ಮಡಿಕೇರಿ NEWS DESK ಜು.28 : ಮಡಿಕೇರಿಯ ಕೊಡಗು ವಿದ್ಯಾಲಯ ಶಾಲೆಯಲ್ಲಿ ಕೇಂದ್ರ ಮಾಧ್ಯಮಿಕ ಶಿಕ್ಷಣ ಮಂಡಳಿ (CBSE) ಮತ್ತು ಶಿಕ್ಷಣ ಸಚಿವಾಲಯವು ಜುಲೈ 22ರಿಂದ 28ರವರೆಗೆ “ಶಿಕ್ಷಣ ಸಪ್ತಾಹ ಆಚರಿಸಿತು. ರಾಷ್ಟ್ರೀಯ ಶಿಕ್ಷಣ ನೀತಿ (NEP) 2020ರ 4ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಸಂದಭ೯ ಪರಿವರ್ತನಾತ್ಮಕ ಸುಧಾರಣೆಗಳನ್ನು ಪುನಃ ದೃಢಪಡಿಸಲು ಸೂಕ್ತ ವೇದಿಕೆಯನ್ನು ಈ ಸಪ್ತಾಹ ಒದಗಿಸಿತು. ಶಿಕ್ಷಣ ಸಪ್ತಾಹವು ಕಲಿಕೆಗೆ ಹೊಸ ಪ್ರಜ್ಞೆ ಮತ್ತು ಆವಿಷ್ಕಾರವನ್ನು ಉತ್ತೇಜಿಸಿತು. ಕಲಿಯುವವರು, ಶಿಕ್ಷಕರು, ತಜ್ಞರು ಮತ್ತು ಶಿಕ್ಷಣ ಕ್ಷೇತ್ರದ ಪಾಲುದಾರರು ಉತ್ತಮ ಚರ್ಚೆಗಳನ್ನು ನಡೆಸಿದರು. NEP 2020ರ ದೃಷ್ಟಿಕೋನವನ್ನು ತಳಮಟ್ಟದಲ್ಲಿ ನಿರ್ವಹಿಸುವತ್ತ ಈ ಕಾರ್ಯಕ್ರಮವು ಮಹತ್ವದ ಹೆಜ್ಜೆಯಿಟ್ಟಿತು. ಪ್ರತಿ ದಿನವೂ ಒಂದೊಂದು ವಿಶೇಷ ವಿಷಯ ಮತ್ತು ವಿವಿಧ ಚಟುವಟಿಕೆಗಳು ಮಕ್ಕಳನ್ನೊಳಗೊಂಡಂತೆ ಆಯೋಜಿಸಲಾಗಿತ್ತು, ಕ್ರೀಡಾದಿನ, ಪರಿಸರ ದಿನ, ಕಾಯಾ೯ಗಾರಗಳು, ನೈಪುಣ್ಯ ಮತ್ತು ಡಿಜಿಟಲ್ ಚಟುವಟಿಕೆಗಳು, ಸಾಂಸ್ಕೖತಿಕ ಕಾಯ೯ಕ್ರಮಗಳು, ಸಸಿ ನೆಡುವಿಕೆ, ತಂತ್ರಜ್ಞಾನದ ಬದಲಾವಣೆಗಳಿಗೆ ತಕ್ಕಂತೆ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಲು ಕಾರ್ಯಾಗಾರಗಳು, ಸ್ಥಳೀಯ ಸಮುದಾಯಗಳೊಂದಿಗೆ, ವಿದ್ಯಾರ್ಥಿಗಳ ಸಾಮಾಜಿಕ-ಭಾವನಾತ್ಮಕ ಸಮಗ್ರಾಭಿವೃದ್ಧಿ. ಚಟುವಟಿಕೆ ಸೇರಿದಂತೆ 7 ದಿನವೂ ವೈವಿಧ್ಯಮಯ ಕಾಯ೯ಕ್ರಮಗಳು ನಡೆದವು ಅಂತೆಯೇ ಕೊಡಗು ವಿದ್ಯಾಲಯದ ವತಿಯಿಂದ ಮಡಿಕೇರಿಯ ಕಾವೇರಿ ಮಕ್ಕಳ ಗೃಹದ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರವನ್ನು ವಿತರಿಸಲಾಯಿತು.ಎಂದು ಶಾಲಾ ಪ್ರಕಟಣೆ ತಿಳಿಸಿದೆ.