕುಶಾಲನಗರ ಕ್ರಿಯೇಟಿವ್ ಡ್ಶಾನ್ಸ್ ಅಕಾಡೆಮಿ ಮತ್ತು ಡ್ಶಾನ್ಸ್ ಇವೆಂಟ್ ಸ್ಟುಡಿಯೊ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ವಿರಾಜಪೇಟೆಯ ಬಾಚಮ್ಮಂಡ ವಿಮರ್ಶ ಮತ್ತು ಕೆ.ಸಿ.ತನ್ವಿ ದೇಚಮ್ಮ ಕಪಲ್ಸ್ ವಿಭಾಗದಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ.
ಬಾಚಮ್ಮಂಡ ವಿಮರ್ಶ ವಿರಾಜಪೇಟೆಯ ಸಂತ ಅನ್ನಮ್ಮ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದು, ನಿಸರ್ಗ ಬಡಾವಣೆ ನಿವಾಸಿ ಬಾಚಮ್ಮಂಡ ಕಿಶೋರ್ ಮತ್ತು ವಕೀಲರಾದ ಅನುಮಪ ಕಿಶೋರ್ ದಂಪತಿಯ ಪುತ್ರಿ. ತನ್ವಿ ದೇಚಮ್ಮ ಆಶಾ ಅವರ ಪುತ್ರಿಯಾಗಿದ್ದು, ಅರಮೇರಿಯ ಎಸ್.ಎಂ.ಎಸ್ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದಾಳೆ.
ವಿರಾಜಪೇಟೆಯ ಟೀಮ್ ಇಂಟೋಫೀಸ್ ನೃತ್ಯ ಶಾಲೆಯ ನೃತ್ಯ ಸಂಯೋಜಕ ವಿಷ್ಣು ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.










