ಸುಂಟಿಕೊಪ್ಪ ಆ.8 NEWS DESK : ಸುಂಟಿಕೊಪ್ಪ ವಾಹನ ಚಾಲಕರ ಸಂಘದ 2024-25ನೇ ಸಾಲಿನ ಅಧ್ಯಕ್ಷರಾಗಿ ಕೆ.ವಿ.ಕಿಟ್ಟಣ್ಣ ರೈ, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಐ.ರಿಜ್ವಾನ್ ಆಯ್ಕೆಯಾಗಿದ್ದಾರೆ. ಸಂಘದ ಸಾರ್ವಜನಿಕ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಸುರೇಶ್ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಅಬ್ದುಲ್ಲ (ಅವುಲಕುಟ್ಟಿ), ಸಹಕಾರ್ಯದರ್ಶಿ ಪಿ.ಎಸ್.ರೀನು, ಖಜಾಂಚಿಯಾಗಿ ಅನೀಶ್, ಸಂಘಟನಾ ಕಾರ್ಯದರ್ಶಿಯಾಗಿ ಮುನೀರ್ ಕಂಬಿಬಾಣೆ, ಸಲಹಾ ಸಮಿತಿಗೆ ಸಿ.ಎ.ಬಸಪ್ಪ, ರಾಜ, ವಿನೀಶ್‍ಡಿಸೋಜ, ಇಸ್ಮಾಹಿಲ್(ಕಾಕ್ಕು), ಕೆ.ರವಿ, ಅತೀಕ್, ಸಂದೀಫ್, ಸುರೇಸ, ಅಸೀಸ್, ಅಸ್ಕರ್, ಸೈನುದ್ದೀನ್, ಶಕ್ತಿವೇಲು, ಮೋನು ಅವರನ್ನು ನೇಮಕ ಮಾಡಲಾಯಿತು. ಇದೇ ಸಂದರ್ಭ ಚಾಲಕ ಸಿ.ಎ.ಬಸಪ್ಪ ಅವರನ್ನು ನೂತನ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.









