
ಮಡಿಕೇರಿ ಆ.9 NEWS DESK : ವಯನಾಡು ನೆರೆ ಸಂತ್ರಸ್ತರಿಗೆ ಮಾದಾಪುರದ ಮಲ್ನಾಡ್ ಆಟೋ ಚಾಲಕರು ಮತ್ತು ಮಾಲೀಕರ ಸಂಘದಿಂದ ನೆರವು ನೀಡಲಾಯಿತು. ಮಾದಾಪುರದಿಂದ ಏಳು ಆಟೋದ ಮೂಲಕ 14 ಮಂದಿ ಚಾಲಕರು ತೆರಳಿ ಆಟೋ ಚಾಲಕರು ಮತ್ತು ಗ್ರಾಮಸ್ಥರು ನೀಡಿದ ದಿನಸಿ, ಬಟ್ಟೆ, ಚಪ್ಪಲ್ ಹಾಗೂ ಮಕ್ಕಳ ಕಿಟ್‍ಗಳನ್ನು ವಿತರಿಸಿದರು. ಅಲ್ಲದೆ ಸಂತ್ರಸ್ತರ ಯೋಗ ಕ್ಷೇಮವನ್ನು ವಿಚಾರಿಸಿ ಧೈರ್ಯ ತುಂಬಿದರು. ಈ ಸಂದರ್ಭ ಸಂಘದ ಅಧ್ಯಕ್ಷ ಪಿ.ಎಲ್.ಸುರೇಶ್, ಹೆಚ್.ಎಸ್.ಮಧು, ಸದಸ್ಯರಾದ ರಫಿಕ್, ಸುಶಾಂತ್, ಟಿ.ಜಿ.ಅವಿನಾಶ್, ಆರ್.ಜಿ.ಪ್ರವೀಣ್, ಹರೀಶ್, ಗಿರೀಶ್, ದೇವ್‍ದಾಸ್, ಶಶಿ, ಮನುಕುಮಾರ್, ಆರ್.ಮಂಜುನಾಥ್, ವಿನೋದ್ ಕುಮಾರ್, ಯೋಗೇಶ್ ಹಾಜರಿದ್ದರು.








