ನವದೆಹಲಿ NEWS DESK ಜು.28 : (ಕೋವರ್ ಕೊಲ್ಲಿ ಇಂದ್ರೇಶ್) ದೇಶದ ಜೀವವಿಮಾ ಮಾರುಕಟ್ಟೆ ದಿನೇ ದಿನೇ ವಿಸ್ತರಿಸುತ್ತಾ ಸಾಗಿದ್ದು ಒಂದೆಡೆ ಖಾಸಗೀ ಕಂಪೆನಿಗಳು ಆರೋಗ್ಯ ವಿಮೆಗೆ ದುಬಾರಿ ದರ ವಿಧಿಸುತಿದ್ದರೆ ಸರ್ಕಾರಿ ಸಂಸ್ಥೆ ಪೋಸ್ಟ್ ಪೇಮೆಂಟ್ ಬ್ಯಾಂಕ್ (IPPB) ಬಡವರ ಕೈಗೆಟುಕುವ ವಿಮೆಯೊಂದನ್ನು ಕಳೆದ ತಿಂಗಳು ಬಿಡುಗಡೆ ಮಾಡಿದೆ. ಇಷ್ಟೊಂದು ಅಗ್ಗದ ದರದಲ್ಲಿ ಜೀವವಿಮೆ ಒದಗಿಸುತ್ತಿರುವುದು ಬಹುಶಃ ವಿಶ್ವದಲ್ಲೇ ಮೊದಲು ಆಗಿದೆ. ಇಂದಿಗೂ ಜೀವವಿಮೆ ಪಡೆಯಲು ಬಡ ವರ್ಗದ ಜನ ಹಿಂದೇಟು ಹಾಕುತ್ತಿರುವುದು ದುಬಾರಿ ಆಗಿರುವ ಪ್ರೀಮಿಯಂ ದರದ ಕಾರಣದಿಂದಾಗಿ ಮಾತ್ರ. ಆದರೆ ಇಧಿಗ ಇಷ್ಟು ಅಗ್ಗದ ದರದಲ್ಲಿ ಜೀವವಿಮೆ ಒದಗಿಸುತ್ತಿರುವುದು ಎಲ್ಲರಿಗೂ ವಿಮಾ ಸೌಲಭ್ಯ ಪಡೆಯಲು ಅನುಕೂಲವಾಗಲಿದೆ. ಈಗ ನೀವು ವರ್ಷಕ್ಕೆ ಕೇವಲ 755 ರೂ. ಪಾವತಿಸಿ ಪಾಲಿಸಿ ಪಡೆದುಕೊಂಡು, ಅಪಘಾತಕ್ಕೀಡಾಗಿ ಮೃತಪಟ್ಟರೇ ನಾಮಿನಿಯಾದ ಕುಟುಂಬದ ಸದಸ್ಯನಿಗೆ 15 ಲಕ್ಷ ರೂ. ಪಾವತಿಸುತ್ತಾರೆ. ಇನ್ನೂ ವಿಮೆ ತೆಗೆದುಕೊಂಡವರು ಮೃತಪಟ್ಟಾಗ ಮಾತ್ರವಲ್ಲದೇ, ಶಾಶ್ವತ ಅಂಗವೈಕಲ್ಯಕ್ಕೆ ಒಳಾಗದರೂ 15 ಲಕ್ಷ ರೂ. ಪಾವತಿಸಲಾಗುತ್ತಿದೆ. ಪಾಲಿಸಿದಾರರು ಮರಣ ಹೊಂದಿದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಿರಲು ಒಂದು ಲಕ್ಷ ರೂಪಾಯಿ ಮತ್ತು ಮದುವೆಗೆ ಇನ್ನೊಂದು ಲಕ್ಷ ರೂಪಾಯಿಗಳನ್ನು ಪಾವತಿಸಲಾಗುತ್ತದೆ. ಪಾಲಿಸಿದಾರ ಬದುಕಿದ್ದರೆ ವೈದ್ಯಕೀಯ ವೆಚ್ಚಕ್ಕಾಗಿ ಒಂದು ಲಕ್ಷ ರೂಪಾಯಿ ಪಾವತಿಸಲಾಗುತ್ತದೆ. ಆಸ್ಪತ್ರೆಯಲ್ಲಿ ಸಾಮಾನ್ಯ ಚಿಕಿತ್ಸೆಗೆ ಒಳಗಾದರೆ ದಿನಕ್ಕೆ 1000 ರೂಪಾಯಿ, ಐಸಿಯುನಲ್ಲಿ ದಾಖಲಾದರೆ ದಿನಕ್ಕೆ 2000 ರೂಪಾಯಿ ನೀಡಲಾಗುತ್ತದೆ. ಕೈ ಕಾಲು ಮುರಿದರೆ 25 ಸಾವಿರ ರೂ.ವರೆಗೆ ಪರಿಹಾರ ನೀಡಲಾಗುತ್ತದೆ. ವಾರ್ಷಿಕ 399 ರೂ ಪಾವತಿಸಿ ಪಾಲಿಸಿ ಪಡೆದರೆ ವ್ಯಕ್ತಿ ಅಪಘಾತದಲ್ಲಿ ಮರಣ ಹೊಂದಿದರೆ 10 ಲಕ್ಷ ರೂ. ವರೆಗೆ ವಿಮೆ ಪಡೆಯಬಹುದು. ಶಾಶ್ವತ ಅಂಗವೈಕಲ್ಯ, ಕೈಕಾಲು, ಬ್ರೈನ್ ಸ್ಟ್ರೋಕ್ಗೆ ಒಳಗಾದರೆ 10 ಲಕ್ಷ ರೂ. ಪಾವತಿಸಲಾಗುತ್ತದೆ. ಲಿಸಿದಾರರಿಗೆ ಅಪಘಾತ ಸಂಭವಿಸಿ ಆಸ್ಪತ್ರೆಗೆ ದಾಖಲಾದರೆ ಒಳರೋಗಿ ವಿಭಾಗದಡಿ 60 ಸಾವಿರ ರೂ.ವರೆಗೆ ಕ್ಲೇಮ್ ಮಾಡುವ ಅವಕಾಶವಿದೆ. ಅದೇ ರೀತಿ ಹೊರರೋಗಿ ಕೋಟಾದಡಿ 30 ಸಾವಿರ ರೂ. ಕ್ಲೈಮ್ ಮಾಡಬಹುದು. ಚಿಕಿತ್ಸೆಯ ಸಮಯದಲ್ಲಿ ದಿನಕ್ಕೆ 1000 ರೂಪಾಯಿಗಳನ್ನು ನಗದು ರೂಪದಲ್ಲಿ ನೀಡಲಾಗುತ್ತದೆ. ಇದನ್ನು 10 ದಿನಗಳವರೆಗೆ ನೀಡಲಾಗುತ್ತದೆ. ಇಬ್ಬರು ಮಕ್ಕಳಿಗೆ ಶಾಲಾ ಶುಲ್ಕದ 10 ಪ್ರತಿಶತ ಅಥವಾ ಒಂದು ಲಕ್ಷ ರೂ ವರೆಗೆ ನಗದು ಆಯ್ಕೆ ಮಾಡಬಹುದು. ಅಷ್ಟೇ ಅಲ್ಲ, ಅಪಘಾತಕ್ಕೀಡಾದ ಪಾಲಿಸಿದಾರನ ಸಾರಿಗೆ ವೆಚ್ಚಕ್ಕಾಗಿ 25 ಸಾವಿರ ರೂ ನೀಡಲಾಗುತ್ತದೆ. ಪಾಲಿಸಿದಾರ ಒಂದು ವೇಳೆ ಮೃತಪಟ್ಟರೆ ಅಂತ್ಯಸಂಸ್ಕಾರಕ್ಕೆ ಇನ್ನೂ 5 ಸಾವಿರ ನೀಡಲಾಗುತ್ತದೆ. 299 ರೂಪಾಯಿಗಳ ಪ್ರೀಮಿಯಂ ಅನ್ನು ಆಯ್ಕೆ ಮಾಡಿಕೊಂಡರೆ ಅಪಘಾತದಲ್ಲಿ ಮರಣಹೊಂದಿದರೆ, ಅಂಗವಿಕಲರಾಗಿದ್ದರೆ ಅಥವಾ ಪಾರ್ಶ್ವವಾಯುವಿಗೆ ಒಳಗಾಗಿದ್ದರೆ ಮೇಲಿನ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು. ಇದರಲ್ಲಿ ಇತರ ಹೆಚ್ಚುವರಿ ಪ್ರಯೋಜನಗಳು ಇರುವುದಿಲ್ಲ. ಈ ಪಾಲಿಸಿಯನ್ನು 18 ರಿಂದ 65 ವರ್ಷ ವಯಸ್ಸಿನ ಯಾವುದೇ ಭಾರತೀಯ ನಾಗರಿಕರು ಮೇಲಿನ ಮೂರು ಪಾಲಿಸಿಗಳನ್ನು ತೆಗೆದುಕೊಳ್ಳಬಹುದು. ನಿಮ್ಮ ಸಮೀಪದ ಎಲ್ಲಾ ಅಂಚೆ ಕಚೇರಿಗಳಲ್ಲಿ ಈ ಪಾಲಿಸಿ ಲಭ್ಯವಿದೆ. ಪೋಸ್ಟ್ ಆಫೀಸ್ ಗೆ ನೀವು ಕಾಲಿಡದೇ ವರುಷಗಳೇ ಆಗಿರಬಹುದಲ್ಲವೇ ? ಆದರೆ ಈ ಪಾಲಿಸಿಯು ನಿಮ್ಮನ್ನು ಕೂಡಲೇ ಪೋಸ್ಟ್ ಆಫೀಸಿಗೆ ತೆರಳುವಂತೆ ಮಾಡುವುದರಲ್ಲಿ ಸಂದೇಹವೇ ಇಲ್ಲ. ಈ ಪಾಲಿಸಿ ಪಡೆಯುವಲ್ಲಿ ಇನ್ನೊಂದು ಅನುಕೂಲವೆಂದರೆ ಅಲ್ಲಿ ನಿಮ್ಮನ್ನು ಯಾವುದೇ ದಾಖಲಾತಿ ಜೆರಾಕ್ಸ್ ಪ್ರತಿ , ಫೋಟೋ ಏನೂ ಕೇಳುವುದಿಲ್ಲ. ನಿಮ್ಮ ಆಧಾರ್ ಸಂಖ್ಯೆ ನಿಮಗೆ ತಿಳಿದಿದ್ದರೆ, ಹೆಬ್ಬೆರಳ ಅಚ್ಚು ಪಡೆದು ಕೇವಲ 10 ನಿಮಿಷದಲ್ಲೇ ಪಾಲಿಸಿ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ 155299 ಸಂಖ್ಯೆಗೆ ಕರೆ ಮಾಡಿ.